ಐಪಿಎಲ್ ಟೂರ್ನಿಗೆ 8 ತಂಡಗಳು ಸಿದ್ಧತೆ ಆರಂಭಿಸಿದೆ. ಫ್ರಾಂಚೈಸಿಗಳು ತಮ್ಮ ಆಟಗಾರರಿಗೆ ನೀಡಬೇಕಾದ ವೇತನದ ಕುರಿತು ಲೆಕ್ಕ ಹಾಕುತ್ತಿದೆ. ಪ್ರತಿ ತಂಡದ ಒಟ್ಟು ಆಟಗಾರರ ಸ್ಯಾಲರಿಗಾಗಿ ಫ್ರಾಂಚೈಸಿ ಮಾಲೀಕರು ಎಷ್ಟು ರೂಪಾಯಿ ವ್ಯಯಿಸಬೇಕು? ಇಲ್ಲಿದೆ ಸಂಪೂರ್ಣ ವಿವರ.

ಬೆಂಗಳೂರು(ಜ.21): ಐಪಿಎಲ್ ಟೂರ್ನಿ ಹತ್ತಿರವಾಗುತ್ತಿದೆ. ಈಗಾಗಲೇ ಹರಾಜಿನಲ್ಲಿ ಆಟಗಾರರನ್ನ ಖರೀದಿಸಿ ಬಲಿಷ್ಠ ತಂಡವನ್ನು ರೂಪಿಸಿದೆ. 2019ರ ಐಪಿಎಲ್ ಟೂರ್ನಿಯಲ್ಲಿ ಯಾರು ಪ್ರಶಸ್ತಿ ಬಾಚಿಕೊಳ್ತಾರೆ ಅನ್ನೋ ಕುತೂಹಲ ಇದೀಗ ಎಲ್ಲರಲ್ಲಿ ಮನೆ ಮಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

ಪ್ರಶಸ್ತಿ ಗೆಲುವಿಗಾಗಿ ಫ್ರಾಂಚೈಸಿಗಳು ಹರಾಜಿನಲ್ಲಿ ಅಳೆದು-ತೂಗಿ ಆಟಗಾರರನ್ನ ಖರೀದಿಸಿದೆ. ಕೋಟಿ ಕೋಟಿ ರೂಪಾಯಿ ನೀಡಿ ಸ್ಟಾರ್ ಆಟಗಾರರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಪ್ರತಿ ಫ್ರಾಂಚೈಸಿ ಆಟಗಾರರಿಗೆ ನೀಡೋ ಒಟ್ಟು ಸ್ಯಾಲರಿ ವಿವರ ಇಲ್ಲಿದೆ.

ಇದನ್ನೂ ಓದಿ: ಬಿಸಿಸಿಐ ಹೇಳಿದ್ದೇನು..? ಕೊಹ್ಲಿ ಬಾಯ್ಸ್ ಮಾಡಿದ್ದೇನು..?

ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆಟಗಾರರ ಒಟ್ಟು ವೇತನ: 80 ಕೋಟಿ
ಆಟಗಾರರ ಸರಾಸರಿ ವೇತನ: 3.33 ಕೋಟಿ

ಮುಂಬೈ ಇಂಡಿಯನ್ಸ್
ಆಟಗಾರರ ಒಟ್ಟು ವೇತನ: 78.95 ಕೋಟಿ
ಆಟಗಾರರ ಸರಾಸರಿ ವೇತನ: 3.16 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್
ಆಟಗಾರರ ಒಟ್ಟು ವೇತನ: 78.85 ಕೋಟಿ
ಆಟಗಾರರ ಸರಾಸರಿ ವೇತನ: 3.15 ಕೋಟಿ

ಕಿಂಗ್ಸ್ ಇಲೆವೆನ್ ಪಂಜಾಬ್
ಆಟಗಾರರ ಒಟ್ಟು ವೇತನ: 78.40 ಕೋಟಿ
ಆಟಗಾರರ ಸರಾಸರಿ ವೇತನ: 3.41 ಕೋಟಿ

ಸೈನ್ ರೈಸರ್ಸ್ ಹೈದರಾಬಾದ್
ಆಟಗಾರರ ಒಟ್ಟು ವೇತನ: 76.70
ಆಟಗಾರರ ಸರಾಸರಿ ವೇತನ: 3.33 ಕೋಟಿ

ಇದನ್ನೂ ಓದಿ: ಪ್ಯಾಟ್ ಕಮ್ಮಿನ್ಸ್ ಬೌಲಿಂಗ್’ನಲ್ಲಿ ನೆಲಕ್ಕುರುಳಿದ ಲಂಕಾ ಬ್ಯಾಟ್ಸ್’ಮನ್..!

ಕೋಲ್ಕತ್ತಾ ನೈಟ್ ರೈಡರ್ಸ್
ಆಟಗಾರರ ಒಟ್ಟು ವೇತನ: 75.95 ಕೋಟಿ
ಆಟಗಾರರ ಸರಾಸರಿ ವೇತನ: 3.62 ಕೋಟಿ

ರಾಜಸ್ಥಾನ ರಾಯಲ್ಸ್
ಆಟಗಾರರ ಒಟ್ಟು ವೇತನ: 74.75 ಕೋಟಿ
ಆಟಗಾರರ ಸರಾಸರಿ ವೇತನ: 2.99 ಕೋಟಿ

ಇದನ್ನೂ ಓದಿ:ಧೋನಿ ಪತ್ನಿ-ಕೊಹ್ಲಿ ಮಡದಿ ಇಬ್ಬರೂ ಕ್ಲಾಸ್‌ಮೇಟ್ಸ್!

ಡೆಲ್ಲಿ ಕ್ಯಾಪಿಟಲ್ಸ್
ಆಟಗಾರರ ಒಟ್ಟು ವೇತನ: 73.80 ಕೋಟಿ
ಆಟಗಾರರ ಸರಾಸರಿ ವೇತನ: 3.08 ಕೋಟಿ