ಭಾರತದ ಪ್ರತಿಭಾನ್ವಿತ ಕ್ರಿಕೆಟಿಗ ಶುಭ್‌ಮನ್ ಗಿಲ್  ವೆಸ್ಟ್‌ಇಂಡೀಸ್‌ ‘ಎ’ ವಿರುದ್ಧ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಗಂಭೀರ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. ಇದರ ಜತೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ನಾನು ಅರ್ಹ ಎನ್ನುವುದನ್ನು ತಮ್ಮ ಬ್ಯಾಟ್ ಮೂಲಕವೇ ಸಾಬೀತು ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲದೆ ನೋಡಿ..

ಟರೌಬ(ಆ.10): ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಶುಭ್‌ಮನ್‌ ಗಿಲ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಭಾರತದ ಅತಿಕಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಮಾಜಿ ಎಡಗೈ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದಾರೆ.

ಗಿಲ್ ಕಡೆಗಣನೆ: ಅಸಮಾಧಾನ ಹೊರಹಾಕಿದ ದಾದಾ

ವೆಸ್ಟ್‌ಇಂಡೀಸ್‌ ‘ಎ’ ವಿರುದ್ಧ ಇಲ್ಲಿ ನಡೆದ 3ನೇ ಅನಧಿಕೃತ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ 19 ವರ್ಷದ ಗಿಲ್‌ 250 ಎಸೆತಗಳಲ್ಲಿ ಅಜೇಯ 204 ರನ್‌ ಸಿಡಿಸಿದರು. 2002ರಲ್ಲಿ 20 ವರ್ಷದ ಗೌತಮ್‌ ಗಂಭೀರ್‌, ಜಿಂಬಾಬ್ವೆ ವಿರುದ್ಧ ಬಿಸಿಸಿಐ ಅಧ್ಯಕ್ಷರ ಇಲೆವೆನ್‌ ಪರ 218 ರನ್‌ ಗಳಿಸಿದ್ದು ಈ ವರೆಗಿನ ದಾಖಲೆಯಾಗಿತ್ತು. 

ಗಿಲ್‌ಗಿರುವ 10% ರಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ: ವಿರಾಟ್ ಕೊಹ್ಲಿ!

ವಿಂಡೀಸ್‌ ವಿರುದ್ಧ ಸರಣಿಗೆ ಭಾರತ ತಂಡಕ್ಕೆ ಶುಭ್‌ಮನ್‌ರನ್ನು ಆಯ್ಕೆ ಮಾಡದ್ದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಮುಂದಿನ ತಿಂಗಳು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಸರಣಿಗೆ ಗಿಲ್‌ ಆಯ್ಕೆಯಾಗುವ ಸಾಧ್ಯತೆ ಇದೆ.