Asianet Suvarna News Asianet Suvarna News

ಇಂಡೋ-ಆಫ್ಘಾನ್ ಟೆಸ್ಟ್: ಟೀಂ ಇಂಡಿಯಾ ಮಂದಿದೆ 5 ಸವಾಲು

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ, ಅಜಿಂಕ್ಯ ರಹಾನೆ ನಾಯಕತ್ವದ ಭಾರತ ತಂಡಕ್ಕೆ ಸಾಕಷ್ಟು ಸವಾಲು ತಂದೊಡ್ಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವೋ ಈ ಪಂದ್ಯದಲ್ಲಿ ಭಾರತದ ಮುಂದಿರೋ 5 ಸವಾಲುಗಳು ಯಾವುದು?

5 reasons why Afghanistan could be a threat to India

ಬೆಂಗಳೂರು(ಜೂನ್.10): ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಎರಡು ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಅಭ್ಯಾಸ ಆರಂಭಿಸಿದೆ. ಐಪಿಎಲ್ ಟೂರ್ನಿ ಮುಗಿಸಿರುವ ಟೆಸ್ಟ್ ಪಂದ್ಯ ಆಡುತ್ತಿರುವ ಟೀಂ ಇಂಡಿಯಾಗೆ ಹಲವು ಸವಾಲುಗಳು ಎದುರಾಗಿದೆ.

ಸವಾಲು 1: ರಶೀದ್ ಖಾನ್
ಅಫ್ಘಾನಿಸ್ತಾನ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ದಾಳಿಯನ್ನ ಎದುರಿಸಲು ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಪರದಾಡಿದ್ದಾರೆ. ಐಪಿಎಲ್ ಟೂರ್ನಿಯಾಗಿರಲಿ, ಇತ್ತೀಚೆಗೆ ಮುಕ್ತಾಯಗೊಂಡ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಟಿ-ಟ್ವೆಂಟಿ ಪಂದ್ಯದಲ್ಲೂ ರಶೀದ್ ಸ್ಪಿನ್ ಮೋಡಿಗೆ ಎದುರಾಳಿಗಳು ತತ್ತರಿಸಿದ್ದರು. ಐಪಿಎಲ್ ಟೂರ್ನಿಯಲ್ಲಿ 17 ಪಂದ್ಯದಿಂದ 21 ವಿಕೆಟ್ ಕಬಳಿಸೋ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನ ಫೈನಲ್‌ಗೆ ಕೊಂಡೊಯ್ದಿದ್ದರು. ಬಾಂಗ್ಲಾ ವಿರುದ್ಧದ 3  ಟಿ-ಟ್ವೆಂಟಿ ಪಂದ್ಯಗಳಲ್ಲಿ ರಶೀದ್ 8 ವಿಕೆಟ್  ಕಬಳಿಸಿ, ಕ್ಲೀನ್ ಸ್ವೀಪ್ ಗೆಲುವಿಗೆ ಕಾರಣರಾಗಿದ್ದರು. 

ಟಿ20 ರ‍್ಯಾಂಕಿಂಗ್: ರಶೀದ್ ನಂ.1 ಬೌಲರ್

ಸವಾಲು 2: ಗೆಲುವಿನ ಅಲೆಯಲ್ಲಿ ಅಫ್ಘಾನ್
ಭಾರತದ ಪ್ರವಾಸದಲ್ಲಿ ಬಾಂಗ್ಲಾದೇಶ ವಿರುದ್ದ ಟಿ-ಟ್ವೆಂಟಿ ಸರಣಿ ಆಡಿರುವ ಆಫ್ಘಾನಿಸ್ತಾನ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ. ಯುವ ಹಾಗೂ ಅನುಭವಿ ಆಟಗಾರರೊನ್ನೊಳಗೊಂಡ ಅಫ್ಘಾನಿಸ್ತಾನ ಗೆಲುವಿನ ಅಲೆಯಲ್ಲಿದೆ. ಹೀಗಾಗಿ ಆಫ್ಘಾನ್ ತಂಡದ ಆತ್ಮವಿಶ್ವಾಸ ಇಮ್ಮಡಿಯಾಗಿದೆ.

ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿ ಗೆದ್ದು ದಾಖಲೆ ಬರೆದ ಆಫ್ಘಾನಿಸ್ತಾನ

ಸವಾಲು 3: ಸರ್ಪ್ರೈಸ್ ಪ್ಲೇಯರ್ಸ್
ಅಫ್ಘಾನಿಸ್ತಾನ ತಂಡದಲ್ಲಿ ಅನ್ ಆರ್ಥಡಾಕ್ಸ್ ಪ್ಲೇಯರ್‌ಗಳ ಸಂಖ್ಯೆ ಹೆಚ್ಚಿದೆ. ಬ್ಯಾಟ್ಸ್‌ಮನ್ ಮೊಹಮ್ಮದ್ ಶೆಹಝಾದ್ ಅಚ್ಚರಿ ನೀಡೋದರಲ್ಲಿ ಮುಂದಿದ್ದಾರೆ. ನಾಯಕ ಅಸ್ಗರ್ ಸ್ಟಾನಿಕ್‌ಜೈ ಸೇರಿದಂತೆ ಅಫ್ಘಾನಿಸ್ತಾನ ತಂಡವನ್ನ ಭಾರತ ಲಘುವಾಗಿ ಪರಿಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಸವಾಲು 4: ಪಂದ್ಯಕ್ಕೆ  ಮಳೆ ಭೀತಿ
ಜೂನ್ 14 ರಂದು ಆರಂಭಗೊಳ್ಳಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ. ಏಕೈಕ ಟೆಸ್ಟ್ ಪಂದ್ಯ ಗೆಲ್ಲೋ ಮೂಲಕ ಸರಣಿ ಗೆಲುವಿನ ವಿಶ್ವಾಸದಲ್ಲಿರುವ ಭಾರತ ತಂಡಕ್ಕೆ ಮಳೆ ಅಡ್ಡಿಯಾಗೋ ಸಾಧ್ಯತೆ ಇದೆ. ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ ಅಫ್ಘಾನಿಸ್ತಾನ, ವಿಶ್ವದ ನಂಬರ್.1 ತಂಡದ ವಿರುದ್ಧ ಟ್ರೋಫಿ ಹಂಚಿದ ಸಾಧನೆ ಮಾಡಲಿದೆ. ಇದು ಭಾರತಕ್ಕೆ ತೀವ್ರ ಹಿನ್ನಡೆ ತಂದೊಡ್ಡಲಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವದರ್ಜೆಯ ಸಬ್ ಎರ್ ಸಿಸ್ಟಮ್ ಅಳವಡಿಸಲಾಗಿದೆ. ಹೀಗಾಗಿ  ಸಾಮಾನ್ಯ ಮಳೆ ಬಂದರೂ ಪಂದ್ಯ ನಡೆಯಲಿದೆ. ಆದರೆ  ಎಡೆಬಿಡದೆ ಮಳೆ ಸುರಿದರೆ ಪಂದ್ಯ ನಡೆಯೋದು ಡೌಟ್.

ಚಿನ್ನಸ್ವಾಮಿಯಂತೆ ರಾಜ್ಯದ ಇತರೆ ಕ್ರೀಡಾಂಗಣಗಳಲ್ಲೂ ಆಧುನಿಕ ವ್ಯವಸೆ

ಸವಾಲು 5: ಟೆಸ್ಚ್ ಪಂದ್ಯಕ್ಕೆ ಭಾರತ ಸಜ್ಜಾಗಿಲ್ಲ
ಐಪಿಎಲ್ ಟೂರ್ನಿ ಬಳಿಕ ನೇರವಾಗಿ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ ತಂಡದ ಬಹುತೇಕ ಆಟಗಾರರು ಟೆಸ್ಟ್ ಮಾದರಿಗೆ ಸಂಪೂರ್ಣ ಸಜ್ಜಾಗಿಲ್ಲ. ನಾಯಕ ಅಜಿಂಕ್ಯ ರಹಾನೆ, ಆರ್ ಅಶ್ವಿನ್, ಕೆಎಲ್ ರಾಹುಲ್ ಸೇರಿದ ಟೀಮ್ಇಂಡಿಯಾ ಐಪಿಎಲ್ ಟೂರ್ನಿಯಿಂದ ನೇರವಾಗಿ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ಸೌತ್ಆಫ್ರಿಕಾ ಸರಣಿ ಬಳಿಕ ಟೀಮ್ಇಂಡಿಯಾ ಲಾಂಗ್ ಫಾರ್ಮ್ಯಾಟ್ ಆಡಿಲ್ಲ.  2011 ಹಾಗೂ 2014ರಲ್ಲಿ ಐಪಿಎಲ್ ಬಳಿಕ ನೇರವಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡ  ಭಾರತ ಟೆಸ್ಟ್ ಪಂದ್ಯದಲ್ಲೂ ಸಂಪೂರ್ಣ ಹಿನ್ನಡೆ ಅನುಭವಿಸಿತ್ತು.

Follow Us:
Download App:
  • android
  • ios