ಮೊಹಾ​ಲಿ(ಸೆ.18): ವೆಸ್ಟ್‌ಇಂಡೀಸ್‌ ಪ್ರವಾಸವನ್ನು ಯಶ​ಸ್ವಿ​ಯಾಗಿ ಮುಗಿ​ಸಿ​ದ ಭಾರತ ಕ್ರಿಕೆಟ್‌ ತಂಡ, ತವ​ರಿನ ಋುತು​ವನ್ನು ಭರ್ಜರಿಯಾಗಿ ಆರಂಭಿ​ಸಲು ಕಾತ​ರಿ​ಸು​ತ್ತಿದೆ. ದಕ್ಷಿಣ ಆಫ್ರಿಕಾ ವಿರು​ದ್ಧದ ಟಿ20 ಸರ​ಣಿಯ ಮೊದಲ ಪಂದ್ಯ ಮಳೆಗೆ ಬಲಿ​ಯಾದ ಬಳಿಕ, ಬುಧ​ವಾರ ನಡೆ​ಯ​ಲಿ​ರುವ 2ನೇ ಪಂದ್ಯ​ದಲ್ಲಿ ಟೀಂ ಇಂಡಿಯಾ ಗೆಲು​ವು ಸಾಧಿ​ಸುವ ವಿಶ್ವಾಸದಲ್ಲಿದೆ.

2020ರ ಟಿ20 ವಿಶ್ವ​ಕಪ್‌ಗೆ ಸಿದ್ಧತೆ ಆರಂಭಿ​ಸಲಿರುವ ಭಾರತ, ಈಗಾ​ಗಲೇ ತನ್ನ ಯೋಜ​ನೆಗಳ ಬಗ್ಗೆ ಸುಳಿವು ನೀಡಿದೆ. ಇತ್ತೀ​ಚೆಗೆ ನಾಯಕ ವಿರಾಟ್‌ ಕೊಹ್ಲಿ, ಆಟ​ಗಾ​ರ​ರಿಗೆ 4ರಿಂದ 5 ಅವ​ಕಾಶಗಳಷ್ಟೇ ಸಿಗ​ಲಿದೆ. ಅದ​ರಲ್ಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿ ವಿಶ್ವ​ಕಪ್‌ ತಂಡ​ದಲ್ಲಿ ಸ್ಥಾನ ಖಚಿತ ಪಡಿ​ಸಿ​ಕೊ​ಳ್ಳ​ಬೇಕು ಎನ್ನುವ ಸ್ಪಷ್ಟ ಸಂದೇಶ ರವಾ​ನಿ​ಸಿ​ದ್ದರು. ಹೀಗಾಗಿ ಆಟ​ಗಾ​ರರು ಒತ್ತಡದಲ್ಲಿದ್ದು, ಉತ್ತಮ ಪ್ರದ​ರ್ಶನ ತೋರ​ಲೇ​ಬೇ​ಕಾದ ಅನಿ​ವಾ​ರ್ಯತೆಗೆ ಸಿಲು​ಕಿ​ದ್ದಾರೆ.

ಟೀಂ ಇಂಡಿಯಾಗೆ ಭದ್ರತೆ ನೀಡಲು ಚಂಡೀಗಢ ಪೊಲೀಸ್ ನಿರಾಕರಣೆ!

ಪ್ರಮುಖವಾಗಿ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಮೇಲೆ ತಂಡ ವಿಶ್ವಾಸ ಕಳೆದು​ಕೊ​ಳ್ಳು​ತ್ತಿ​ರು​ವಂತೆ ಕಾಣು​ತ್ತಿದೆ. ಪ್ರಧಾನ ಕೋಚ್‌ ರವಿ​ಶಾಸ್ತ್ರಿ, ನೂತನ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌ ಪಂತ್‌ ಬೇಜ​ವಾ​ಬ್ದಾರಿತನದ ಬಗ್ಗೆ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ್ದಾರೆ. ಹೀಗಾಗಿ ಪಂತ್‌ ಮೇಲೆ ಎಲ್ಲರ ಕಣ್ಣಿದೆ.ಯುವ ಸ್ಪಿನ್ನರ್‌ಗಳಾದ ರಾಹುಲ್‌ ಚಹಾರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಮೇಲೆಯೂ ಒತ್ತಡವಿದೆ. ಕುಲ್ದೀಪ್‌ ಯಾದವ್‌ ಹಾಗೂ ಯಜು​ವೇಂದ್ರ ಚಹಲ್‌ರನ್ನು ಹೊರ​ಗಿಟ್ಟು ಈ ಇಬ್ಬ​ರಿಗೆ ಅವ​ಕಾಶ ನೀಡ​ಲಾ​ಗಿದೆ.

ಟೀಂ ಇಂಡಿಯಾದ ಈ ಮೂವರು ಕ್ರಿಕೆಟಿಗರಿಗೆ ಮಾತ್ರ 7 ಕೋಟಿ ಸಂಬಳ!

ವಿಶ್ವಕಪ್‌ ವೇಳೆಗೆ ತನ್ನ ಕೆಳ ಕ್ರಮಾಂಕದ ಬ್ಯಾಟಿಂಗ್‌ ಬಲ ಹೆಚ್ಚಿ​ಸಿ​ಕೊ​ಳ್ಳುವ ಉದ್ದೇಶ ಹೊಂದಿ​ರುವ ಭಾರತ, 8, 9 ಹಾಗೂ 10ನೇ ಕ್ರಮಾಂಕದ ಆಟ​ಗಾ​ರ​ರಿಂದ ಉಪ​ಯುಕ್ತ ರನ್‌ ಕೊಡುಗೆ ನಿರೀಕ್ಷೆ ಮಾಡು​ತ್ತಿದೆ. ಹೀಗಾಗಿ ಮುಂಬ​ರುವ ಸರ​ಣಿ​ಗ​ಳಲ್ಲಿ ಮತ್ತಷ್ಟು ಪ್ರಯೋಗಗಳನ್ನು ಮಾಡುವ ಸಾಧ್ಯತೆ ಇದೆ.

ಇದೇ ವೇಳೆ ಆರಂಭಿ​ಕನ ಸ್ಥಾನಕ್ಕೆ ಶಿಖರ್‌ ಧವನ್‌ ಹಾಗೂ ಕೆ.ಎಲ್‌.ರಾ​ಹುಲ್‌ ನಡುವೆ ಪೈಪೋಟಿ ಮುಂದು​ವ​ರಿ​ಯ​ಲಿದೆ. ಮಧ್ಯಮ ಕ್ರಮಾಂಕ​ದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಮನೀಶ್‌ ಪಾಂಡೆ ನಡುವೆ ಸ್ಪರ್ಧೆ ಇದ್ದು, ಇಬ್ಬ​ರಿಗೂ ಇದು ಮಹ​ತ್ವದ ಸರ​ಣಿ​ ಎನಿ​ಸಿದೆ.

ಆಫ್ರಿ​ಕಾಕ್ಕೆ ಅನು​ಭವದ ಕೊರತೆ: ಹಿರಿಯ ಆಟ​ಗಾ​ರರನ್ನು ಕೈಬಿಟ್ಟು ಟಿ20 ವಿಶ್ವ​ಕಪ್‌ಗೆ ಯುವ ತಂಡ​ವನ್ನು ಕಟ್ಟುವ ದೃಷ್ಟಿ​ಯಿಂದ ದಕ್ಷಿಣ ಆಫ್ರಿಕಾ ಹಲವು ಹೊಸ ಮುಖ​ಗ​ಳಿಗೆ ಸ್ಥಾನ ನೀಡಿದೆ. ಅನು​ಭವದ ಕೊರತೆ ತಂಡ​ವನ್ನು ಕಾಡ​ಲಿದೆ. ಆದರೂ ಕಗಿಸೋ ರಬಾಡ, ಕ್ವಿಂಟನ್‌ ಡಿ ಕಾಕ್‌, ಡೇವಿಡ್‌ ಮಿಲ್ಲರ್‌ರಂತಹ ಆಟ​ಗಾ​ರರ ಏಕಾಂಗಿಯಾಗಿ ಪಂದ್ಯ ಗೆಲ್ಲಿ​ಸುವ ಸಾಮರ್ಥ್ಯ ಹೊಂದಿ​ದ್ದಾರೆ.

ಪಿಚ್‌ ರಿಪೋರ್ಟ್‌

ಮೊಹಾಲಿಯಲ್ಲಿ ಬುಧ​ವಾರ ಮಳೆ ಮುನ್ಸೂ​ಚನೆ ಇಲ್ಲ. ಇಲ್ಲಿನ ಪಿಚ್‌ ಸ್ಪರ್ಧಾ​ತ್ಮಕ ಮೊತ್ತಕ್ಕೆ ಸಾಕ್ಷಿ​ಯಾ​ಗುವ ನಿರೀಕ್ಷೆ ಇದೆ. 2019ರ ಐಪಿ​ಎಲ್‌ನಲ್ಲಿ ಇಲ್ಲಿ ನಡೆದ 7 ಐಪಿ​ಎಲ್‌ ಪಂದ್ಯ​ಗ​ಳ ಮೊದಲ ಇನ್ನಿಂಗ್ಸ್‌ಗಳಲ್ಲಿ ಸರಾ​ಸರಿ 171 ರನ್‌ ದಾಖ​ಲಾ​ಗಿತ್ತು. 7 ಪಂದ್ಯ​ಗ​ಳ ಪೈಕಿ 5ರಲ್ಲಿ ಗುರಿ ಬೆನ್ನ​ತ್ತಿದ್ದ ತಂಡ ಗೆಲುವು ಸಾಧಿ​ಸಿತ್ತು.

ಒಟ್ಟು ಮುಖಾ​ಮುಖಿ: 13

ಭಾರತ: 08

ದ.ಆ​ಫ್ರಿ​ಕಾ: 05

ತಂಡ​ಗಳ ಪಟ್ಟಿ

ಭಾರತ: ವಿರಾಟ್‌ ಕೊಹ್ಲಿ​(​ನಾ​ಯ​ಕ), ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕೃನಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಹಾರ್‌, ಖಲೀಲ್‌ ಅಹ್ಮದ್‌, ದೀಪಕ್‌ ಚಹಾರ್‌, ನವ್‌ದೀಪ್‌ ಸೈನಿ.

ದ.ಆ​ಫ್ರಿ​ಕಾ: ಕ್ವಿಂಟನ್‌ ಡಿ ಕಾಕ್‌ (ನಾ​ಯ​ಕ), ರಾಸ್ಸಿ ವಾನ್‌ ಡುಸ್ಸೆನ್‌, ತೆಂಬ ಬವುಮಾ, ಜೂನಿ​ಯರ್‌ ಡಾಲಾ, ಬೊರ್ನ್‌ ಫೆäಟ್ರ್ಯುನ್‌, ಬ್ಯೂರನ್‌ ಹೆಂಡ್ರಿಕ್ಸ್‌, ರೀಜಾ ಹೆಂಡ್ರಿಕ್ಸ್‌, ಡೇವಿಡ್‌ ಮಿಲ್ಲರ್‌, ಏಂರಿಚ್‌ ನಾರ್ಟೆ, ಆ್ಯಂಡಿಲೆ ಫೆಲು​ಕ್ವಾಯೋ, ಡ್ವೇನ್‌ ಪ್ರಿಟೋ​ರಿ​ಯಸ್‌, ಕಗಿಸೋ ರಬಾಡ, ತಬ್ರೇಜ್‌ ಶಮ್ಸಿ, ಜಾಜ್‌ರ್‍ ಲಿಂಡೆ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1