Bank Strike ಬ್ಯಾಂಕ್ ನಲ್ಲಿ ಕೆಲಸ ಕಾರ್ಯಗಳಿದ್ದರೆ ಈ ವಾರದಲ್ಲೇ ಮುಗಿಸಿಕೊಳ್ಳಿ
ಬ್ಯಾಂಕ್ ಗಳ ಖಾಸಗೀಕರಣ, ನೌಕರರ ವಿರುದ್ಧ ನೀತಿಗಳ ವಿರುದ್ಧ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದು, ಮುಂದಿನ ವಾರ ಕೇವಲ ಎರಡೇ ದಿನ ಮಾತ್ರ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿದೆ.
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ.22): ಒಂದಿಲ್ಲೊಂದು ಕಾರಣಗಳಿಂದಾಗಿ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಗಳು ಬರುವುದರಿಂದ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿರುತ್ತದೆ. ಮುಂದಿನ ವಾರ ಕೂಡ ಅಂತದ್ದೇ ಒಂದು ಸನ್ನಿವೇಶ ಎದುರಾಗಿದೆ. ಮುಂದಿನ ವಾರ ಏನಾದ್ರೂ ಬ್ಯಾಂಕ್ ಕೆಲಸಗಳ ಬಗ್ಗೆ ಪ್ಲಾನ್ ಮಾಡಿದವರು ಈ ಸುದ್ದಿ ಪೂರ್ತಿಯಾಗಿ ಓದಿ.
ಮುಂದಿನ ವಾರ ಕೇವಲ ಎರಡೇ ದಿನ ಮಾತ್ರ ಬ್ಯಾಂಕುಗಳು ಕಾರ್ಯ ನಿರ್ವಹಿಸಲಿದೆ. ಬ್ಯಾಂಕ್ ಗಳ ಖಾಸಗೀಕರಣ, ನೌಕರರ ವಿರುದ್ಧ ನೀತಿಗಳ ವಿರುದ್ಧ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. ಬ್ಯಾಂಕ್ ನೌಕರರ ಮುಷ್ಕರ, ಯುಗಾದಿ ಹಬ್ಬ, ಹಣಕಾಸು ವರ್ಷ ಅಂತ್ಯ, ಈ ಕಾರಣಗಳಿಂದಾಗಿ ಮುಂದಿನ ವಾರ ಕೇವಲ ಎರಡು ದಿನ ಮಾತ್ರ ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿದೆ. ಹೀಗಾಗಿ ಬ್ಯಾಂಕಿಂಗ್ ಗ್ರಾಹಕ ಸೇವೆಗಳು, ಕಾರ್ಯಚಟುವಟಿಕೆಗಳಿಗೆ ಬಿಸಿ ತಟ್ಟಲಿದೆ.
ZOMATO INSTANT ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್
ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರ ಒಟ್ಟು ಹಾಗೂ 11 ಬ್ಯಾಂಕಿಂಗ್ ಯೂನಿಯನ್ ಗಳಿಗೆ. ಇದರ ಪೈಕಿ CPI ಹಾಗೂ CPIM ಬೆಂಬಲಿತ ಯೂನಿಯನ್ ಗಳು ಮುಷ್ಕರ ಕ್ಕೆ ಕೈಜೋಡಿಸಿದ್ದು, ಎರಡು ದಿನ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ - ಎಐಬಿಇಎ (All india bank employees association -AIBEA ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ - ಎಐಬಿಒಎ (All india banking officers association - AIBOA), ಬ್ಯಾಂಕ್ ಉದ್ಯೋಗಿಗಳ ಫೆಡರೇಶನ್ ಆಫ್ ಇಂಡಿಯಾ - ಬಿಇಎಫ್‌ಐ (Bank employees federation of india -BEFI) , ಭಾರತೀಯ ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ - ಐಎನ್‌ಬಿಎಪ್ (Indian Bank Employees Federation - INBEF), ಸೇರಿ ಹಲವು ಯೂನಿಯನ್ ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.
ಯಾವ ದಿನ ಬ್ಯಾಂಕ್ ಇರಲಿದೆ? ಯಾವ ದಿನ ಸಮಸ್ಯೆ ಆಗಲಿದೆ? ಎಂದು ಇಲ್ಲಿ ಉಲ್ಲೇಖಿಲಾಗಿದೆ.
27/3/22 - ಭಾನುವಾರ ಬ್ಯಾಂಕ್ ರಜೆ
28/3/22 - ಬ್ಯಾಂಕ್ ನೌಕರರ ಮುಷ್ಕರ
29/3/22 - ಬ್ಯಾಂಕ್ ನೌಕರರ ಮುಷ್ಕರ
30/3/22 - ಬ್ಯಾಂಕ್ ಓಪನ್ ಇರಲಿದೆ
31/3/22 - ಬ್ಯಾಂಕ್ ಓಪನ್ ಇರಲಿದೆ
01/4/22 - ಹಣಕಾಸು ವರ್ಷ ಅಂತ್ಯ (ಬ್ಯಾಂಕ್ ತೆರದಿದ್ರು ಗ್ರಾಹಕ ಸೇವೆ ಇರಲ್ಲ)
02/4/22 - ಯುಗಾದಿ ಹಬ್ಬ ಬ್ಯಾಂಕ್ ರಜೆ
03/4/22 - ಭಾನುವಾರ ಬ್ಯಾಂಕ್ ರಜೆ
Mysore Paints Recruitment 2022: ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ