ಮೈಸೂರು(ಸೆ.17): ಮಂಗಳವಾರದಿಂದ (ಸೆ.17) ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ 2ನೇ ಹಾಗೂ ಅಂತಿಮ ಅನಧಿಕೃತ ಟೆಸ್ಟ್‌ ಪಂದ್ಯ ನಡೆಯಲಿದೆ. ಮೊದಲ ಪಂದ್ಯ​ದಲ್ಲಿ ಭಾರತ ‘ಎ’ 7 ವಿಕೆಟ್‌ ಜಯ ಸಾಧಿಸಿತ್ತು. 

ಇದನ್ನೂ ಓದಿ: ರಾಹುಲ್‌ಗೆ ಕೊಕ್, ಗಿಲ್‌ಗೆ ಖುಲಾಯಿಸಿತು ಲಕ್; ಟ್ವಿಟರ್‌ನಲ್ಲಿ ಭರ್ಜರಿ ರೆಸ್ಪಾನ್ಸ್!

2 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಹೊಂದಿ​ರುವ ಭಾರತ, ಸರ​ಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರು​ದ್ಧದ ಟೆಸ್ಟ್‌ ಸರ​ಣಿಗೆ ಭಾರತ ತಂಡ​ದಲ್ಲಿ ಸ್ಥಾನ ಪಡೆದ ಶುಭ್‌ಮನ್‌ ಗಿಲ್‌, ಮೊದಲ ಪಂದ್ಯ​ದ​ಲ್ಲಿ ಭಾರತ ‘ಎ’ ತಂಡ​ವನ್ನು ಮುನ್ನ​ಡೆ​ಸಿದ್ದರು. ಈ ಪಂದ್ಯ​ದಲ್ಲಿ ವೃದ್ಧಿ​ಮಾನ್‌ ಸಾಹ ತಂಡ​ದ ನಾಯ​ಕ​ರಾ​ಗಿ​ದ್ದಾರೆ. 

ಇದನ್ನೂ ಓದಿ: ಶುಭ್‌ಮನ್ ಗಿಲ್ ಯಶಸ್ಸಿನ ಹಿಂದೆ ಯುವಿ ’ಕೈವಾಡ’..!

ಮೊದಲ ಪಂದ್ಯ​ದಲ್ಲಿ 90 ರನ್‌ ಗಳಿ​ಸಿದ್ದ ಗಿಲ್‌, ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಆಡುವ ಹನ್ನೊಂದ​ರಲ್ಲಿ ಸ್ಥಾನ ಪಡೆ​ಯುವ ನಿರೀಕ್ಷೆಯಲ್ಲಿ​ದ್ದು, ಬ್ಯಾಟಿಂಗ್‌ ಲಯ ಕಾಯ್ದು​ಕೊ​ಳ್ಳಲು ಎದು​ರು ನೋಡು​ತ್ತಿ​ದ್ದಾರೆ. ರಾಜ್ಯದ ಕರುಣ್‌ ನಾಯರ್‌ ಹಾಗೂ ಕೆ.ಗೌ​ತಮ್‌ ಸಹ ತಂಡದ​ಲ್ಲಿದ್ದು, ಆಕ​ರ್ಷಕ ಪ್ರದ​ರ್ಶ​ನದ ಮೂಲಕ ಆಯ್ಕೆಗಾರರ ಗಮನ ಸೆಳೆ​ಯುವ ವಿಶ್ವಾಸದಲ್ಲಿ​ದ್ದಾರೆ. ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.