Muslims Traders Boycott: ಕರಾವಳಿಯಿಂದ ಶಿವಮೊಗ್ಗಕ್ಕೂ ಹಬ್ಬಿತು ನಿರ್ಬಂಧದ ಕಿಚ್ಚು

  • ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಇಲ್ಲ
  • ಶಿವಮೊಗ್ಗದ ಕೋಟೆ ಮಾರಿಕಾಂಬಾ ಜಾತ್ರೆಯ ಸ್ಟಾಲ್ ಹಾಕಲು ಮುಸ್ಲಿಂರಿಗೆ ಅವಕಾಶ ಇಲ್ಲ
  • ಜಾತ್ರೆಯ ಅಂಗಡಿ ಹಾಕುವ ಟೆಂಡರ್ ಹಿಡಿದ ಭಜರಂಗದಳ ಯುವಕರು
  • ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂಮರು ಅಂಗಡಿ ಬಂದ್ ಮಾಡಿದ್ದಕ್ಕೆ ಪ್ರತಿಕಾರ
Shivamogga  decided to Boycott  Muslims Traders  for Kote Marikamba Jatra gow

ವರದಿ : ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ

ಶಿವಮೊಗ್ಗ(ಮಾ.23): ಶಿವಮೊಗ್ಗದ (Shivamogga) ಪ್ರಸಿದ್ಧ ಕೋಟೆ ಮಾರಿಕಾಂಬಾ ಜಾತ್ರೆಯ (Kote Marikamba Festival) ಸ್ಟಾಲ್ ಹಾಕಲು ಮುಸ್ಲಿಂರಿಗೆ (Muslims) ಅವಕಾಶ ನೀಡೊಲ್ಲ ಎಂದು ಜಾತ್ರೆಯ ಅಂಗಡಿ ಹಾಕುವ ಟೆಂಡರ್ ಭಜರಂಗದಳ (Bajrang Dal) ಯುವಕರು ಹಿಡಿದಿದ್ದಾರೆ. ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಇಲ್ಲ ಎಂದು ಕರಾವಳಿಯಲ್ಲಿ ಶುರುವಾಗಿ ನಿರ್ಬಂಧದ ಕಿಚ್ಚು ಮಲೆನಾಡಿನ ಶಿವಮೊಗ್ಗಕ್ಕೂ ಹಬ್ಬಿದೆ. ಹಿಜಾಬ್ ಸಂಘರ್ಷದ ನಂತರ ಕರಾವಳಿಯ ಮತ್ತೊಂದು ಕಿಚ್ಚು ಮಲೆನಾಡಿನಲ್ಲಿ ಕಿಡಿಯನ್ನು ಹಚ್ಚಿದೆ. 

ಎರಡು ವರ್ಷಕ್ಕೊಮ್ಮೆ ನಡೆಯುವ ಶಿವಮೊಗ್ಗದ ಶಕ್ತಿ ದೇವತೆ ಮಾರಿಕಾಂಬಾ ಜಾತ್ರೆ ಅದ್ದೂರಿಯಾಗಿ ಆರಂಭಗೊಂಡಿದೆ.  ಮಾ. 22 ರಿಂದ 26 ರವರೆಗೆ ಜಾತ್ರಾ ಮಹೋತ್ಸವ ಜರುಗಲಿದ್ದು 5 ದಿನಗಳ ಕಾಲ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದೆ. ಮಾರಿಕಾಂಬಾ ಜಾತ್ರೆಯ ಸ್ಟಾಲ್ ಹಾಕಲು ಮುಸ್ಲಿಂರಿಗೆ ಅವಕಾಶ ಇಲ್ಲ ಎಂದು ಜಾತ್ರೆಯ ಅಂಗಡಿ ಹಾಕುವ ಟೆಂಡರ್ ಭಜರಂಗದಳ ಯುವಕರು 9 ಲಕ್ಷದ 1001 ರೂ ಗೆ ಟೆಂಡರ್ ಹಿಡಿದು ಸ್ಟಾಲ್ ಗಳನ್ನು ಹಾಕಿದ್ದಾರೆ. ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂಮರು ಅಂಗಡಿ ಬಂದ್ ಮಾಡಿದ್ದಕ್ಕೆ ಪ್ರತಿಕಾರವಾಗಿ ಹಿಂದೂಪರ ಸಂಘಟನೆಗಳು ತಮ್ಮ ಆಕ್ರೋಶವನ್ನು ಹೊರ ಹಾಕಿವೆ.

ಶಿವಮೊಗ್ಗದಲ್ಲಿ ಹಿಜಾಬ್ ಸಂಘರ್ಷದ ನಂತರ ಹಿಂದೂಪರ ಸಂಘಟನೆಯ ಯುವಕ ಹರ್ಷನ ಕಗ್ಗೊಲೆ ಶಿವಮೊಗ್ಗದಲ್ಲಿ ಕೋಮು ದ್ವೇಷದ ವಾತಾವರಣಕ್ಕೆ ನಾಂದಿ ಹಾಡಿತ್ತು. ತದನಂತರ ಹಿಜಾಬ್ ವಿಷಯದಲ್ಲಿ ರಾಜ್ಯದ ಹೈಕೋರ್ಟ್​ ನೀಡಿದ ತೀರ್ಪನ್ನು ವಿರೊಧಿಸಿ ಮುಸ್ಲಿಂ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ತಮ್ಮ ತೀರ್ಪಿಗೆ ವಿರೋಧ ವ್ಯಕ್ತ ಪಡಿಸಿದ್ದರು. ಇದು ಹಿಂದೂಪರ ಸಂಘಟನೆಗಳನ್ನು ಕೆರಳಿಸಿದ್ದು ಅದಕ್ಕೆ ಪ್ರತೀಕಾರ ಎಂಬಂತೆ ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಎಂದು ನಿರ್ಭಂಧ ಹೇರಿದ್ದಾರೆ. 

Bank Strike ಬ್ಯಾಂಕ್ ನಲ್ಲಿ ಕೆಲಸ ಕಾರ್ಯಗಳಿದ್ದರೆ ಈ ವಾರದಲ್ಲೇ ಮುಗಿಸಿಕೊಳ್ಳಿ

ಕೋಟೆ ಮಾರಿಕಾಂಬಾ ಜಾತ್ರೆಯ ಸ್ಟಾಲ್ ಟೆಂಡರ್ ಹಿಡಿದಿದ್ದ ಚಿನ್ನಪ್ಪ ಎಂಬುವವರು ಮುಸ್ಲಿಂ ವ್ಯಾಪಾರಸ್ಥರಿಗೆ ನೀಡಲು ಮುಂದಾಗಿದ್ದರು. ಇದನ್ನು ವಿರೋಧಿಸಿ ಜಾತ್ರಾ ಸಮಿತಿಯ ಜೊತೆಗೆ ಚರ್ಚಿಸಿ ಭಜರಂಗ ,ವಿಹೆಚ್ ಪಿ ಸಂಘಟನೆಯ ನೇತೃತ್ವದಲ್ಲಿ 9 ಲಕ್ಷ ರೂ. ಗಳಿಗೆ ಟೆಂಡರ್ ಪಡೆದು ಹಿಂದೂ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಲಾಗಿದೆ.   

 ಈ ಮಧ್ಯೆ ಕೋಟೆ ರಸ್ತೆಯ ಗದ್ದುಗೆಯಲ್ಲಿ 14 ಅಡಿ ಎತ್ತರದ ಮಾರಿಕಾಂಬ ದೇವಿಗೆ ನಾಲ್ಕು ರೇಷ್ಮೆ ಸೀರೆಗಳನ್ನು ಬಳಸಿ ಶೃಂಗಾರ ಮಾಡಲಾಗಿದ್ದು ಭಕ್ತರು ದೇವಿಯ ದರ್ಶನ ಪಡೆದು ಹರಕೆ ಹೊರುತ್ತಿದ್ದಾರೆ. 

ಒಟ್ಟಿನಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಬಂರ್ಧದ ನಡುವೆಯೂ ಮಾರಿಕಾಂಬಾ ಜಾತ್ರೆ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಜಾತ್ರೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್  ಎರ್ಪಡಿಸಲಾಗಿದೆ.

Kapu Marigudi Jatra: ಕಳಚಿದ ಸೌಹಾರ್ದತೆಯ ಕೊಂಡಿ, 2ನೇ ದಿನವು ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ

Latest Videos
Follow Us:
Download App:
  • android
  • ios