Halal-Jhatka Controversy: ಹಿಂದೂಗಳು ಝಟ್ಕಾ ಮಾಡೋದಾದ್ರೆ ಮಾಡ್ಕೊಂಡು ಹೋಗ್ಲಿ: ಈಶ್ವರಪ್ಪ
* ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಈಶ್ವರಪ್ಪ
* ಎನ್‌ಐಎ ತನಿಖೆಯಿಂದ ಸತ್ಯ ಬಯಲು
* ಹಲಾಲ್ ವಿಚಾರ ಕೇಂದ್ರ ಸಚಿವೆ ಶೋಭಾ ಕೆರಂದ್ಲಾಜೆ ಏನಂದ್ರು?
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಏ.03): ಯುಗಾದಿ(Yugadi) ದಿನ ನಾನು ಮಾಂಸ(Meat) ತಿನ್ನಲ್ಲ, ಭಾನುವಾರ ನನ್ನ ಮನೆದೇವರ ದಿನ. ಮಾಂಸ ತಿನ್ನಲ್ಲ. ಸೋಮವಾರ ಮಾಂಸ ತಿನ್ನುವ ಅಭ್ಯಾಸ ಇಲ್ಲ. ಆದರೆ ಮಂಗಳವಾರ ಮಾತ್ರ ಮಾಂಸ ತಿನ್ನದೇ ಇರೋದಿಲ್ಲ ಎಂದಿದ್ದಾರೆ. ಈ ತರದ ವಿಚಾರದಲ್ಲಿ ನಾನು ರಾಜಕಾರಣ(Politics) ಮಾಡಲು ಇಷ್ಟ ಪಡಲ್ಲ. ಇದು ಕೆಲ ವ್ಯಕ್ತಿಗಳು ಆಡುತ್ತಿರುವ ಆಟ ಅಂತ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಕೂಲ್ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಹಲಾಲ್ ವರ್ಸಸ್ ಝಟ್ಕಾ ವಿವಾದದ ಬಗ್ಗೆ ಇಂದು(ಭಾನುವಾರ) ಉಡುಪಿಯಲ್ಲಿ(Udupi) ಮಾಧ್ಯಮದವರ ಜತೆ ಮಾತನಾಡಿದ ಸಚಿವರು, ಯಾರು ಯಾವುದನ್ನು ಪೂಜೆ ಮಾಡುತ್ತಾರೆ ಅದನ್ನು ಮಾಡಿಕೊಳ್ಳಲಿ ಬಿಡಿ. ಅವರವರು ಅವರ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಲಿ. ಮುಸಲ್ಮಾನರು(Muslim) ಹಲಾಲ್(Halal) ಮಾಡುವುದಾದರೆ ಮಾಡಲಿ. ಹಿಂದೂಗಳು(Hindu) ಝಟ್ಕಾ(Jhatka) ಮಾಡುವುದಾದರೆ ಮಾಡಿಕೊಂಡು ಹೋಗಲಿ. ಮುಸಲ್ಮಾನರು ನಮ್ಮ ಮನೆಗೆ ಬಂದು ಏನು ಒತ್ತಡ ಹಾಕುವುದಿಲ್ಲ. ನಾವು ಯಾರೂ ಮುಸಲ್ಮಾನರ ಮನೆಗೆ ಹೋಗಿ ಒತ್ತಡ ಹಾಕುವುದಿಲ್ಲ ಅಂತ ತಿಳಿಸಿದ್ದಾರೆ.
Halal-Jhatka Politics: ಮುಸ್ಲಿಮರಿಗಿಂತ ಬಿಜೆಪಿಯವರೇ ಹೆಚ್ಚು ಖುರಾನ್ ಓದುತ್ತಿದ್ದಾರೆ: ತಮಟಗಾರ
ಸಮಾಜವನ್ನು ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ. ಚುನಾವಣೆ(Election) ಬಂದಾಗ ಒಬ್ಬರಿಗೊಬ್ಬರು ಬಹಿರಂಗವಾಗಿ ತೊಡೆತಟ್ಟೊಣ, ಚುನಾವಣೆ ಬಂದಾಗ ನಾನೇನು ಮಾಡಿದ್ದೇನೆ ನೀನ್ ಏನ್ ಮಾಡಿದ್ದೆ ಅಂತ ಜನರ ಮುಂದೆ ಇಡೋಣ ಎಂದಿದ್ದಾರೆ. ಈ ಹಿಜಾಬ್ ವಿವಾದ ರಾಜ್ಯದಲ್ಲಿ ಆರಂಭ ಮಾಡಿದ್ದು ಯಾರು? ಹೇಳಿ ನೋಡೋಣ ಹರ್ಷ ಕೊಲೆಯಾದಾಗ ಕಾಂಗ್ರೆಸ್(Congress) ಉಗ್ರವಾಗಿ ಯಾಕೆ ಖಂಡಿಸಿಲ್ಲ?. ದೇಶದಲ್ಲಿ ನಿರ್ನಾಮವಾಗಿರುವ ಕಾಂಗ್ರೆಸ್ ಪಕ್ಷ ಹಿಜಾಬ್, ಹಲಾಲ್, ರಾಷ್ಟ್ರ ಧ್ವಜದ ಬಗ್ಗೆ ಚರ್ಚೆ ಮಾಡುತ್ತಿದೆ ಅಂತ ಕಾಂಗ್ರೆಸ್ ವಿರುದ್ಧ ಖಾರವಾವಾಗಿ ಮಾತನಾಡಿದ್ದಾರೆ.
ಮುಸಲ್ಮಾನರನ್ನು ತೃಪ್ತಿ ಪಡಿಸುವ ಪ್ರಯತ್ನ ಒಳ್ಳೆಯದಲ್ಲ. ನಾವು ಹುಟ್ಟಿದಾಗಿನಿಂದ ಹಿಂದುತ್ವದವರು. ರಾಷ್ಟ್ರಭಕ್ತ ಮುಸಲ್ಮಾನರು, ಸ್ವಾತಂತ್ರ ಹೋರಾಟಗಾರ ಮುಸಲ್ಮಾನರನ್ನು ನಾವು ಗೌರವಿಸುತ್ತೇವೆ. ಇಲ್ಲಿ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಅಂದವರನ್ನು ನಾವು ಬಿಡುವುದಿಲ್ಲ ಅಂತ ಗುಡುಗಿದ್ದಾರೆ.
ಹರ್ಷ ಕೊಲೆ(Harsha Murder) ಪ್ರಕರಣದ ತನಿಖೆಯಲ್ಲಿ ನ್ಯಾಯ ಸಿಗುತ್ತದೆ. ಹರ್ಷ ಕೊಲೆಯ ಎನ್‌ಐಎ(NIA) ತನಿಖೆಯಲ್ಲಿ ನ್ಯಾಯ ಸಿಗುವ ನಂಬಿಕೆಯಿದೆ, ಹಿಂದುಗಡೆಯಿಂದ ಬಂದು ಕೊಚ್ಚಿ ಹೋದವರನ್ನು ಗಂಡಸರು ಎಂದು ಕರೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್, ಬೆಲೆ ಏರಿಕೆ ಮುಚ್ಚಿ ಹಾಕಲು ಬಿಜೆಪಿಯಿಂದ ಕೋಮುವಾದ ಬಳಕೆ: ಸಿದ್ದರಾಮಯ್ಯ
ಹಲಾಲ್ ವಿಚಾರ ಕೇಂದ್ರ ಸಚಿವೆ ಶೋಭಾ ಕೆರಂದ್ಲಾಜೆ ಏನಂದ್ರು?
ಇದೇ ವೇಳೆ ಹಲವು ವಿವಾದದ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಅವರು, ಇದು ಒಂದು ಧರ್ಮದ(Religion) ವಿಚಾರವಾಗಿದೆ. ನಾವೆಲ್ಲರೂ ಹಲಾಲ್ ತಿನ್ನಬೇಕು ಎಂಬುದು ಸರಿಯಲ್ಲ. ವಿದೌಟ್ ಹಲಾಲ್ ನಾವು ತಿನ್ನುತ್ತಾ ಬೆಳೆದವರು. ಹಲಾಲ್ ಸರ್ಟಿಫಿಕೇಟ್ ಪಡೆಯಬೇಕೆಂಬ ನಿರ್ದೇಶನ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಮುಸಲ್ಮಾನರು ಹಲಾಲ್ ಮಾಂಸ ತಿನ್ನುವುದಕ್ಕೆ ನಮ್ಮದೇನು ವಿರೋಧ ಇಲ್ಲ. ಆದರೆ ಎಲ್ಲರಿಗೂ ಹಲಾಲ್ ತಿನ್ನಿಸಬೇಕು ಎಂಬ ಭಾವನೆ ಸರಿಯಲ್ಲ. ಈ ಬಗ್ಗೆ ಕೋರ್ಟ್‌ನಲ್ಲಿ ಕೇಸುಗಳು ಇವೆ. ಸರ್ಕಾರ ಎಲ್ಲರ ಭಾವನೆಯ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಎನ್‌ಐಎ ತನಿಖೆಯಿಂದ ಸತ್ಯ ಬಯಲು
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸುತ್ತಿದೆ. ಈಗಾಗಲೇ ಎನ್‌ಐಎ ಎಫ್ ಐಆರ್ ದಾಖಲು ಮಾಡಿದೆ. ಈ ತನಿಖೆಯಲ್ಲಿ ಸತ್ಯಾಸತ್ಯತೆ ಹೊರ ಬರಲಿದೆ. ಸಾವಿನ ಹಿಂದಿನ ಕಾರಣ, ಕೊಲೆಗೆ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು. ರಸ್ತೆಯಲ್ಲಿ ಮಚ್ಚು ಲಾಂಗ್ ಪೊಲೀಸರನ್ನು ಹಿಮ್ಮೆಟ್ಟಿಸಿದ್ದೂ ತನಿಖೆಯಾಗಬೇಕು. ಯಾರ ಮನೆಯಲ್ಲಿ ಮಚ್ಚು ಲಾಂಗು ಇತ್ತು, ಯಾಕೆ ಬಂತು? ಅಂತ ತನಿಖೆಯಾಗಬೇಕು. ಪ್ರಕರಣ ಹಿಂದಿನ ಉದ್ದೇಶ ಏನು ಎಂಬುದು ತನಿಖೆಯಲ್ಲಿ ಹೊರಬರಬೇಕು. ಘಟನೆಯ ತನಿಖೆ ಸರಿಯಾಗಿ ನಡೆದರೆ ಶಾಂತಿ ನೆಲೆಸಲು ಪ್ರಮುಖ ಹೆಜ್ಜೆಯಾಗಬಹುದು. ಎಸ್‌ಡಿಪಿಐ(SDPI), ಪಿಎಫ್‌ಐ(PFI) ಇಡೀ ದೇಶದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಜಾತಿ ಧರ್ಮ ಒಡೆದಾಳುವ ಹಿಜಾಬ್(Hijab) ವಿಚಾರದಲ್ಲಿ ಬಡ ಮಕ್ಕಳನ್ನು ಎತ್ತಿಗಟ್ಟಿದ್ದರು. ಇದರ ಹಿಂದಿನ ದೇಶೀಯ ಅಂತಾರಾಷ್ಟ್ರೀಯ ಷಡ್ಯಂತ್ರ ಎನ್‌ಐಎ ತನಿಖೆಯಲ್ಲಿ ಸರಿಯಾದ ಮಾಹಿತಿ ಹೊರಬೀಳಲಿದೆ. ಇದರ ಹಿಂದಿನ ಶಕ್ತಿಗಳ ಬಗ್ಗೆ ತನಿಖೆಯಾಗಲೇಬೇಕು ಅಂತ ಹೇಳಿದ್ದಾರೆ.