MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಖಮೇನಿ ನಮ್ಮ ತಂದೆಗಿಂತಲೂ ಹೆಚ್ಚು; ಎಷ್ಟು ಜನ ಸಾಯಿಸ್ತಾರೋ ಸಾಯಿಸ್ಲಿ, ಒಂದೊಂದು ಮನೇಲಿ 100 ಮಕ್ಕಳು ಹುಟ್ಟಿಸ್ತೇವೆ!

ಖಮೇನಿ ನಮ್ಮ ತಂದೆಗಿಂತಲೂ ಹೆಚ್ಚು; ಎಷ್ಟು ಜನ ಸಾಯಿಸ್ತಾರೋ ಸಾಯಿಸ್ಲಿ, ಒಂದೊಂದು ಮನೇಲಿ 100 ಮಕ್ಕಳು ಹುಟ್ಟಿಸ್ತೇವೆ!

ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಹತ್ಯೆಯನ್ನು ಖಂಡಿಸಿ ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ, 'ಒಂದೊಂದು ಮನೇಲಿ 100 ಮಕ್ಕಳನ್ನು ಹುಟ್ಟಿಸುತ್ತೇವೆ, ಆದರೆ ಶರಣಾಗುವುದಿಲ್ಲ' ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 Min read
Author : Sathish Kumar KH
Published : Mar 02 2026, 09:47 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಶಿವಮೊಗ್ಗ (ಮಾ.02): ಇರಾನ್‌ನ ಸುಪ್ರೀಂ ನಾಯಕ ಖಮೇನಿ ಅವರ ಹತ್ಯೆಯನ್ನು ನಾವು ಸಹಿಸುವುದಿಲ್ಲ. ಅವರು ಎಷ್ಟು ಜನರನ್ನು ಸಾಯಿಸುತ್ತಾರೋ ಸಾಯಿಸಲಿ, ನಾವು ಶರಣಾಗುವ ಮಾತೇ ಇಲ್ಲ. ರಕ್ತದಲ್ಲಿ ಶಹೀದ್ (ಬಲಿದಾನ) ಆಗುವ ಗುಣವಿದೆ. ಒಂದೊಂದು ಮನೆಯಿಂದ ನಾವು 100 ಮಕ್ಕಳನ್ನು ಹುಟ್ಟಿಸುತ್ತೇವೆ. ನಾವು ಹುಸೇನಿಯಾಗಿ ಬದುಕುತ್ತೇವೆ ಮತ್ತು ಹುಸೇನಿಯಾಗಿಯೇ ಸಾಯುತ್ತೇವೆ' ಎಂದು ಶಿವಮೊಗ್ಗದಲ್ಲಿ ಪ್ರತಿಭಟನಾ ನಿರತ ಮಹಿಳೆಯೊಬ್ಬರು ಖಮೇನಿ ಹತ್ಯೆ ಖಂಡಿಸಿ ಆಕ್ರೋಶಭರಿತ ಹೇಳಿಕೆ ನೀಡಿದರು.

25
Image Credit : Asianet News

ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ಮಾಡಿ ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ನಗರದಲ್ಲಿ ಶಿಯಾ ಮುಸ್ಲಿಂ ಸಮುದಾಯದವರಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

Related Articles

Related image1
ಚಿಕ್ಕಬಳ್ಳಾಪುರ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ
Related image2
ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ?: ಇಲ್ಲಿದೆ ಹಲವು ಕಾರಣ
35
Image Credit : Asianet News

100 ಮಕ್ಕಳನ್ನು ಹುಟ್ಟಿಸುತ್ತೇವೆ, ಸೋಲೊಪ್ಪಿಕೊಳ್ಳೋದಿಲ್ಲ:

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮಹಿಳೆ ಸಾನಿಯಾ ಜಹರಾನ್ ಅತ್ಯಂತ ಭಾವನಾತ್ಮಕವಾಗಿ ಮತ್ತು ಆಕ್ರೋಶಭರಿತವಾಗಿ ಮಾತನಾಡಿದರು. 'ನಮಗೆ ನ್ಯಾಯ ಬೇಕು, ನಮ್ಮ ಸುಪ್ರೀಂ ನಾಯಕ ಖಮೇನಿಯನ್ನು ಹತ್ಯೆ ಮಾಡಲಾಗಿದೆ. ಅವರು ಯಾವುದೇ ಭೇದಭಾವ ಮಾಡುತ್ತಿರಲಿಲ್ಲ, ಫ್ಯಾಲೆಸ್ತೀನ್ ಪರವಾಗಿ ಏಕಾಂಗಿಯಾಗಿ ನಿಂತಿದ್ದರು. ಅವರಿಗಾಗಿ ನಾವು ಜೀವ ಕೊಡಲೂ ಸಿದ್ಧರಿದ್ದೇವೆ. 

ಅವರು (ಇಸ್ರೇಲ್ ಮತ್ತು ಅಮೇರಿಕಾ) ಎಷ್ಟು ಜನರನ್ನು ಸಾಯಿಸುತ್ತಾರೋ ಸಾಯಿಸಲಿ, ನಾವು ಶರಣಾಗುವ ಮಾತೇ ಇಲ್ಲ. ರಕ್ತದಲ್ಲಿ ಶಹೀದ್ (ಬಲಿದಾನ) ಆಗುವ ಗುಣವಿದೆ. ಒಂದೊಂದು ಮನೆಯಿಂದ ನಾವು 100 ಮಕ್ಕಳನ್ನು ಹುಟ್ಟಿಸುತ್ತೇವೆ. ನಾವು ಹುಸೇನಿಯಾಗಿ ಬದುಕುತ್ತೇವೆ ಮತ್ತು ಹುಸೇನಿಯಾಗಿಯೇ ಸಾಯುತ್ತೇವೆ' ಎಂದು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಹರಿಹಾಯ್ದರು.

45
Image Credit : Asianet News

ಜಿಲ್ಲಾಧಿಕಾರಿ ಕಚೇರಿ ಮುಂದೆ ಹೈವೋಲ್ಟೇಜ್ ಪ್ರತಿಭಟನೆ

ಅಂಜುಮನ್-ಎ-ಫೈಜಾನ್-ಎ-ಹುಸೇನಿ ಸಂಘಟನೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಶಿಯಾ ಧರ್ಮಗುರುಗಳು ಸೇರಿದಂತೆ ನೂರಾರು ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು. ಇರಾನ್ ಮೇಲೆ ಅಮೆರಿಕ (US) ಮತ್ತು ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಗಳನ್ನು ಪ್ರತಿಭಟನಾಕಾರರು ಒಕ್ಕೊರಲಿನಿಂದ ಖಂಡಿಸಿದರು. 'ನಮಗೆ ನಮ್ಮ ತಂದೆಗಿಂತಲೂ ಖಮೇನಿಯೇ ಮುಖ್ಯವಾಗಿದ್ದರು' ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಇಸ್ರೇಲ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

55
Image Credit : Asianet News

ಭಾರತ ಸರ್ಕಾರ ಮಧ್ಯಪ್ರವೇಶಿಸಲಿ

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗಬೇಕು ಮತ್ತು ಅಮಾಯಕರ ಹತ್ಯೆ ನಿಲ್ಲಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಈ ವಿಚಾರದಲ್ಲಿ ಭಾರತ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಶಾಂತಿ ಮಾತುಕತೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಜೈಘೋಷಗಳು ಮೊಳಗಿದವು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಶಿವಮೊಗ್ಗ
ಇರಾನ್
ಕೊಲ್ಲಿ ಯುದ್ಧ

Latest Videos
Recommended Stories
Recommended image1
ಸಾಲ ಮರುಪಾವತಿಯಲ್ಲಿ ದೇಶದಲ್ಲಿಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ, ಇದು ಕರಾವಳಿಗರ ಪ್ರಾಮಾಣಿಕತೆ
Recommended image2
ಕರಡಿ ದಾಳಿಗೆ ಕುರಿಗಾಹಿ ಓಬಣ್ಣ ಸಾವು; ರೊಚ್ಚಿಗೆದ್ದ ಜನರಿಂದ ದೊಣ್ಣೆಯ ಹೊಡೆತ ತಿಂದು ಪ್ರಾಣಬಿಟ್ಟ ಜಾಂಬವಂತ!
Recommended image3
ತನಿಖೆ ಮಾಡಿದ ಪೊಲೀಸ್ ಅಧಿಕಾರಿಯನ್ನೇ ಆರೋಪಿಯನ್ನಾಗಿ ಮಾಡಿ: ಕೋರ್ಟ್‌ನಲ್ಲಿ ವಿಚಿತ್ರ ಬೇಡಿಕೆಯಿಟ್ಟ ನಟ ದರ್ಶನ್ ಸಹಚರ!
Related Stories
Recommended image1
ಚಿಕ್ಕಬಳ್ಳಾಪುರ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ
Recommended image2
ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ?: ಇಲ್ಲಿದೆ ಹಲವು ಕಾರಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved