Asianet Suvarna News Asianet Suvarna News
569 results for "

ಜಲಾಶಯ

"
Kodagu Harangi Reservoir will be empty in 1 month gvdKodagu Harangi Reservoir will be empty in 1 month gvd

ಇನ್ನೊಂದು ತಿಂಗಳಲ್ಲಿ ಖಾಲಿಯಾಗಲಿದೆ ಹಾರಂಗಿ ಜಲಾಶಯ: ಕಾವೇರಿ ತವರಿನಲ್ಲಿ ಜೀವಜಲಕ್ಕೂ ಆತಂಕ!

ವರ್ಷದ ಆರು ತಿಂಗಳ ಕಾಲ ಮಳೆ ಸುರಿಯುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಈ ವರ್ಷ ಮಳೆ ಸುರಿದಿದ್ದು ತೀರಾ ಕಡಿಮೆ. ಹೀಗಾಗಿ ಕಾವೇರಿ ಹುಟ್ಟಿ ಹರಿಯುವ ಕಾವೇರಿಯ ತವರು ಜಿಲ್ಲೆಯ ಜಲಾಶಯಗಳು ಮಾರ್ಚ್ ತಿಂಗಳ ಮೊದಲ ವಾರದಲ್ಲಿಯೇ ಖಾಲಿಯಾಗುತ್ತಿವೆ. 

state Mar 3, 2024, 2:00 AM IST

High court gives permission to trail blast at Baby Betta near KRS reservoir but fear in farmers satHigh court gives permission to trail blast at Baby Betta near KRS reservoir but fear in farmers sat

ಕೆಆರ್‌ಎಸ್‌ ಡ್ಯಾಂ ಬಳಿಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಟ್ರಯಲ್‌ ಬ್ಲಾಸ್ಟ್‌ಗೆ ಹೈಕೋರ್ಟ್‌ ಅನುಮತಿ; ರೈತರಲ್ಲಿ ಆತಂಕ

ಕೆಆರ್‌ಎಸ್‌ ಜಲಾಶಯದ ಬಳಿಯ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಟ್ರಯಲ್‌ ಬ್ಲಾಸ್ಟ್‌ಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ.

Karnataka Districts Feb 24, 2024, 3:33 PM IST

Discussion with Maharashtra to solve Kalaburgi water problem Says Priyank Kharge gvdDiscussion with Maharashtra to solve Kalaburgi water problem Says Priyank Kharge gvd

ಕಲಬುರಗಿ ನೀರಿನ ಸಮಸ್ಯೆ ನೀಗಿಸಲು ಮಹಾರಾಷ್ಟ್ರ ಜೊತೆ ಚರ್ಚೆ: ಪ್ರಿಯಾಂಕ್‌ ಖರ್ಗೆ

ಕಲಬುರಗಿ ಜಿಲ್ಲೆಯ ನೀರಿನ ಸಮಸ್ಯೆ ನೀಗಿಸಲು ಸೊಲ್ಲಾಪುರದ ಉಜ್ಜನಿ ಜಲಾಶಯದಿಂದ ಭೀಮಾನದಿಗೆ ಹೆಚ್ಚುವರಿಯಾಗಿ 1 ಟಿಎಂಸಿ ನೀರು ಬಿಡುಗಡೆಗೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.
 

Politics Feb 14, 2024, 10:03 PM IST

Drinking Water Problem in Kodagu before the Start of Summer grg Drinking Water Problem in Kodagu before the Start of Summer grg

ಕೊಡಗಿನಲ್ಲಿ ಬತ್ತುತ್ತಿವೆ ನದಿ, ಅಂತರ್ಜಲ: ಬೇಸಿಗೆ ಆರಂಭಕ್ಕೂ ಮುನ್ನ ಕುಡಿಯುವ ನೀರಿಗೂ ಹಾಹಾಕಾರ..!

ಈ ಬಾರಿ ತೀವ್ರ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನದಿ, ತೊರೆಗಳು ಒಣಗಿ ಹೋಗಿವೆ. ಜಲಾಶಯವೇ ಬತ್ತಿ ಹೋಗಿದೆ. ಅಷ್ಟೇ ಏಕೆ ಅಂತರ್ಜಲ ಕೂಡ ಕಡಿಮೆಯಾಗಿದ್ದು ಈಗ ಜನ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. 

Karnataka Districts Feb 10, 2024, 11:00 PM IST

Mine Close in 20 km Radius Around KRS Dam in Mandya grg Mine Close in 20 km Radius Around KRS Dam in Mandya grg

ಕೆಆರ್‌ಎಸ್‌ ಡ್ಯಾಂ ಸುತ್ತ 20 ಕಿಮೀ ವ್ಯಾಪ್ತಿಯಲ್ಲಿ ಗಣಿ ಬಂದ್‌..!

ಕೆಆರ್‌ಎಸ್‌ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಜಲಾಶಯಕ್ಕೆ ಆಪತ್ತು ಒದಗಲಿದೆ. ಈಗಾಗಲೇ ಜಲಾಶಯ ಸುತ್ತಲಿನ ಭಾಗಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ಹಲವು ಬಾರಿ ದೊಡ್ಡ ಶಬ್ದ ಕೇಳಿ ಬಂದಿವೆ. ಆದ್ದರಿಂದ ಗಣಿಗಾರಿಕೆ ನಡೆಸಿದರೆ ಜಲಾಶಯಕ್ಕೆ ಗಂಭೀರ ಪರಿಣಾಮ ಉಂಟಾಗಲಿದೆ. 

state Jan 9, 2024, 5:37 AM IST

Farmer Attempted Suicide in Front of DC and SP in Yadgir grg Farmer Attempted Suicide in Front of DC and SP in Yadgir grg

ಯಾದಗಿರಿ: ಡಿಸಿ, ಎಸ್ಪಿಯೆದುರೇ ಆತ್ಮಹತ್ಯೆಗೆ ರೈತ ಯತ್ನ..!

ಧರಣಿ ಕೈಬಿಡುವಂತೆ ಪ್ರತಿಭಟನಾಕಾರರ ಮನವೊಲೈಸಲು ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಹಾಗೂ ಎಸ್ಪಿ ಜಿ. ಸಂಗೀತಾ ಮತ್ತಿತರ ಅಧಿಕಾರಿಗಳೆದುರೇ ಮದ್ದರಕಿ ಗ್ರಾಮದ ರೈತ ಹಣುಮಂತ ಪೂಜಾರಿ, ಕ್ರಿಮಿನಾಶಕ ಕುಡಿಯಲು ಮುಂದಾದಾಗ, ಅಲ್ಲಿದ್ದ ರೈತ ಮುಖಂಡರು ಹಾಗೂ ಪೊಲೀಸ್‌ ಅಧಿಕಾರಿಗಳು ಅದನ್ನು ತಡೆದು ಕ್ರಿಮಿನಾಶಕ ಕಸಿದುಕೊಂಡು, ಮುಂದಾಗುವ ಅವಘಡ ತಪ್ಪಿಸಿದರು.

Karnataka Districts Jan 6, 2024, 8:49 PM IST

Water from Bhadra left canal Jan 10 and right canal jan 20 Says Minister Madhu Bangarappa gvdWater from Bhadra left canal Jan 10 and right canal jan 20 Says Minister Madhu Bangarappa gvd

ಭದ್ರಾ ಎಡದಂಡ ನಾಲೆಗೆ ಜ.10, ಬಲದಂಡ ನಾಲೆಗೆ ಜ.20 ರಿಂದ ನೀರು: ಸಚಿವ ಮಧು ಬಂಗಾರಪ್ಪ

ಭದ್ರಾ ಜಲಾಶಯದ ಎಡದಂಡ ನಾಲೆಗೆ ಜ.10 ರಿಂದ ಮತ್ತು ಬಲದಂಡ ನಾಲೆ ಜ.20 ರಿಂದ ನೀರು ಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ. 

state Jan 6, 2024, 4:01 PM IST

Young girl drowned in Hemavati backwater at hassan ravYoung girl drowned in Hemavati backwater at hassan rav

ಹನುಮ ಜಯಂತಿಯಂದೇ ದುರಂತ; ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಯುವತಿ ಸಾವು!

ಹೇಮಾವತಿ ನದಿ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಹಾಸನ ತಾಲೂಕಿನ ಗೊರೂರಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಘಟನೆ ನಡೆದಿದೆ. ನಿತ್ಯಾ (19) ಹೇಮಾವತಿ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವತಿ.

CRIME Dec 26, 2023, 1:17 AM IST

Farmers should not grow summer crops Says Minister N Cheluvarayaswamy gvdFarmers should not grow summer crops Says Minister N Cheluvarayaswamy gvd

ರೈತರೇ ಬೇಸಿಗೆ ಬೆಳೆ ಬೆಳೆಯಬೇಡಿ: ಸಚಿವ ಚಲುವರಾಯಸ್ವಾಮಿ ಮನವಿ

ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಬೇಸಿಗೆ ಬೆಳೆ ಬೆಳೆಯಲು ಮುಂದಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು. 

state Dec 23, 2023, 6:43 AM IST

Boating near Sakrebyle Elephant Camp High Court notice to Government gvdBoating near Sakrebyle Elephant Camp High Court notice to Government gvd

ಸಕ್ರೆಬೈಲು ಆನೆ ಶಿಬಿರದ ಬಳಿ ಬೋಟಿಂಗ್‌: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಶಿವಮೊಗ್ಗ ಜಿಲ್ಲೆ ಗಾಜನೂರಿನ ಸಕ್ರೆಬೈಲು ಆನೆ ಶಿಬಿರದ ಬಳಿದ ತುಂಗಾಭದ್ರಾ ಜಲಾಶಯದ ಹಿನ್ನೀರಿನಲ್ಲಿ ‘ವಾಟರ್ ಬೋಟಿಂಗ್’ ನಡೆಸಲು ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ ಲಿಮಿಟೆಡ್‌ಗೆ ಅನುಮತಿ ನೀಡಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
 

state Dec 22, 2023, 12:07 PM IST

DK Shivakumar Instructs to Appoint a Team of Experts to know the status of KRS Dam grg DK Shivakumar Instructs to Appoint a Team of Experts to know the status of KRS Dam grg

ಕೆಆರ್‌ಎಸ್ ಸ್ಥಿತಿ ಅರಿಯಲು ತಜ್ಞರ ತಂಡ ನೇಮಕಕ್ಕೆ ಡಿಕೆಶಿ ಸೂಚನೆ

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಶಾಸಕರಾದ ದಿನೇಶ್‌ ಗೂಳಿಗೌಡ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಕೆಆರ್‌ಎಸ್‌ ಅಣೆಕಟ್ಟಿನ ಸ್ಥಿತಿಗತಿಯನ್ನು ಅರಿಯಲು ತಜ್ಞರ ತಂಡ ನೇಮಿಸುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ  ಡಿ.ಕೆ.ಶಿವಕುಮಾರ್‌, ಕೆಆರ್‌ಎಸ್‌ ಜಲಾಶಯದ ಸದೃಢತೆ ಸೇರಿ ಇನ್ನಿತರ ವಿಚಾರಗಳ ಕುರಿತು ಅಧ್ಯಯನ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

state Dec 16, 2023, 4:29 AM IST

Drinking Water Problems Solver after Sattegal Project Implement in Ramanagara grg Drinking Water Problems Solver after Sattegal Project Implement in Ramanagara grg

ಸತ್ತೇಗಾಲ ಯೋಜನೆ: ದಾಹ ತಣಿಸಲಿದ್ದಾಳೆ ಕಾವೇರಿ..!

ರಾಷ್ಟ್ರೀಯ ಜಲ ನೀತಿಯ ಅನ್ವಯ ಕುಡಿಯುವ ನೀರಿಗೆ ಆದ್ಯತೆ ನೀಡಿ ಕಾವೇರಿ ಜಲ ವಿವಾದ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಹಂಚಿಕೆಯಾಗಿರುವ ನೀರಿನಲ್ಲಿ 3.30 ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Karnataka Districts Dec 15, 2023, 11:28 PM IST

Karnataka Tamilnadu Cauvery dispute today is 100 days of Cauvery struggle Neglect of state government ravKarnataka Tamilnadu Cauvery dispute today is 100 days of Cauvery struggle Neglect of state government rav

ಕಾವೇರಿ ಹೋರಾಟಕ್ಕೆ 100 ದಿನ: ಸರ್ಕಾರಕ್ಕೆ ಮುಟ್ಟದ ಕಾವೇರಿ ಕೂಗು!

ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟ ನೂರು ದಿನ ಪೂರೈಸಿದೆ. ತಮಿಳುನಾಡಿಗೆ ಹರಿಯುತ್ತಿರುವ ನೀರು ಮಾತ್ರ ನಿರಂತರವಾಗಿ ಹರಿಯುತ್ತಲೇ ಇದೆ. ಹೋರಾಟ ಶತದಿನದವರೆಗೆ ನಡೆದರೂ ಸರ್ಕಾರ ದಿವ್ಯಮೌನ ವಹಿಸಿದೆ. ಆಳುವವರ ನಡೆ ಧರಣಿ ನಿರತರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

state Dec 15, 2023, 5:40 AM IST

Announce Special Package for Karanja Victims Says Bidar South MLA Dr Shailendra Beldale grg Announce Special Package for Karanja Victims Says Bidar South MLA Dr Shailendra Beldale grg

ಬೀದರ್: ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಶಾಸಕ ಶೈಲೇಂದ್ರ ಬೆಲ್ದಾಳೆ

ರೈತ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಸೂಕ್ತ ಪರಿಹಾರ ನೀಡಿ  ಸಮಸ್ಯೆ ಎದುರಿಸುತ್ತಿರುವ ಬೀದರ್ ಜಿಲ್ಲೆಯ ರೈತರ ಹಿತ ಕಾಪಾಡಬೇಕು ಮತ್ತು ಸಂತ್ರಸ್ತರ ಹೋರಾಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕಮಾರ್‌ ಅವರಿಗೆ ಮನವಿ ಮಾಡಿದ ಡಾ.ಶೈಲೇಂದ್ರ ಬೆಲ್ದಾಳೆ 

Karnataka Districts Dec 12, 2023, 8:36 PM IST

In Kodagu a temple of Lord Shiva submerged in a reservoir 40 years ago was found gvdIn Kodagu a temple of Lord Shiva submerged in a reservoir 40 years ago was found gvd

Kodagu: 40 ವರ್ಷದ ಹಿಂದೆ ಜಲಾಶಯದೊಳಗೆ ಮುಳುಗಿದ್ದ ಶಿವನ ದೇವಾಲಯ ಪತ್ತೆ!

ವರ್ಷದ 6 ತಿಂಗಳ ಕಾಲ ಮಳೆ ಸುರಿಯುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಈ ವರ್ಷ ಎರಡು ತಿಂಗಳ ಕಾಲವಷ್ಟೇ ಆಗೊಮ್ಮೆ, ಈಗೊಮ್ಮೆ ಮಳೆ ಸುರಿದಿತ್ತು. ಪರಿಣಾಮ ಈಗ ಜಲಾಶಯಗಳೇ ಬಹುತೇಕ ಭತ್ತಿಹೋಗುತ್ತಿವೆ. ನಾಲ್ಕು ದಶಕಗಳ ಹಿಂದೆ ಜಲಾಶಯವೊಂದರಲ್ಲಿ ಮುಳುಗಿದ್ದ ದೇವಾಲಯವೊಂದು ಈ ಬಾರಿ ಪತ್ತೆಯಾಗಿದೆ. 
 

Karnataka Districts Dec 6, 2023, 8:02 PM IST