ಟೀಂ ಇಂಡಿಯಾಗೆ ಭದ್ರತೆ ನೀಡಲು ಚಂಡೀಗಢ ಪೊಲೀಸ್ ನಿರಾಕರಣೆ!
ಧರ್ಮಶಾಲಾ ಪಂದ್ಯ ರದ್ದಾದ ಬಳಿಕ 2ನೇ ಟಿ20 ಪಂದ್ಯಕ್ಕಾಗಿ ಭಾರತ ಹಾಗೂ ಸೌತ್ ಆಫ್ರಿಕಾ ತಂಡ ಮೊಹಾಲಿಗೆ ಆಗಮಿಸಿದೆ. ಆದರೆ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಉಭಯ ದೇಶದ ಕ್ರಿಕೆಟಿಗರಿಗೆ ಆತಂಕ ಎದುರಾಗಿದೆ. ಕಾರಣ ಭದ್ರತೆ ನೀಡಲು ಯಾವುದೇ ಪೊಲೀಸರು ಮುಂದೆ ಬಂದಿಲ್ಲ.
ಮೊಹಾಲಿ(ಸೆ.17): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ. ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದ ಮೊದಲ ಚುಟುಕು ಪಂದ್ಯ ಮಳೆಗೆ ಆಹುತಿಯಾಗಿತ್ತು. ಇದು ಬಿಸಿಸಿಐ ಗೆ ಅಪಾರ ನಷ್ಟ ತಂದೊಡ್ಡಿದೆ. ಇದೀಗ 2ನೇ ಪಂದ್ಯಕ್ಕಾಗಿ ಪಂಜಾಬ್‌ನ ಮೊಹಾಲಿಗೆ ಆಗಮಿಸಿದ ವಿರಾಟ್ ಕೊಹ್ಲಿ ಸೈನ್ಯಕ್ಕೆ ಭದ್ರತೆ ನೀಡಲು ಚಂಡೀಗಢ ಪೊಲೀಸರು ನಿರಾಕರಿಸಿದ್ದಾರೆ.
ಇದನ್ನೂ ಓದಿ: #INDvSA: ಬೆಂಗ್ಳೂರು ಟಿ20 ಟಿಕೆಟ್‌ಗೆ ಭಾರೀ ಬೇಡಿಕೆ!
ಭಾರತದ ಇತರ ನಗರಗಳಿಗಿಂತ ಮೊಹಾಲಿಯಲ್ಲಿ ಕ್ರಿಕೆಟಿಗರಿಗೆ ಹೆಚ್ಚಿನ ಭದ್ರತೆ ಅವಶ್ಯಕತೆ ಇದೆ. ಆದರೆ ಧರ್ಮಶಾಲಾದಿಂದ ಮೊಹಾಲಿಗೆ ಬಂದಿಳಿದ ಟೀಂ ಇಂಡಿಯಾ ಹಾಗೂ ಸೌತ್ ಆಫ್ರಿಕಾ ಕ್ರಿಕೆಟಿಗರಿಗೆ ಚಂಡಿಗಢ ಪೋಲೀಸರು ನಿರಾಕರಿಸಿದ್ದಾರೆ. ಚಂಡೀಗಡ ಪೊಲೀಸರಿಗೆ ಬಿಸಿಸಿಐ 9 ಕೋಟಿ ರೂಪಾಯಿ ಬಾಕಿ ಉಳಿಸಿದೆ. ಇದಕ್ಕಾಗಿ ಪೊಲೀಸರು ಭದ್ರತೆ ನೀಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಭಾರತ vs ಸೌತ್ ಆಫ್ರಿಕಾ ಮೊದಲ ಟಿ20 ಪಂದ್ಯ ರದ್ದು!
ಪೊಲೀಸ್ ಹಾಗೂ ಬಿಸಿಸಿಐ ನಡುವಿನ ಜಟಾಪಟಿಯಲ್ಲಿ ಟೀಂ ಇಂಡಿಯಾ ಹಾಗೂ ಸೌತ್ ಆಫ್ರಿಕಾ ಆಟಗಾರರು ಆತಂಕ ಅನುಭವಿಸುಂತಾಯಿತು. ಯಾವುದೇ ಭದ್ರತೆ ಇಲ್ಲದೆ ಆಟಗಾರರು ವಿಮಾನ ನಿಲ್ದಾಣದಿಂದ ಹೊಟೆಲ್‌ಗೆ ತೆರಳಿದ್ದಾರೆ. ಅದೃಷ್ಠವಶಾತ್ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.