ಶಿಕಾರಿಪುರ : ಒಂದು ತಿಂಗಳ ಕಾಲ ವಿದ್ಯುತ್ ವ್ಯತ್ಯಯ
ಒಂದು ತಿಂಗಳ ಕಾಲ ವಿದ್ಯುತ್ ವ್ಯತ್ಯಯವಾಗುವ ಬಗ್ಗೆ ವಿದ್ಯುತ್ ಸರಬರಾಜು ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ಶಿಕಾರಿಪುರ [ನ.01] : ಯುಜಿ ಕೇಬಲ್ ಅಳವಡಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಸತತ ಒಂದು ತಿಂಗಳ ಕಾಲ ಪಟ್ಟಣ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆಯಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಎಇಇ ಪರಶುರಾಮಪ್ಪ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಪಟ್ಟಣ ವ್ಯಾಪ್ತಿಯಲ್ಲಿ 11 ಕೆವಿ ಯುಜಿ ಕೇಬಲ್ ಅಳವಡಿಸುವ ಕಾಮಗಾರಿ ಆರಂಭವಾಗಿದ್ದು ಈ ದಿಸೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.
ಇಲ್ಲಿನ ಪ್ರಮುಖ ಪ್ರದೇಶಗಳಾದ ಪಟ್ಟಣದ ಶಿಶುವಿಹಾರ ರಸ್ತೆ, ತಾಲೂಕು ಕಚೇರಿ ರಸ್ತೆ, ಬಸ್ ನಿಲ್ದಾಣ, ಪುರಸಭೆ, ಮಾಳೇರಕೇರಿ, ಆರೇರಕೇರಿ, ಹುಚ್ಚುರಾಯಸ್ವಾಮಿ ದೇವಸ್ಥಾನ ಸಮೀಪ, ಮಾಸೂರು ವೃತ್ತ, ಜಯನಗರ, ಸೊಪ್ಪಿನಕೇರಿ, ಕುಂಬಾರಗುಂಡಿ ಸಮೀಪ ನ. 1ರಿಂದ 30ರವರೆಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅನಿಯಮಿತವಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ನಿಟ್ಟಿನಲ್ಲಿ ಗ್ರಾಹಕರು ಮೆಸ್ಕಾಂ ಜತೆ ಸಹಕರಿಸುವಂತೆ ಎಇಇ ಪರಶುರಾಮಪ್ಪ ಬೆಣ್ಣೆ ಮನವಿ ಮಾಡಿದ್ದಾರೆ.