ಶಿವಮೊಗ್ಗ [ನ.01]: ಸಾಗರ ತಾಲೂಕಿನಲ್ಲಿ ಹಾದು ಹೋಗಿರುವಂತಹ ರೈಲ್ವೇ ಮಾರ್ಗದ ತಾಂತ್ರಿಕ ಪರಿಶೀಲನೆ ಕಾರ್ಯ ಅ.30 ರಿಂದ ನ.6 ರವರೆಗೆ ವಿವಿಧ ಲೆವೆಲ್‌ ಕ್ರಾಸ್‌ಗಳಲ್ಲಿ ನಡೆಯಲಿದೆ. ರಸ್ತೆ ವಾಹನ ಸಂಚಾರಕ್ಕೆ ತೊಡಕಾಗಲಿದ್ದು, ವಾಹನ ಸವಾರರು ಇಲಾಖೆಯಿಂದ ಸೂಚಿಸಲಾದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನ.1ರ ಬೆ.8 ರಿಂದ ಸಂಜೆ 6.30ರ ವರೆಗೆ ಬಾಳೆಗುಂಡಿ ರಸ್ತೆಯಲ್ಲಿ ಹಾದುಹೋಗಿರುವ ಲೆವೆಲ್‌ ಕ್ರಾಸ್‌ ಸಂಖ್ಯೆ 121ರ ಪರಿಶೀಲನೆ ಕಾರ್ಯ ನಡೆಯಲಿದ್ದು ವಾಹನ ಸವಾರರು ಮಾರ್ಗ-1ರ ಉಳ್ಳೂರು- ಕಾಸ್ಪಾಡಿ- ಅಡ್ಡೇರಿ- ಬಾಳೆಗುಂಡಿ-ನೀಚಡಿ- ತ್ಯಾಗರ್ತಿ-ದೊಡ್ಡಬೈಲ್‌, ಬಾಳೆಗುಂಡಿ, ಮಾರ್ಗ-2ರ ತ್ಯಾಗರ್ತಿ ಕ್ರಾಸ್‌-ಎಲ್‌.ಸಿ 126-ಬೊಮಟ್ಟಿ- ತ್ಯಾಗರ್ತಿ- ಬಾಳೆಗುಂಡಿ ಪರ್ಯಾಯ ಮಾರ್ಗವಾಗಿ ಸಾಗಬೇಕು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನ.2ರ ಬೆ.8 ರಿಂದ ಸಂ.6.30ರ ವರೆಗೆ ತ್ಯಾಗರ್ತಿ ರಸ್ತೆಯಲ್ಲಿ ಹಾದು ಹೋಗಿರುವ ಎಲ್‌.ಸಿ 126 ಮಾರ್ಗದ ಪರಿಶೀಲನೆ ನಡೆಯಲಿದ್ದು ವಾಹನ ಸವಾರರು ಮಾರ್ಗ-1 (ಸೊರಬ ರಸ್ತೆ ಮೂಲಕ) ಸಾಗರ-ಕಲಸೆ- ಬೊಮ್ಮತ್ತಿ-ತ್ಯಾಗರ್ತಿ, ಮಾರ್ಗ-2, ರಾಷ್ಟ್ರೀಯ ಹೆದ್ದಾರಿ- 206ರ ಮೂಲಕ ಉಳ್ಳೂರು-ಕಾಸ್ಪಡಿ- ಅಡ್ಡೇರಿ-ಬಾಳೆಗುಂಡಿ -ನೀಚಡಿ-ತ್ಯಾಗರ್ತಿ ಮಾರ್ಗ -3ರ, ಬಳಸಗೋಡು-ಮಂಚಾಲೆ -ಬೊಮ್ಮಟ್ಟಿ-ತ್ಯಾಗರ್ತಿ ಮಾರ್ಗವಾಗಿ ಸಂಚರಿಸುವುದು.

ನ.3ರ ರಾತ್ರಿ.8 ರಿಂದ ನ.4ರ ಬೆ.7ರ ವರೆಗೆ ಬೈಪಾಸ್‌ ರಸ್ತೆಯಲ್ಲಿ ಹಾದುಹೋಗಿರುವ ಎಲ್‌ಸಿ 129 ಮಾರ್ಗ-1 ರಾಷ್ಟ್ರೀಯ ಹೆದ್ದಾರಿ- 2016ರ ಮೂಲಕ ಸಿಗಂದೂರು ಕ್ರಾಸ್‌- ಸೊರಬ ರಸ್ತೆ, ಮಾರ್ಗ-2ರ ಬೈಪಾಸ್‌-ಸೊರಬ ರಸ್ತೆ-ಎಲ್‌.ಸಿ130ಬಿ ಮೂಲಕ ಸಂಚರಿಸುವುದು.

ನ.5ರ ರಾತ್ರಿ 8 ರಿಂದ ನ.6ರ ಬೆಳಗ್ಗೆ 7 ಗಂಟೆವರೆಗೆ ಸೊರಬ ರಸ್ತೆಯಲ್ಲಿ ಹಾದುಹೋಗಿರುವ ಎಲ್‌ಸಿ-130ಬಿ ಮಾರ್ಗ-1ರ ಬೈಪಾಸ್‌-ಕೆಳದಿ ಚೆನ್ನಮ್ಮ ಸರ್ಕಲ್‌- ಅಣಲೆಕೊಪ್ಪ- ಆರ್‌.ಪಿ.ರಸ್ತೆ, ಮಾರ್ಗ-2ರ ವೆಂಕಟರಮಣ ದೇವಸ್ಥಾನದ ರಸ್ತೆ- ಎಲ್‌.ಸಿ.132- ಚೆನ್ನಮ್ಮ ವೃತ್ತ-ಸೊರಬ ರಸ್ತೆ ಮಾರ್ಗವಾಗಿ ಸಂಚರಿಸುವುದು. ಈ ತಾತ್ಕಾಲಿಕ ಮಾರ್ಗ ಬದಲಾವಣೆಗೆ ಸಾರ್ವಜನಿಕರು ರೈಲ್ವೆ ಇಲಾಖೆ ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಯೊಡನೆ ಸಹಕರಿಸುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.