ಇನ್ನೊಂದು ತಿಂಗಳಲ್ಲಿ ಖಾಲಿಯಾಗಲಿದೆ ಹಾರಂಗಿ ಜಲಾಶಯ: ಕಾವೇರಿ ತವರಿನಲ್ಲಿ ಜೀವಜಲಕ್ಕೂ ಆತಂಕ!
ವರ್ಷದ ಆರು ತಿಂಗಳ ಕಾಲ ಮಳೆ ಸುರಿಯುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಈ ವರ್ಷ ಮಳೆ ಸುರಿದಿದ್ದು ತೀರಾ ಕಡಿಮೆ. ಹೀಗಾಗಿ ಕಾವೇರಿ ಹುಟ್ಟಿ ಹರಿಯುವ ಕಾವೇರಿಯ ತವರು ಜಿಲ್ಲೆಯ ಜಲಾಶಯಗಳು ಮಾರ್ಚ್ ತಿಂಗಳ ಮೊದಲ ವಾರದಲ್ಲಿಯೇ ಖಾಲಿಯಾಗುತ್ತಿವೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮಾ.03): ವರ್ಷದ ಆರು ತಿಂಗಳ ಕಾಲ ಮಳೆ ಸುರಿಯುವ ಮಲೆನಾಡು ಜಿಲ್ಲೆ ಕೊಡಗಿನಲ್ಲಿ ಈ ವರ್ಷ ಮಳೆ ಸುರಿದಿದ್ದು ತೀರಾ ಕಡಿಮೆ. ಹೀಗಾಗಿ ಕಾವೇರಿ ಹುಟ್ಟಿ ಹರಿಯುವ ಕಾವೇರಿಯ ತವರು ಜಿಲ್ಲೆಯ ಜಲಾಶಯಗಳು ಮಾರ್ಚ್ ತಿಂಗಳ ಮೊದಲ ವಾರದಲ್ಲಿಯೇ ಖಾಲಿಯಾಗುತ್ತಿವೆ. ಹೌದು ಕೇವಲ 1.08 ಟಿಎಂಸಿ ಸಾಮರ್ಥ್ಯದ ಚಿಕ್ಲಿಹೊಳೆ ಜಲಾಶಯ ಈಗಾಗಲೇ ಸಂಪೂರ್ಣ ಖಾಲಿಯಾಗಿದ್ದು ಬಣಗುಡುತ್ತಿದೆ. ಅದರೊಂದಿಗೆ 8.5 ಟಿಎಂಸಿ ಸಾಮರ್ಥ್ಯದ ಜಿಲ್ಲೆಯ ಏಕೈಕ ದೊಡ್ಡ ಜಲಾಶಯ ಹಾರಂಗಿಯೂ ಸಂಪೂರ್ಣ ಖಾಲಿಯಾಗುವ ಹಂತ ತಲುಪಿದೆ. ಇದು ಹಾರಂಗಿ ಜಲಾಶಯವನ್ನು ನಂಬಿ ಜೀವ ಜಲ ಸೇವಿಸುತ್ತಿರುವ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಆಹಾಕಾರ ತಂದೊಡ್ಡುವ ಸ್ಥಿತಿ ಬಂದೊದಗಿದೆ.
ಜಿಲ್ಲೆಯಲ್ಲಿ ಪ್ರತೀ ವರ್ಷ ಸಾಕಷ್ಟು ಮಳೆ ಸುರಿಯುತ್ತಿದ್ದರಿಂದ ಏಪ್ರಿಲ್ ಮೇಲೆ ತಿಂಗಳವರೆಗೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ ಎರಡರಿಂದ ಮೂರು ಟಿಎಂಸಿ ನೀರು ಇರುತಿತ್ತು. ಆದರೆ ಈ ಬಾರಿ ಮಾರ್ಚಿ ಆರಂಭದಲ್ಲಿಯೇ ಜಲಾಶಯದಲ್ಲಿ ನೀರು ತಳ ಸೇರಿರುವುದು ಆತಂಕ ತಂದಿದೆ. ಅಂದರೆ ಜಲಾಶಯದಲ್ಲಿ ಇಗ ಸದ್ಯಕ್ಕೆ 3.06 ಟಿಎಂಸಿ ನೀರು ಇದ್ದು ಅದರಲ್ಲಿ ಕೇವಲ 2.03 ಟಿಎಂಸಿ ನೀರು ಮಾತ್ರವೇ ಬಳಕೆ ಸಿಗಲಿದೆ. ಉಳಿದ 1.03 ಟಿಎಂಸಿ ನೀರು ಬಳಕೆಗೆ ಬಾರದ ಡೆಡ್ ಸ್ಟೋರೇಜ್. ಜಲಾಶಯದ ತಗ್ಗಿನ ಪ್ರದೇಶದಲ್ಲಿ ಮಾತ್ರವೇ ನೀರಿದೆ. ಕೊಡಗು ಜಿಲ್ಲೆಯಲ್ಲೂ ಈ ಬಾರಿ ಎತ್ತೇಚ್ಚ ಬಿಸಿಲ ಹವಾಗುಣ ಇರುವುದರಿಂದ ಇದೇ ಪರಿಸ್ಥಿತಿ ಮುಂದುವರೆದರೆ ಮಾರ್ಚ್ ಅಂತ್ಯ ಎನ್ನುವಷ್ಟರಲ್ಲಿ ಜಲಾಶಯ ಸಂಪೂರ್ಣ ಬತ್ತಿ ಹೋಗುವ ಆತಂಕವಿದೆ.
ಬಿಜೆಪಿಯವರು ಭಾವನೆಯ ಮೇಲೆ ರಾಜಕೀಯ ಮಾಡುತ್ತಾರೆ: ಡಿ.ಕೆ.ಶಿವಕುಮಾರ್
ಅಂದರೆ ಇನ್ನೊಂದು ತಿಂಗಳಲ್ಲಿ ಜಲಾಶಯ ಖಾಲಿಯಾಗುವುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ಜಲಾಶಯದಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಖಾಲಿಯಾಯಿತ್ತೆಂದರೆ ಸೋಮವಾರಪೇಟೆ, ಹುಲುಗುಂದ, ಹಾರಂಗಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಹನಿ ನೀರಿಗೂ ಆಹಾಕಾರ ಎದುರಾಗಲಿದೆ. ಈ ಬಾರಿ ಮಳೆ ಕಡಿಮೆಯಾದರೂ ಜಲಾಶಯ ಆಗಸ್ಟ್ ತಿಂಗಳ ಕೊನೆಯಷ್ಟರಲ್ಲಿ ಭರ್ತಿಯಾಗಿತ್ತು. ಹೀಗಾಗಿ ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಜಲಾಶಯದಿಂದ ನಿತ್ಯ ಸಾವಿರಾರು ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಮಳೆಗಾಲದಲ್ಲಿ ಇಷ್ಟೊಂದು ನೀರನ್ನು ನದಿಗೆ ಹರಿಸುವ ಬದಲಿಗೆ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಜಿಲ್ಲೆಯ ಕೆರೆ ಕಟ್ಟೆಗಳ ಹೂಳೆತ್ತಿ, ಆ ನೀರನ್ನು ಇವುಗಳಿಗೆ ತುಂಬಿಸಬಹುದಾಗಿತ್ತು.
ಗ್ಯಾರಂಟಿ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ: ಸಿದ್ದರಾಮಯ್ಯ
ಎಲ್ಲಾ ಕೆರೆಕಟ್ಟೆಗಳು ಭರ್ತಿಯಾಗಿದ್ದರೆ, ಈಗ ಜಲಾಶಯದಲ್ಲಿ ನೀರು ಖಾಲಿಯಾದರೂ ಕೆರೆಕಟ್ಟೆಗಳಲ್ಲಿ ನೀರು ಭರ್ತಿಯಾಗಿದ್ದರೆ ಇಂದು ಸಮಸ್ಯೆ ಇರುತ್ತಿರಲಿಲ್ಲ. ನೀರು ಖಾಲಿಯಾದ ಸಂದರ್ಭದಲ್ಲಿ ಸರ್ಕಾರಗಳು ನೀರಿನ ಬಗ್ಗೆ ಚಿಂತಿಸುವ ಸಮಸ್ಯೆ ಅನಿವಾರ್ಯತೆ ಇರಲಿಲ್ಲ. ಆದರೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಇರುವ ಬಹುತೇಕ ಕೆರೆಗಳು ಹೂಳಿನಿಂದ ತುಂಬಿ ಹೋಗಿವೆ. ಇದರಿಂದ ಕೆರೆಗಳಲ್ಲಿ ನೀರಿಲ್ಲದೆ ಜೊಂಡು ಹುಲ್ಲು ಬೆಳೆದು ದನಕರುಗಳು ಮೇಯುವಂತೆ ಆಗಿದೆ. ಆದರೆ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದೆ ಅವುಗಳು ಬೇಸಿಗೆಯಲ್ಲಿ ನರಕ ಅನುಭವಿಸುವಂತ ಪರಿಸ್ಥಿತಿ ಎದುರಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಲಾಶಯದಲ್ಲಿ ನೀರು ಖಾಲಿಯಾಯಿತ್ತೆಂದರೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಕೊರೆತೆ ಕಾಡಲಿದೆ. ಇದು ಕುಡಿಯುವ ನೀರಿನ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.