ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆ ಮಹಿಳೆ, ಮುಂಬೈನ ಹೋಟೆಲ್ ಒಂದರಲ್ಲಿ ನಡೆದ ಘಟನೆ ಹಾಗೂ ಈ ಹಿಂದೆ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಸಂಗತಿಗಳ ಕುರಿತು ಬರೆದುಕೊಂಡಿದ್ದಾರೆ.

ನವದೆಹಲಿ[ಅ.11]: ಭಾರತದ ವಿಮಾನದ ಸಹಾಯಕಿಯೊಬ್ಬರು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಈ ಮೂಲಕ ‘ಮೀ ಟೂ’ ಆಂದೋಲನ ಸೇರಿದ್ದಾರೆ. 

ಇದನ್ನು ಓದಿ: ಮೋದಿ ಸಂಪುಟಕ್ಕೂ ತಟ್ಟಿದ #MeToo: ಯೂ ಟೂ ಮಿನಿಸ್ಟರ್?

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಆ ಮಹಿಳೆ, ಮುಂಬೈನ ಹೋಟೆಲ್ ಒಂದರಲ್ಲಿ ನಡೆದ ಘಟನೆ ಹಾಗೂ ಈ ಹಿಂದೆ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಸಂಗತಿಗಳ ಕುರಿತು ಬರೆದುಕೊಂಡಿದ್ದಾರೆ.

ಇದನ್ನು ಓದಿ: ರಘು ದೀಕ್ಷಿತ್‌ಗೂ ತಟ್ಟಿದ ’ಮೀ ಟೂ’ ಬಿಸಿ

ರಣತುಂಗ, ತಮ್ಮ ಸೊಂಟವನ್ನು ಹಿಡಿದು ಎಳೆದಿದ್ದರು. ಅಲ್ಲಿಂದ ತಪ್ಪಿಸಿಕೊಂಡು ರಿಸೆಪ್ಷನ್‌ಗೆ ಓಡಿದೆ. ರಣತುಂಗ ವರ್ತನೆಯ ಕುರಿತು ಅಲ್ಲಿನ ಸಿಬ್ಬಂದಿಗೆ ತಿಳಿಸಿದ್ದೆ. ಆದರೆ ಹೋಟೆಲಿನವರು ಇದು ನಿಮ್ಮ ವೈಯಕ್ತಿಕ ವಿಷಯ ಎಂದು ಹೇಳಿ ಜಾರಿಕೊಂಡಿದ್ದರು ಎಂದು ಮಹಿಳೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ