ಟಿ20 ರ‍್ಯಾಂಕಿಂಗ್: ರಶೀದ್ ನಂ.1 ಬೌಲರ್

Rashid Khan consolidates his position at top of T20I rankings
Highlights

ರಶೀದ್ 812 ಅಂಕಗಳನ್ನು ಪಡೆದಿದ್ದು, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶದಾಬ್ ಖಾನ್‌ಗಿಂತ 80 ಅಂಕ ಹೆಚ್ಚು ಹೊಂದಿದ್ದಾರೆ. 

ದುಬೈ[ಜೂ.09]: ಐಸಿಸಿ ಟಿ20 ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಆಫ್ಘಾನಿಸ್ತಾನದ ರಶೀದ್ ಖಾನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಗುರುವಾರ ಮುಕ್ತಾಯಗೊಂಡ ಬಾಂಗ್ಲಾ ವಿರುದ್ಧ ಟಿ20 ಸರಣಿಯಲ್ಲಿ ರಶೀದ್ 12 ವಿಕೆಟ್‌ಗಳನ್ನು ಕಬಳಿಸಿದರು.

ಈ ಪ್ರದರ್ಶನದೊಂದಿಗೆ 19 ವರ್ಷದ ಸ್ಪಿನ್ನರ್ 54 ಅಂಕಗಳನ್ನು ಸಂಪಾದಿಸಿದರು. ಸದ್ಯ ರಶೀದ್ 812 ಅಂಕಗಳನ್ನು ಪಡೆದಿದ್ದು, 2ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಶದಾಬ್ ಖಾನ್‌ಗಿಂತ 80 ಅಂಕ ಹೆಚ್ಚು ಹೊಂದಿದ್ದಾರೆ. ತಂಡಗಳ  ರ‍್ಯಾಂಕಿಂಗ್‌ನಲ್ಲಿ ಭಾರತ 3ನೇ ಸ್ಥಾನದಲ್ಲಿದೆ.

 

loader