ಮೊಹಾಲಿ[ಸೆ. 18]   ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯವನ್ನು ಕೊಹ್ಲಿ ತಮ್ಮ ಅತ್ಯಾಕರ್ಷಕ ಬ್ಯಾಟಿಂಗ್‌ ನಿಂದಲೇ ಗೆಲ್ಲಿಸಿಕೊಂಡಿದ್ದಾರೆ.  ಆದರೆ ಪಂದ್ಯದ ವೇಳೆ ವೀರಾವೇಶದಿಂದ ವರ್ತಿಸಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ.

ಮೊಹಾಲಿಯಲ್ಲಿ ಟಿ20 ಪಂದ್ಯ ನಡೆದಿದ್ದು ಮೊದಲ ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿತು. 150 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 19 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 6 ಚೆಂಡುಗಳಿರುವಂತೆ ಜಯಮಾಲೆ ಕೊರಳಿಗೆ ಹಾಕಿಕೊಂಡಿತು.

#INDvSA 2ನೇ ಟಿ20: ರೋಹಿತ್ ದಾಖಲೆ ಮುರಿದ ಕೊಹ್ಲಿ!

ಆಫ್ರಿಕಾ ಬ್ಯಾಟಿಂಗ್ ವೇಳೆ ಹಾರ್ದಿಕ್ ಪಾಂಡ್ಯ 10ನೇ ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ತೆಂಬಾ ಬವುಮಾ ಮತ್ತು ಡಿ ಕಾಕ್ ಹೆಚ್ಚುವರಿ ರನ್ ಪಡೆದರು. ಇದನ್ನು ನೋಡಿದ ಕೊಹ್ಲಿ ಮೈದಾನದಲ್ಲೇ ಕೋಪಗೊಂಡರು. 

ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಚೆಂಡನ್ನು ಸರಿಯಾಗಿ ಥ್ರೋ  ಮಾಡಲಿಲ್ಲ. ಹಾಗಾಗಿ ಬ್ಯಾಕ್ ಅಪ್ ಆಗಿದ್ದ ಹಾರ್ದಿಕ್ ಪಾಂಡ್ಯ ಕೈಗೆ ಚೆಂಡು ಸಿಗಲಿಲ್ಲ. ಆಫ್ರಿಕಾ ಬ್ಯಾಟ್ಸ್ ಮನ್ ಗಳು ಹೆಚ್ಚುವರಿಯಾಗಿ 1 ರನ್ ಪಡೆದುಕೊಂಡರು. ನಂತರ ಕೈಗೆ ಬಂದ ಚೆಂಡನ್ನು ವಿಕೆಟ್ ಗೆ ಬಡಿದ ಕೊಹ್ಲಿ ಸಿಟ್ಟಿನಿಂದಲೇ ಹೆಜ್ಜೆ ಹಾಕಿದರು.