Asianet Suvarna News Asianet Suvarna News

Provocative Statement: ಸಚಿವ ಈಶ್ವರಪ್ಪ ವಿರುದ್ಧ ಎಫ್‌ಐಆರ್‌

*  ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಬಳಿಕ ಕೋಮುದ್ವೇಷ ಕೆರಳಿಸುವ ಹೇಳಿಕೆ ನೀಡಿದ್ದರೆಂಬ ಆರೋಪ
*  ಕೋರ್ಟಲ್ಲಿ ದೂರು ದಾಖಲಿಸಿದ್ದ ಪೀಸ್‌ ಆರ್ಗನೈಸೇಶನ್‌
*  ಕೋರ್ಟ್‌ ಸೂಚನೆಯಂತೆ ಎಫ್‌ಐಆರ್‌
 

FIR against Minister KS Eshwarappa For Provocative Statement grg
Author
Bengaluru, First Published Apr 9, 2022, 6:06 AM IST | Last Updated Apr 9, 2022, 6:10 AM IST

ಶಿವಮೊಗ್ಗ(ಏ.09):  ಪ್ರಚೋದನಕಾರಿ ಹೇಳಿಕೆ(Provocative Statement) ಹಾಗೂ ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡಿದ ಆರೋಪದಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಖಾತೆ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಹಾಗೂ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್‌.ಎನ್‌. ಚನ್ನಬಸಪ್ಪ ವಿರುದ್ಧ ಇಲ್ಲಿನ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಕಾರ್ಯಕರ್ತ ಹರ್ಷ ಎಂಬಾತನ ಹತ್ಯೆ ಪ್ರಕರಣದ ನಂತರ ಸಶಿವಮೊಗ್ಗ ನಗರದಲ್ಲಿ ನಡೆದ ಗಲಭೆಗೆ ಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್‌.ಎನ್‌. ಚನ್ನಬಸಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. 

ಜವಾಬ್ದಾರಿಯುತ ಸ್ಥಾನಗಳಲ್ಲಿದ್ದಲ್ಲಿದ್ದು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರೇ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದೇ ಕೋಮು ಸೌಹಾರ್ದತೆ ಕದಡುವ ಹೇಳಿಕೆ ನೀಡಿದ್ದರಿಂದಲೇ ನಗರದ ಹಲವು ಕಡೆಗಳಲ್ಲಿ ಕೋಮುಗಲಭೆ ಉಂಟಾಗಿದೆ ಎಂದು ಪೀಸ್‌ ಆರ್ಗನೈಸೇಷನ್‌ ಕಾರ್ಯದರ್ಶಿ ರಿಯಾಜ್‌ ಅಹಮದ್‌ ಇಲ್ಲಿನ ಪೊಲೀಸರಿಗೆ ದೂರು ಸಲ್ಲಿಸಲು ಮುಂದಾಗಿದ್ದರು. ಆದರೆ, ಪೊಲೀಸರು ದೂರು ಸ್ವೀಕರಿಸಿರಲಿಲ್ಲ ಎಂದು ಬಳಿಕ ರಿಯಾಜ್‌ ಆರೋಪಿಸಿದ್ದರು. ಆನಂತರ ಇವರು ಬೆಂಗಳೂರಿನ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳ ವಿಶೇಷ ನ್ಯಾಯಾಲಯ ಮೊರೆಹೋಗಿದ್ದರು. ಇದೀಗ ನ್ಯಾಯಾಲಯ ನೀಡಿದ ಆದೇಶದ ಅನ್ವಯ, ಅಲ್ಲಿ ಸಲ್ಲಿಕೆಯಾಗಿದ್ದ ಪಿಸಿಆರ್‌ ಸಂಬಂಧ ಇದೀಗ ದೊಡ್ಡಪೇಟೆ ಠಾಣೆಯಲ್ಲಿ ದೂರು(Complaint)ದಾಖಲಿಸಲಾಗಿದೆ.

ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ: ಸಚಿವ ಈಶ್ವರಪ್ಪ

ರಾಹುಲ್  ಕರ್ನಾಟಕ ಪ್ರವಾಸ ಬಂದ್ರೆ ಖರ್ಚೆಲ್ಲ ನಂದೇ ಎಂದ  ಈಶ್ವರಪ್ಪ

ಕಾರವಾರ: ಅಮಿತ್ ಶಾ (Amit Shah)ರಾಜ್ಯ ಪ್ರವಾಸದ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಸಾಧ್ಯತೆ ವಿಚಾರದ ಬಗ್ಗೆ ಸಚಿವ ಕೆಎಸ್ ಈಶ್ವರಪ್ಪ ಶಾಕಿಂಗ್ ಉತ್ತರ ನೀಡಿದ್ದಾರೆ. ಕಾದು ನೋಡಿ ಎಂದ ಸಚಿವ ಕೆ.ಎಸ್. ಈಶ್ವರಪ್ಪ (Cabinet Expansion) ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.

ಅಮಿತ್ ಶಾ ಬಂದು ಹೋಗಿರೋದು ಪತ್ರಕರ್ತರಲ್ಲೇ ಕುತೂಹಲ ಮೂಡಿಸಿದೆ. ಇನ್ನು ಕಾಂಗ್ರೆಸ್‌ನವರಿಗೆ (Congress) ಢವ ಢವ ಎಂತಾ ಎದೆ ಹೊಡೆದುಕೊಳ್ಳುವುದ್ರಲ್ಲಿ ಎರಡು ಮಾತಿಲ್ಲ. ಅಮಿತ್ ಶಾ ಬರ್ಬೇಕಿದ್ರೆ ರಾಷ್ಟ್ರದ್ರೋಹಿಗಳ ವಿರುದ್ದ ಬಾಂಬ್ ತೆಗೆದುಕೊಂಡೇ ಬಂದಿದ್ದಾರೆ. ರಾಹುಲ್ ಗಾಂಧಿ (Rahul Gandhi) ಉತ್ತರ ಪ್ರದೇಶದಲ್ಲಿ (Uttar Pradesh) ಕಾಲಿಟ್ಟ ಕಡೆಗಳೆಲ್ಲಾ ಕಾಂಗ್ರೆಸ್ ಸರ್ವ ನಾಶವಾಗಿದೆ. ಕರ್ನಾಟಕ ರಾಜ್ಯಕ್ಕೆ ಬಂದ್ರೆ ಇಲ್ಲೂ ಕಾಂಗ್ರೆಸ್‌ಗೆ ಅದೇ ಗತಿಯಾಗುತ್ತದೆ ಎಂದು ಭವಿಷ್ಯ ನುಡಿದರು.

ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಬರ್ತಾರೆ ಅಂದ್ರೆ ರಾಹುಲ್ ಗಾಂಧಿ ಹೋಗಿ ಬರುವ ಖರ್ಚು ನಾನೇ ವಹಿಸಿಕೊಳ್ಳುತ್ತೇನೆ ಎಂದು ಈಶ್ವರಪ್ಪ ವ್ಯಂಗ್ಯದ ಪ್ರತಿಕ್ರಿಯೆ  ನೀಡಿದರ ಅಂಕೋಲಾ ತಾಲೂಕಿನ ಮಾದನಗೇರಿಯ ಬಳಲೆ ಗ್ರಾಮಕ್ಕೆ ಈಶ್ವರಪ್ಪ ಭೇಟಿ ನೀಡಿದ್ದರು. 

Halal-Jhatka Controversy: ಹಿಂದೂಗಳು ಝಟ್ಕಾ ಮಾಡೋದಾದ್ರೆ ಮಾಡ್ಕೊಂಡು ಹೋಗ್ಲಿ: ಈಶ್ವರಪ್ಪ

ಸಂಪುಟ ಕನಸು ಕಾಣುತ್ತಿದ್ದವರಿಗೆ ಶಾಕ್ ಸಿಕ್ಕಿತ್ತು:  ಪಂಚ ರಾಜ್ಯಗಳ ಫಲಿತಾಂಶ ಬಿಜೆಪಿ ಪರವಾಗಿ ಬಂದ ನಂತರ ಕರ್ನಾಟಕ ಸಂಪುಟ ವಿಸ್ತರಣೆ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅನೇಕರಿಗೆ ನಿರಾಸೆ ಕಾದಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಮಾಡಿದ ನಂತರ ಬೊಮ್ಮಾಯಿ ಸಂಪುಟಕ್ಕೆ ಹೊಸ ರೂಪ ಸಿಗಲಿದೆ ಎಂಬ ವರದಿಗಳು ಬಂದಿದ್ದವು.

ಈಗಿನ ಬೆಳವಣಿಗೆ ನೋಡಿದರೆ ಏಪ್ರಿಲ್ ನಲ್ಲಿ ಸಂಪುಟ ಪುನರ್ ರಚನೆ ಆಗೋದೆ ಡೌಟು. ಹೌದು ಕೇಂದ್ರ ನಾಯಕರು ಪಂಚ ರಾಜ್ಯದ ಚುನಾವಣೆ ಬಳಿಕ ನಾಲ್ಕು ರಾಜ್ಯದ ಸಚಿವ ಸಂಪುಟ ರಚನೆಯಲ್ಲಿ ಬ್ಯುಸಿ ಇದ್ದಾರೆ. ಈಗಷ್ಟೇ ಗೋವಾ, ಮಣಿಪುರ, ಉತ್ತರಖಾಂಡಕ್ಕೆ ಸಿಎಂ ಆಯ್ಕೆ ಮುಗಿಸಿರುವ ಬಿಜೆಪಿ ಹೈಕಮಾಂಡ್ ಈಗ ಆ ಮೂರು ರಾಜ್ಯ ಸೇರಿ ಉತ್ತರಪ್ರದೇಶಕ್ಕೆ ಯೋಗಿ ಸಂಪುಟ ರಚನೆಯಲ್ಲಿ ಬ್ಯುಸಿ ಆಗಿದ್ದಾರೆ.   ಒಂದು ಕಡೆ ಅಮಿತ್ ಶಾ ಮತ್ತು ಅತ್ತ ರಾಹುಲ್ ಗಾಂಧಿ ಸಹ ಕರ್ನಾಟಕಕ್ಕೆ ಬಂದು ಹೋಗಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.
 

Latest Videos
Follow Us:
Download App:
  • android
  • ios