ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರಿಗಿದು ಎಚ್ಚರಿಕೆ ಗಂಟೆ: ಸುಮಲತಾ ಅಂಬರೀಶ್
ಶಿವಮೊಗ್ಗದಲ್ಲಿ ಕಲ್ಲು ಕ್ವಾರಿ ಸ್ಫೋಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ ಅಂಬರೀಶ್. ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವವರಿಗೆ ವಾರ್ನಿಂಗ್....
2021 ಎಲ್ಲರಿಗೂ ಒಳಿತು ಮಾಡಲಿ ಎಂದು ಬಯಸಿದರೆ, ವರ್ಷದ ಆರಂಭದಲ್ಲಿಯೇ ಇಂತಹ ದುರಂತ ಎಲ್ಲರಿಗೂ ನೋವು ತಂದಿದೆ. ಶಿವಮೊಗ್ಗ ಗಣಿಗಾರಿಕೆಯ ಬಳಿ ನಡೆದಿರುವ ಘಟನೆ ಬಗ್ಗೆ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗ ಸ್ಫೋಟದಲ್ಲಿ ಮೃತರಿಬ್ಬರ ಕಣ್ಣೀರ ಕಥೆ ಇದು : ತುಂಬು ಗರ್ಭಿಣಿ ಪತ್ನಿ ತೊರೆದು ಹೋದ
ಸುಮಲತಾ ಟ್ಟೀಟ್:
'ಶಿವಮೊಗ್ಗದಲ್ಲಿ ಸ್ಫೋಟದಿಂದ ಸಂಭವಿಸಿರುವ ಸಾವು ಮನಸ್ಸಿಗೆ ದುಃಖ ಹಾಗೂ ಸಂಕಟ ತಂದಿದೆ. ಮೃತರಾದ ಅಮಾಯಕರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಈ ದುರದುಷ್ಟಕರ ಘಟನೆ ಹಿಂದೆ ಇರುವ ಗಣಿಗಾರಿಕೆಯಲ್ಲಿ ತೊಡಗಿರುವವರ ಬೇಜವಾಬ್ದಾರಿ ವರ್ತನೆ ಇದೆ. ಕಾನೂನಿನಲ್ಲಿ ಏನೇ ಕ್ರಮ ಕೈಗೊಂಡರೂ ಆ ಅಮಾಯಕ ಜೀವಗಳು ಹಿಂದಿರುಗುವುದಿಲ್ಲ,' ನೋವು ತೋಡಿಕೊಂಡಿದ್ದಾರೆ.
ಮಂಡ್ಯದಲ್ಲಿ ಗಣಿಗಾರಿಕೆ:
'ಮಂಡ್ಯ ಜಿಲ್ಲೆಯಲ್ಲಿ ತಲೆ ಎತ್ತಿ ನಿಂತಿರುವ ಕಾನೂನು ಬಾಹಿರ ಗಣಿಗಾರಿಕೆ ವಿರುದ್ಧ ನಾನು ಸತತ ಧ್ವನಿ ಎತ್ತುತ್ತಿರುವುದು ಇದೇ ಕಾಳಜಿಯಿಂದ. ಈ ಘಟನೆ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಲಿ,' ಎಂದು ಸುಮಲತಾ ಹೇಳಿದ್ದಾರೆ.
ರಾಜಕಾರಣಿಗಳ ಸಹಾಕಾರವಿದೆ:
'ಅಕ್ರಮ ಗಣಿಗಾರಿಕೆಯ ಹಿಂದೆ ಬಹಳ ಸಲ ಸ್ಥಳೀಯ ರಾಜಕಾರಣಿಗಳು ಹಾಗೂ ಕೆಲವು ಭ್ರಷ್ಟ ಅಧಿಕಾರಿಗಳ ಸಹಕಾರವಿರುತ್ತದೆ. ಸರಕಾರ ಈ ಕೊಡಲೇ ಎಲ್ಲಾ ಜಿಲ್ಲಾಡಳಿತ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆಯ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಸೂಚಿಸಬೇಕೆಂದು ಒತ್ತಾಯಿಸುತ್ತೇನೆ,' ಎಂದಿದ್ದಾರೆ.
ಪ್ರತಿ ಪ್ರಾಣವೂ ಅಮೂಲ್ಯ, ಸರ್ಕಾರ ಅಗತ್ಯ ಕ್ರಮ ಕೊಳ್ಳಲಿ; ಶಿವಮೊಗ್ಗ ಗಣಿಗಾರಿಕೆ ಬಗ್ಗೆ ಕಿಚ್ಚ ಪ್ರತಿಕ್ರಿಯೆ
ಶಿವಮೊಗ್ಗದ ಸಮಿಪ ಹುಣಸವಾಡಿಯಲ್ಲಿ ಕಲ್ಲು ಕ್ವಾರಿಗಾಗಿ ತಂದ ಜಿಲೆಟಿನ್ ಸ್ಫೋಟಿಸಿ ಆರು ಮಂದಿ ಮೃತಪಟ್ಟಿದ್ದಾರೆ. ಸ್ಫೋಟಕ್ಕೆ ಶಿವಮೊಗ್ಗ ಸೇರಿ ಸುತ್ತ ಮುತ್ತಲಿನ ನಾಲ್ಕು ಜಿಲ್ಲೆಗಳಲ್ಲಿ ಭೂಮಿ ನಡುಗಿದ ಅನುಭವವಾಗಿತ್ತು. ಕೆಲ ಆಫೀಸ್, ಕಚೇರಿಗಳು ಹಾನಿಗೊಳಗಾಗಿವೆ.