Asianet Suvarna News Asianet Suvarna News

ವಿಶ್ವ ವಿವಿ ಗೇಮ್ಸ್‌ನಲ್ಲಿ 26 ಪದಕ ಗೆದ್ದ ಭಾರತ; ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ..!

2021ರ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಈ ಬಾರಿ ಭಾರತದ ಶೂಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿ 8 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದ್ದಾರೆ.

31st World University Games Indian athletes return with a record breaking haul of 26 medals kvn
Author
First Published Aug 9, 2023, 10:01 AM IST

ಚೆಂಗ್ಡು(ಆ.09): ಇಲ್ಲಿ ಮಂಗಳವಾರ ಕೊನೆಗೊಂಡ 2021ರ ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಭಾರತ 11 ಚಿನ್ನದ ಪದಕ ಸೇರಿ ಒಟ್ಟು 26 ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇದು ಈ ಹಿಂದಿನ ಎಲ್ಲಾ ಆವೃತ್ತಿಗಳಲ್ಲಿ ಭಾರತ ಗೆದ್ದ ಒಟ್ಟು ಪದಕಗಳಿಗಿಂತ ಹೆಚ್ಚು. ಅಂದರೆ 1959ರಿಂದ ಈವರೆಗೆ ಒಟ್ಟು 18 ಪದಕ ಮಾತ್ರ ಜಯಿಸಿತ್ತು. 2017ರಲ್ಲಿ ಕೇವಲ 01 ಹಾಗೂ 2019ರಲ್ಲಿ 4 ಪದಕ ಗೆದ್ದಿತ್ತು.

ಈ ಬಾರಿ ಭಾರತದ ಶೂಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿ 8 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದ್ದಾರೆ. ಆತಿಥೇಯ ಚೀನಾ (China) 103 ಚಿನ್ನ ಸೇರಿ 178 ಪದಕದೊಂದಿಗೆ ಅಗ್ರಸ್ಥಾನ ಪಡೆದರೆ, 21 ಚಿನ್ನ ಸೇರಿ 93 ಪದಕ ಗೆದ್ದ ಜಪಾನ್ (Japan) ಎರಡನೇ ಸ್ಥಾನ ಪಡೆಯಿತು.

"ಪಾಂಡ್ಯಗೆ ಸಿಗಬೇಕಾದ ಬೆಂಬಲ ಕೋಚ್‌ ದ್ರಾವಿಡ್‌ನಿಂದ ಸಿಕ್ತಿಲ್ಲ": ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ..!

ಪದಕ ವಿಜೇತರನ್ನು ಕೊಂಡಾಡಿದ ಮೋದಿ: 

ಐತಿಹಾಸಿಕ ಪದಕ ಸಾಧನೆ ಮಾಡಿದ ಭಾರತೀಯ ಅಥ್ಲೀಟ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದು, ದೇಶಕ್ಕೆ ಹೆಮ್ಮೆ ತಂದ ಅಥ್ಲೀಟ್‌ಗಳಿಗೆ ಸೆಲ್ಯೂಟ್‌ ಎಂದಿದ್ದಾರೆ. 'ಈವರೆಗೆ ಕೇವಲ 18 ಪದಕ ಗೆದ್ದಿದ್ದ ಭಾರತ, ಈ ಬಾರಿ ಅಭೂತಪೂರ್ವ ಪ್ರದರ್ಶನ ನೀಡಿ 26 ಪದಕ ಗೆದ್ದಿದೆ. ನಿಮ್ಮ ಪ್ರದರ್ಶನ ಭಾರತಕ್ಕೆ ಹೆಮ್ಮೆ. ನೀವು ಇತರ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದೀರಿ' ಎಂದು ಕೊಂಡಾಡಿದ್ದಾರೆ.

ವಿಶ್ವ ಅಥ್ಲೆಟಿಕ್ಸ್‌ ಕೂಟ: ರಾಜ್ಯದ ಮನು, ಮಿಜೊ ಚಾಕೊ ಆಯ್ಕೆ

ನವದೆಹಲಿ: ಆಗಸ್ಟ್‌ 19ರಿಂದ 27ರ ವರೆಗೆ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸವಾಲನ್ನು ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಮುನ್ನಡೆಸಲಿದ್ದಾರೆ. ಮಂಗಳವಾರ ಕ್ರೀಡಾ ಸಚಿವಾಲಯ 28 ಮಂದಿಯ ತಂಡವನ್ನು ಪ್ರಕಟಿಸಿದ್ದು, ಕರ್ನಾಟಕದ ಜಾವೆಲಿನ್‌ ಎಸೆತಗಾರ ಡಿ.ಪಿ. ಮನು (DP Manu), ರಿಲೇ ಓಟಗಾರ ಮಿಜೊ ಚಾಕೊ ಕುರಿಯನ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಕಾಶ್ಮೀರಿ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರ್ಫರಾಜ್ ಖಾನ್..! ಇಲ್ಲಿವೆ ನೋಡಿ ಮದುವೆ ಫೋಟೋಗಳು

ಇನ್ನುಳಿದಂತೆ ಶಾಟ್‌ಫುಟ್ ಪಟು ತೇಜಿಂದರ್ ಪಾಲ್ ಗಾಯದಿಂದಾಗಿ ಕೂಟದಲ್ಲಿ ಸ್ಪರ್ಧಿಸುತ್ತಿಲ್ಲ. ಇನ್ನು ಹೈಜಂಪ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರೂ, ಏಷ್ಯನ್‌ ಗೇಮ್ಸ್‌ನತ್ತ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ತೇಜಸ್ವಿನ್ ಶಂಕರ್ ಕೂಡಾ ವಿಶ್ವ ಕೂಟಕ್ಕೆ ಗೈರಾಗಲು ನಿರ್ಧರಿಸಿದ್ದಾರೆ. ವೇಗದ ನಡಿಗೆ ಪಟು ಪ್ರಿಯಾಂಕ ಗೋಸ್ವಾಮಿ ಸಹ ಹಿಂದೆ ಸರಿದಿದ್ದಾರೆ. ಉಳಿದಂತೆ ಜ್ಯೋತಿ ಯರ್ರಾಜಿ(ಹರ್ಡಲ್ಸ್‌), ಪಾರುಲ್, ಅವಿನಾಶ್(ಸ್ಟೀಪಲ್‌ಚೇಸ್), ಜೆಸ್ವಿನ್‌, ಶ್ರೀಶಂಕರ್(ಲಾಂಗ್ ಜಂಪ್) ಭಾರತದ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌: ಎರಡು ಸ್ಥಾನ ಜಿಗಿದ ಸಿಂಧು

ನವದೆಹಲಿ: ಭಾರತದ ತಾರಾ ಶಟ್ಲರ್ ಪಿ ವಿ ಸಿಂಧು (PV Sindhu) ಬಿಡಬ್ಲ್ಯೂಎಫ್‌ ಬ್ಯಾಡ್ಮಿಂಟನ್ ವಿಶ್ವ ರ‍್ಯಾಂಕಿಂಗ್‌ನ (BWF Rankings) ಮಹಿಳಾ ಸಿಂಗಲ್ಸ್‌ನಲ್ಲಿ 2 ಸ್ಥಾನ ಪ್ರಗತಿ ಸಾಧಿಸಿದ್ದು, 15ನೇ ಸ್ಥಾನಕ್ಕೇರಿದ್ದಾರೆ. ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ (Kidambi Srikanth) 20ನೇ ಸ್ಥಾನಕ್ಕೆ ಕುಸಿದಿದ್ದಾರೆ. 

ಎಚ್‌ ಎಸ್ ಪ್ರಣಯ್ ಹಾಗೂ ಲಕ್ಷ್ಯ ಸೆನ್ (Lakshya Sen) ಕ್ರಮವಾಗಿ 9 ಮತ್ತು 11ನೇ ಸ್ಥಾನದಲ್ಲಿದ್ದಾರೆ. 3 ಸ್ಥಾನ ಜಿಗಿದ ಪ್ರಿಯಾನ್ಯು 28 ಹಾಗೂ 7 ಸ್ಥಾನ ಪ್ರಗತಿ ಕಂಡ ಕರ್ನಾಟಕದ ಮಿಥುನ್‌ ಮಂಜುನಾಥ್ 43ನೇ ಸ್ಥಾನ ಪಡೆದಿದ್ದಾರೆ. ಸಾತ್ವಿಕ್‌-ಚಿರಾಗ್ ಡಬಲ್ಸ್‌ನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

Follow Us:
Download App:
  • android
  • ios