ಆಸ್ಟ್ರೇಲಿಯಾ-ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್’ನ ಎರಡನೇ ದಿನದಾಟದಲ್ಲಿ ಈ ಅವಘಡ ಸಂಭವಿಸಿದ್ದು, 142 ಕಿ.ಮೀ ವೇಗದಲ್ಲಿ ಎಸೆದ ಚಂಡು ನೇರವಾಗಿ ಕರುಣರತ್ನೆ ಕುತ್ತಿಗೆಗೆ ಬಡಿದಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಎಡಗೈ ಬ್ಯಾಟ್ಸ್’ಮನ್ ನೆಲಕ್ಕುರುಳಿದರು.
ಕ್ಯಾನ್’ಬೆರಾ[ಫೆ.02]: ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಬೌನ್ಸರ್ ದಾಳಿಗೆ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್’ಮನ್ ದಿಮುತ್ ಕರುಣರತ್ನೆ ತೀವ್ರವಾಗಿ ಗಾಯಗೊಂಡು ನೆಲಕ್ಕುರುಳಿದರು. ತಕ್ಷಣವೇ ಅವರನ್ನು ಸ್ಟ್ರೆಚ್ಚಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆಸ್ಟ್ರೇಲಿಯಾ-ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್’ನ ಎರಡನೇ ದಿನದಾಟದಲ್ಲಿ ಈ ಅವಘಡ ಸಂಭವಿಸಿದ್ದು, 142 ಕಿ.ಮೀ ವೇಗದಲ್ಲಿ ಎಸೆದ ಚಂಡು ನೇರವಾಗಿ ಕರುಣರತ್ನೆ ಕುತ್ತಿಗೆಗೆ ಬಡಿದಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಎಡಗೈ ಬ್ಯಾಟ್ಸ್’ಮನ್ ನೆಲಕ್ಕುರುಳಿದರು. ತಕ್ಷಣವೇ ಅವರನ್ನು ಆಸಿಸ್ ವೈದ್ಯಕೀಯ ಸಿಬ್ಬಂದಿ ಸ್ಟ್ರೆಚ್ಚಸ್ ಮೂಲಕ ಕರೆದುಕೊಂಡು ಹೋದರು.
ಹೀಗಿತ್ತು ನೋಡಿ ಆ ಕ್ಷಣ..
— Mr Gentleman (@183_264) February 2, 2019
ಕರಣರತ್ನೆ ಕ್ರೀಸ್ ತೊರೆಯುವ ಮುನ್ನ 84 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 46 ರನ್ ಸಿಡಿಸಿದ್ದರು. ಈ ವೇಳೆ ಶ್ರೀಲಂಕಾ ವಿಕೆಟ್ ನಷ್ಟವಿಲ್ಲದೇ 82 ರನ್ ಗಳಿಸಿತ್ತು. ಇದಾದ ಬಳಿಕ ಎರಡನೇ ದಿನದಂತ್ಯಕ್ಕೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 123 ರನ್ ಬಾರಿಸಿದೆ. ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡು 534 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 2, 2019, 4:17 PM IST