ಪ್ರತಿ ಪ್ರಾಣವೂ ಅಮೂಲ್ಯ, ಸರ್ಕಾರ ಅಗತ್ಯ ಕ್ರಮ ಕೊಳ್ಳಲಿ; ಶಿವಮೊಗ್ಗ ಗಣಿಗಾರಿಕೆ ಬಗ್ಗೆ ಕಿಚ್ಚ ಪ್ರತಿಕ್ರಿಯೆ
ಶಿವಮೊಗ್ಗ ಸಮೀಪದ ಹುಣಸೋಡು ಕಲ್ಲು ಗಣಿಯಲ್ಲಿ ಜಿಲೆಟಿನ್ ಸ್ಫೋಟ. ಅಸುನೀಗಿದ ಎಂಟು ಕಾರ್ಮಿಕರು. ದುರಂತದ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ
ಜನವರಿ 21ರಂದು ರಾತ್ರಿ ಸುಮಾರು 10.20ಕ್ಕೆ ಶಿವಮೊಗ್ಗದ ಸುತ್ತ ಮುತ್ತ ಭೂಕಂಪದ ಅನುಭವ ಆಗಿದ್ದ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಓಡಿ ಬಂದಿದ್ದರು. ಹಲವು ಸಮಯದ ತನಕ ಜನರು ಏನಾಯಿತು ಎಂದು ತಿಳಿಯದೇ ಆತಂಕದಲ್ಲಿಯೇ ಇದ್ದರು. ಆ ನಂತರ ಗಡಿ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಏಕಕಾಲದಲ್ಲಿ ಸ್ಫೋಟವಾಗಿದ್ದು, ಹಲವು ಕಾರ್ಮಿಕರನ್ನು ಬಲಿ ತೆಗೆದುಕೊಂಡಿದೆ ಎಂಬ ವಿಚಾರ ಬಯಲಾಗಿದೆ.
ಶಿವಮೊಗ್ಗ ಬಳಿ ಭೀಕರ ಸ್ಫೋಟ 8 ಬಲಿ, ಸ್ಫೋಟದ ತೀವ್ರತೆಗೆ 4 ಜಿಲ್ಲೆಯಲ್ಲಿ ಕಂಪಿಸಿದ ಭೂಮಿ!
ಹುಣಸೋಡು ಬಳಿ ಸಂಭವಿಸಿದ ಈ ಸ್ಫೋಟದಲ್ಲಿ ಬಲಿಯಾದ ಹಲವರ ಮೃತದೇಹಗಳ ಪತ್ತೆಯಾಗಿವೆ. 15ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಶಂಕೆ ಇದೆ. ಈ ದುರಂತದ ಬಗ್ಗೆ ರಾಜಕಾರಣಿಗಳು ಹಾಗೂ ಸಿನಿಮಾ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಸುದೀಪ್ ಟ್ಟೀಟ್:
'ಶಿವಮೊಗ್ಗದ ಹುಣಸೋಡಿನಲ್ಲಿ ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿ ಸಿಗಲಿ, ಪ್ರತಿ ಪ್ರಾಣವೂ ಅಮೂಲ್ಯ. ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿ. #ಮೊದಲುಮಾನವನಾಗು,' ಎಂದು ಸುದೀಪ್ ಟ್ಟೀಟ್ ಮಾಡಿದ್ದಾರೆ. ಆ ಮೂಲಕ ನಿಸರ್ಗದ ಮೇಲೆ ನಡೆಯುತ್ತಿರುವ ಪ್ರಹಾರದ ಬಗ್ಗೆ ಸುದೀಪ್ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದೂ ಸೂಚ್ಯವಾಗಿ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿದ್ದು ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿಯೂ ಘೋಷಿಸಿದೆ.
ಜನವರಿ 21 ರಾತ್ರಿ ಸುಮಾರು 10.21ರಿಂದ 10.30ರ ಸುಮಾರಿಗೆ ಕಲ್ಲು ಕ್ವಾರಿಗಾಗಿ ಲಾರಿಯೊಂದರಲ್ಲಿ ಇಟ್ಟಿದ್ದ ಜಿಲೆಟೆನ್ ಒಟ್ಟಿಗೇ ಸ್ಫೋಟಿಸಿ, ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮೃತ ಕಾರ್ಮಿಕರ ಮೃತದೇಹ ಛಿದ್ರಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಭಾರೀ ಪ್ರಮಾಣದ ಸ್ಫೋಟಕ ಒಟ್ಟಿಗೆ ಸ್ಫೋಟಿಸಿದ ಪರಿಣಾಮ ಶಿವಮೊಗ್ಗ, ಚಿಕ್ಕಮಗಳೂರಿನ ಹೆಚ್ಚಿನ ಕಡೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ್ದು, ಉತ್ತರ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹಲವೆಡೆಯೂ ಇದೇ ರೀತಿಯ ಅನುಭವ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಂತೂ ಹಲವು ಮನೆ, ಕಚೇರಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಹಲವು ಕಟ್ಟಡಗಳಿಗೆ ಸಣ್ಣಪುಟ್ಟ ಹಾನಿಯಾಗಿವೆ.
ಶಿವಮೊಗ್ಗ ಹುಣಸೋಡು ಸ್ಫೋಟದ ಬಗ್ಗೆ ಬೊಮ್ಮಯಿ ಪ್ರತಿಕ್ರಿಯಿಸಿದ್ದು ಹೀಗೆ
ಆಗಿದ್ದೇನು?:
ಶಿವಮೊಗ್ಗ ನಗರದಿಂದ ಸುಮಾರು 14 ಕಿ.ಮೀ. ದೂರದಲ್ಲಿರುವ ಹುಣಸೋಡು ಬಳಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಲಾರಿ ಸಂಪೂರ್ಣ ಚೂರು ಚೂರಾಗಿದ್ದು, ಮೃತ ಕಾರ್ಮಿಕರ ಮೃತ ದೇಹಗಳು ಗುರುತಿಸಲಾಗದಷ್ಟು ಛಿದ್ರವಾಗಿವೆ.