ಶಿವಮೊಗ್ಗ : ಮಂಗಗಳ ಪಾರ್ಕ್ ನಿರ್ಮಾಣಕ್ಕೆ ಸಚಿವ ಈಶ್ವರಪ್ಪ ಭರವಸೆ
ಮಂಕಿ ಪಾರ್ಕ್ ನಿರ್ಮಾಣಕ್ಕೆ ಸಚಿವ ಈಶ್ವರಪ್ಪ ಭರವಸೆ ನೀಡಿದರು. ಮಲೆನಾಡಿನಲ್ಲಿ ಮಿತಿ ಮೀರಿದ ಮಂಗಗಳ ಹಾವಳಿ ತಡೆಗಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಿವಮೊಗ್ಗ (ಅ.21): ಮಲೆನಾಡಿನಲ್ಲಿ ಮಂಗಗಳ ಹಾವಳಿಯಿಂದ ಅಡಿಕೆ, ಭತ್ತ ಸೇರಿದಂತೆ ರೈತರ ಬೆಳೆಗಳಿಗೆ ಕಂಟಕ ಎದುರಾಗಿದ್ದು, ಮಂಕಿಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಚರ್ಚಿಸಿ, ಮಲೆನಾಡಿನ ರೈತರ ಅನುಕೂಲಕ್ಕಾಗಿ ಮಂಕಿಪಾರ್ಕ್ ನಿರ್ಮಿಸಲಾಗುವುದು. ಅಸ್ಸಾಂನಲ್ಲಿ ಮಂಕಿಪಾರ್ಕ್ ನಿರ್ಮಿಸಿದ್ದು, ಮಂಗಗಳ ಹಾವಳಿ ನಿಯಂತ್ರಿಸಲಾಗಿದೆ ಎಂದರು.
ರಾಜ್ಯದಿಂದ ಅಧ್ಯಯನ ತಂಡವನ್ನು ಅಸ್ಸಾಂಗೆ ಕಳುಹಿಸಿ, ಅದೇ ಮಾದರಿಯಲ್ಲಿ ಮಂಕಿಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪ ಭರವಸೆ ನೀಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸದ್ಯ ರಾಜ್ಯದಲ್ಲಿ ಕಂಡುಕೇಳರಿಯದ ಪ್ರವಾಹ ಉಂಟಾಗಿದ್ದು, ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ರೈತರ ಬೆಳೆಹಾನಿಗೆ ಪರಿಹಾರ ನೀಡಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗುತ್ತಿದೆ. ಈಗ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರ ಬಡವರು, ರೈತರ ನೆರವಿಗಾಗಿ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ ಎಂದು ಈಶ್ವರಪ್ಪ ತಿಳಿಸಿದರು.
ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?...
[ಒಂದಷ್ಟು ಎಕರೆ ಪ್ರದೇಶವನ್ನು ಮೀಸಲಾಗಿಟ್ಟು ಅಧಿಕ ಸಂಖ್ಯೆಯಲ್ಲಿ ಮಂಗಗಳ ಹಾವಳಿ ಇರುವ ಪ್ರದೇಶದಿಂದ ಮಂಗಳನ್ನು ಅಲ್ಲಿ ತಂದಿರಿಸಿ ಸಂಸರಕ್ಷಣೆ ಮಾಡಲಾಗುತ್ತದೆ. ಇದಕ್ಕೆ ಮಂಕಿ ಪಾರ್ಕ್ ಎನ್ನಲಾಗುತ್ತದೆ]