Asianet Suvarna News Asianet Suvarna News

ಗಿಲ್‌ ಮಿಂಚಿನಾಟ, ಭಾರತ ‘ಎ’ ಮೇಲು​ಗೈ

ದಕ್ಷಿಣ ಆಫ್ರಿಕಾ ’ಎ’ ವಿರುದ್ಧ ನಡೆಯುತ್ತಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶುಭ್‌ಮನ್ ಮತ್ತೊಮ್ಮೆ ಮಿಂಚಿದ್ದಾರೆ. ಈಗಾಗಲೇ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿರುವ ಗಿಲ್ ಹರಿಣಗಳ ಪಡೆಯ ವಿರುದ್ಧವೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರೂ ಅಚ್ಚರಿಯಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

2nd unofficial Test  Shubman Gill shines once again against South Africa A
Author
Mysore, First Published Sep 18, 2019, 9:47 AM IST

ಮೈಸೂರು[ಸೆ.18]: ಪ್ರವಾಸಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ದ್ವಿತೀಯ ಅನಧಿಕೃತ ಟೆಸ್ಟ್‌ನಲ್ಲಿ ಶುಭ್‌ಮನ್‌ ಗಿಲ್‌ ಆಕರ್ಷಕ 92 ರನ್‌ ನೆರವಿನಿಂದ ಭಾರತ ‘ಎ’ ಉತ್ತಮ ಆರಂಭ ಪಡೆದುಕೊಂಡಿದೆ. ಮೊದಲ ದಿನದಂತ್ಯಕ್ಕೆ ಭಾರತ ‘ಎ’ 3 ವಿಕೆಟ್‌ ನಷ್ಟಕ್ಕೆ 233 ರನ್‌ ಕಲೆಹಾಕಿತು. 

ರಾಹುಲ್‌ಗೆ ಕೊಕ್, ಗಿಲ್‌ಗೆ ಖುಲಾಯಿಸಿತು ಲಕ್; ಟ್ವಿಟರ್‌ನಲ್ಲಿ ಭರ್ಜರಿ ರೆಸ್ಪಾನ್ಸ್!

ತಿರುವನಂತಪುರಂನಲ್ಲಿ ನಡೆದಿದ್ದ ಅನಧಿಕೃತ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ 90 ರನ್‌ ಗಳಿ​ಸಿದ್ದ ಗಿಲ್‌ ಮತ್ತೊಮ್ಮೆ ಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ​ದಲ್ಲಿ ಸ್ಥಾನ ಪಡೆ​ದಿ​ರುವ ಗಿಲ್‌, ತಮ್ಮ ಮೇಲಿದ್ದ ನಿರೀಕ್ಷೆ ಉಳಿ​ಸಿ​ಕೊ​ಳ್ಳು​ವಲ್ಲಿ ಯಶಸ್ವಿಯಾಗಿದ್ದಾರೆ.

ಡಬಲ್ ಸೆಂಚುರಿ ಬಾರಿಸಿ ಗಂಭೀರ್ ದಾಖಲೆ ಮುರಿದ ಶುಭ್‌ಮನ್ ಗಿಲ್

ಇಲ್ಲಿ ಮಂಗ​ಳ​ವಾರ ಆರಂಭಗೊಂಡ ಪಂದ್ಯ​ದಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ‘ಎ’, ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊಂಡಿತು. ಅಭಿಮನ್ಯು ಈಶ್ವರನ್‌ (5)ಹಾಗೂ ಪ್ರಿಯಾಂಕ್‌ ಪಾಂಚಾಲ್‌ (6) ಪೆವಿಲಿಯನ್‌ ಸೇರಿದಾಗ ಭಾರತ ‘ಎ’ ಮೊತ್ತ 2 ವಿಕೆಟ್‌ ನಷ್ಟಕ್ಕೆ 31 ರನ್‌.

ಮೈಸೂ​ರಲ್ಲಿ ಭಾರತ-ಆಫ್ರಿಕಾ ‘ಎ’ ಟೆಸ್ಟ್‌!

137 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ ನೆರ​ವಿ​ನಿಂದ ಗಿಲ್ 92 ರನ್‌ ಗಳಿಸಿದರು. ಈ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಗಿಲ್‌ ವಿಕೆಟ್‌ ಕಳೆದುಕೊಂಡ ಬಳಿಕ ಭಾರತ ‘ಎ’ ತಂಡಕ್ಕೆ ಕರ್ನಾಟಕ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಹಾಗೂ ನಾಯಕ ವೃದ್ಧಿಮಾನ್‌ ಸಾಹ ಆಸರೆಯಾದರು. ಈ ಜೋಡಿ ಮುರಿಯದ 4ನೇ ವಿಕೆಟ್‌ಗೆ 67 ರನ್‌ ಕಲೆಹಾಕಿತು. ದಿನದಂತ್ಯಕ್ಕೆ ಕರುಣ್‌ 78 ಹಾಗೂ ಸಾಹ 36 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡರು.

ಸ್ಕೋರ್‌:

ಭಾರತ ‘ಎ’ 74 ಓವರಲ್ಲಿ 233/3 

(ಮೊದಲ ದಿನದಂತ್ಯಕ್ಕೆ)
 

Follow Us:
Download App:
  • android
  • ios