Asianet Suvarna News Asianet Suvarna News
1134 results for "

Hindu

"
Significance of Navagraha in Hindu Dharma skrSignificance of Navagraha in Hindu Dharma skr

Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!

ಇಂದ್ರಿಯಗಳು ನಮ್ಮ ದೇಹವನ್ನು ನಿಯಂತ್ರಿಸುವಂತೆ ನವಗ್ರಹಗಳು ನಮ್ಮ ಜೀವನದ ಆಗು ಹೋಗುಗಳನ್ನು ನಿಯಂತ್ರಿಸುತ್ತವೆ. ಈ ಒಂಬತ್ತು ಗ್ರಹಗಳ ಬಗ್ಗೆ ತಿಳಿಯೋಣ.

ಗ್ರಹಗಳು ಮನುಷ್ಯನ ಜೀವನದ ಮೇಲೆ ಬೀರುವ ಪರಿಣಾಮಗಳು ಅಗಾಧ. ಕೇವಲ ಜ್ಯೋತಿಷ್ಯ ಮಾತಲ್ಲ, ಆಧುನಿಕ ವಿಜ್ಞಾನ(modern science)  ಕೂಡಾ ಅದನ್ನೇ ಹೇಳುತ್ತದೆ. ಹಿಂದಿನ ಋಷಿಮುನಿಗಳು ನಮ್ಮ ಬ್ರಹ್ಮಾಂಡವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅವರಿಗೆ ಗ್ರಹಗಳ ಬಗ್ಗೆ ಅಪಾರ ಅರಿವು ಇತ್ತು. ಅವನ್ನೇ ಸೇರಿಸಿ ಪರಾಶರ ಮುನಿ(Parashara Rishi) ಹಾಗೂ ಜೈಮಿನಿ(Jaimini) ಋಷಿಯು ಜ್ಯೋತಿಷ್ಯ ಶಾಸ್ತ್ರ ರಚಿಸಿದ್ದಾರೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತು ಗ್ರಹಗಳಿದ್ದು, ಎಲ್ಲವೂ ತಮ್ಮದೇ ಆದ ಪ್ರತ್ಯೇಕ ಎನರ್ಜಿ ಹೊಂದಿವೆ. ಈ ನವಗ್ರಹಗಳು ಎಲ್ಲ ರಾಶಿಯ ಮೇಲೆ ಪರಿಣಾಮಗಳನ್ನು ಬೀರಲಿವೆ. ಇಂದ್ರಿಯಗಳು ನಮ್ಮ ದೇಹವನ್ನು ನಿಯಂತ್ರಿಸುವಂತೆ ಗ್ರಹಗಳು ನಮ್ಮ ಜೀವನದ ಆಗು ಹೋಗುಗಳನ್ನು ನಿಯಂತ್ರಿಸುತ್ತವೆ. ಈ ನವಗ್ರಹಗಳಲ್ಲಿ 7 ಭೌತಿಕವಾಗಿ ಇದ್ದರೆ, ಇನ್ನೆರಡನ್ನು(ರಾಹು, ಕೇತು) ಭೌತಿಕವಾಗಿ ಗುರುತಿಸಲಾಗುವುದಿಲ್ಲ. ಈ ಗ್ರಹಗಳು ಯಾವೆಲ್ಲ, ಅವುಗಳ ಕೆಲಸವೇನು ನೋಡೋಣ.

ಸೂರ್ಯ(Sun): ಎಲ್ಲ ಗ್ರಹಗಳ ಮಧ್ಯೆ ನಿಂತು ಪೂರ್ವಕ್ಕೆ ಮುಖ ಮಾಡಿರುವ ಸೂರ್ಯ ದೇವ ಗ್ರಹಪತಿ ಎಂದರೆ, ಗ್ರಹಗಳ ರಾಜನಾಗಿದ್ದಾನೆ. ಏಳು ಕುದುರೆಗಳು ಎಳೆಯುವ ಒಂದು ಚಕ್ರದ ರಥವನ್ನು ಈತ ಓಡಿಸುತ್ತಾನೆ. ಏಳು ಕುದುರೆಗಳು ಏಳು ಬಣ್ಣ(seven colors) ಹಾಗೂ ವಾರದ ಏಳು ದಿನವನ್ನು ಪ್ರತಿನಿಧಿಸುತ್ತವೆ. ಸೂರ್ಯನ ದಿನ ರವಿವಾರವಾಗಿದ್ದು, ಮಾಣಿಕ್ಯ(Ruby) ಈತನ ರತ್ನ. ಸೂರ್ಯನು ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ಚಿಂತೆಗಳು, ತಲೆನೋವು, ಜ್ವರ, ಮೈ ನೋವು, ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೂರ್ಯ ನಮಸ್ಕಾರ ಅಭ್ಯಾಸದಿಂದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬಹುದು. 

ಚಂದ್ರ(Moon): ಸೋಮ ಎಂದು ಕರೆಸಿಕೊಳ್ಳುವ ಚಂದ್ರನು 10 ಕುದುರೆಗಳು ಓಡಿಸುವ ರಥ(chariot) ವಾಹನವನ್ನು ಹೊಂದಿದ್ದಾನೆ. ಮನಸ್ಸು, ಹೆಣ್ಣಿನ ಗುಣ, ಸೌಂದರ್ಯ, ಸಂತೋಷ ಹಾಗೂ ಮಾನಸಿಕ ಸ್ಥಿರತೆಗೆ ಚಂದ್ರ ಕಾರಣನಾಗಿದ್ದಾನೆ. ಆತ ಜಾತಕದಲ್ಲಿ ಎಲ್ಲಿದ್ದಾನೆ ಎಂಬ ಆಧಾರದ ಮೇಲೆ ಈ ವಿಷಯಗಳು ನಿರ್ಧಾರವಾಗುತ್ತವೆ. ಚಂದ್ರ ತಪ್ಪು ಸ್ಥಾನದಲ್ಲಿದ್ದರೆ ಮೂತ್ರ ಸೋಂಕು, ಶ್ವಾಸಕೋಶ ಸಮಸ್ಯೆ, ಹೊಟ್ಟೆಯ ಸಮಸ್ಯೆಗಳು ಎದುರಾಗುತ್ತವೆ. ಸೋಮವಾರ ಚಂದ್ರನ ದಿನವಾಗಿದ್ದು, ಮುತ್ತು(Pearl) ಆತನ ರತ್ನವಾಗಿದೆ. 

ಮಂಗಳ(Mars): ನಾಲ್ಕು ಕೈಗಳ ದೇವರಾದ ಮಂಗಳನಿಗೆ ಅಂಗಾರಕನೆಂದೂ ಹೇಳಲಾಗುತ್ತದೆ. ಈತ ಧರ್ಮ ಕಾಯುವವನು. ಈತ ದೇಹದ ಸ್ನಾಯು ವ್ಯವಸ್ಥೆಯನ್ನು ಆಳುತ್ತಾನೆ. ಮೂಗು, ಹಣೆ ಹಾಗೂ ರಕ್ತ ಪರಿಚಲನೆ ವ್ಯವಸ್ಥೆಯೂ ಈತನದೇ. ಜಾತಕದಲ್ಲಿ ಮಂಗಳನು 1, 2, 4, 7, 8 ಹಾಗೂ 12ನೇ ಮನೆಯಲ್ಲಿದ್ದರೆ ಕುಜ ದೋಷ ಎನ್ನಲಾಗುತ್ತದೆ. ಇದರಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳವಾರ ಈತನದಾಗಿದ್ದು, ಹವಳ(Coral) ಈತನ ರತ್ನ. 

ಬುಧ(Mercury): ಬುಧನು ನಮ್ಮ ನರಮಂಡಲ ವ್ಯವಸ್ಥೆಯ ಅಧಿಪತಿ. ಆತ ನಮ್ಮ ಬುದ್ಧಿಶಕ್ತಿ ಹಾಗೂ ಸಂವಹನವನ್ನು ಪ್ರತಿನಿಧಿಸುತ್ತಾನೆ. ಸಿಂಹ ಇಲ್ಲವೇ ರಥವನ್ನು ವಾಹನವನ್ನಾಗಿ ಬಳಸುವ ಈತನ ದಿನ ಬುಧವಾರ. ಪಚ್ಚೆ(emerald) ಈತನ ರತ್ನ. ಬುಧ ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿಲ್ಲದಿದ್ದರೆ ತೊದಲುವಿಕೆ, ಶ್ವಾಸಕೋಶ ಸಮಸ್ಯೆ, ಅಸ್ತಮಾ, ಪ್ಯಾರಲಿಸಿಸ್, ಮೆದುಳು ಜ್ವರ ಮುಂತಾದವು ಕಾಣಿಸಿಕೊಳ್ಳುತ್ತವೆ. 

ಗುರು(Jupiter): ಬೃಹಸ್ಪತಿಯು ಜ್ಞಾನ, ಪ್ರೀತಿ, ಆಧ್ಯಾತ್ಮವನ್ನು ಸೂಚಿಸುತ್ತಾನೆ. ಈತ ಎಲ್ಲ ದೇವರ ಗುರುವಾಗಿದ್ದು, ಎಂಟು ಕುದುರೆಗಳ ರಥ ವಾಹನವಾಗಿ ಬಳಸುತ್ತಾನೆ. ಗುರುವಾರ ಈತನದಾಗಿದ್ದು, ಹಳದಿ ನೀಲಮಣಿ(yellow sapphire) ಈತನ ರತ್ನ. ಈತ ಜಾತಕದಲ್ಲಿ ಸರಿ ಸ್ಥಾನದಲ್ಲಿಲ್ಲದಿದ್ದರೆ ಡಯಾಬಿಟೀಸ್, ಪೈಲ್ಸ್, ಗಡ್ಡೆಗಳು, ಲಿವರ್ ಸಮಸ್ಯೆ, ರಕ್ತದ ಕ್ಯಾನ್ಸರ್ ಮುಂತಾದವು ಕಾಣಿಸುತ್ತವೆ. ಈತ ಮಾಂಸ, ಮಜ್ಜೆ, ಲಿವರ್, ಕಿಡ್ನಿ, ತೊಡೆಗಳು ಹಾಗೂ ಹೃದಯ ವ್ಯವಸ್ಥೆಯನ್ನು ಆಳುತ್ತಾನೆ. 

ಶುಕ್ರ(Venus): ಈತ ರಾಕ್ಷಸರ ಗುರುವಾಗಿದ್ದು, ಶುಕ್ರವಾರ ಹಾಗೂ ವಜ್ರ ಈತನದಾಗಿದೆ. ಈತನ ದೋಷ ಜಾತಕದಲ್ಲಿದ್ದರೆ ಕಣ್ಣಿನ ಕಾಯಿಲೆಗಳು, ಜೀರ್ಣ ಸಮಸ್ಯೆಗಳು, ಚರ್ಮದ ತೊಂದರೆಗಳು, ಬಂಜೆತನ ಕಾಡುತ್ತದೆ. 

ಶನಿ(Saturn): ಶನಿಯು ಅತಿ ಪ್ರಭಾವಶಾಲಿ ಗ್ರಹವಾಗಿದ್ದು, ಕರ್ಮಕ್ಕನುಸಾರ ಪರಿಣಾಮ ಬೀರುತ್ತಾನೆ. ಈತ ರಣಹದ್ದನ್ನು ವಾಹನವಾಗಿ ಬಳಸುತ್ತಾನೆ. ಶನಿವಾರ ಹಾಗೂ ನೀಲಮಣಿ ಈತನಿಗೆ ಮೀಸಲು. ಜಾತಕದಲ್ಲಿ ಶನಿ ಸರಿ ಸ್ಥಾನದಲ್ಲಿಲ್ಲದಿದ್ದರೆ ಅಸ್ತಮಾ, ಬಂಜೆತನ ಮುಂತಾದ  ಸಮಸ್ಯೆ ಎದುರಾಗುತ್ತವೆ. 

ರಾಹು(Rahu): ಈತ ನೋಡಲು ಬುಧನಂತೆಯೇ ಇದ್ದರೂ ಗುಣದಲ್ಲಿ ಸಂಪೂರ್ಣ ತದ್ವಿರುದ್ಧ. ಕಪ್ಪು ಸಿಂಹ ಈತನ ವಾಹನ. ಈತನಿಗಾಗಿ ಯಾವುದೇ ವಿಶೇಷ ದಿನಗಳಿಲ್ಲ. ಗ್ರಹಣಕಾರಕನಾದ ಈತ ಯಶಸ್ಸಿಗೆ ಅಡೆತಡೆಗಳನ್ನು ತರುತ್ತಲೇ ಇರುತ್ತಾನೆ. 

ಕೇತು(Ketu): ಈತನಿಗೇ ಧೂಮಕೇತು ಎನ್ನುವುದು. ಈತ ಒಳಿತು ಕೆಡುಕು, ಆಧ್ಯಾತ್ಮ, ಅಲೌಕಿಕ ಪ್ರಭಾವವನ್ನು ಬೀರುತ್ತಾನೆ. 
 

Festivals Jan 16, 2022, 11:30 AM IST

UP Election 2022 Will BJPs Hindutva Plank Help Party To Regain Power ckmUP Election 2022 Will BJPs Hindutva Plank Help Party To Regain Power ckm
Video Icon

UP Election 2022 ಉತ್ತರ ಪ್ರದೇಶ ಗೆಲ್ಲಲು ಮೋದಿ,ಯೋಗಿ ಡಬಲ್ ಎಂಜಿನ್ ಹಿಂದುತ್ವ ಅಸ್ತ್ರ!

ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಕಣ ರಂಗೇರುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಲವು ತಂತ್ರ ಪ್ರಯೋಗಿಸಲು ಸಜ್ಜಾಗಿದೆ. ಈಗಾಗಲೇ ಬಿಜೆಪಿಯ ಹಿಂದುತ್ವಕ್ಕೆ ನೀಡಿದ ಹೊಸ ಚೈತನ್ಯ ಉತ್ತರ ಪ್ರದೇಶ ಗೆಲುವಿಗೆ ಕಾರಣವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕಾರಣ ಕಾಶಿ, ವಾರಾಣಸಿ ಸೇರಿದಂತೆ ಉತ್ತರ ಪ್ರದೇಶದ ಹಿಂದೂಗಳ ಪುಣ್ಯ ಕ್ಷೇತ್ರದಲ್ಲಿ ಮೋದಿ ಹಾಗೂ ಯೋಗಿ ನವೀಕರಣ, ಜೀರ್ಣೋದ್ದಾರ ಭರ್ಜರಿಯಾಗಿ ನಡೆದಿದೆ. ಹಾಗಾದರೆ ಉತ್ತರ ದಲ್ಲಿ ಬಿಜೆಪಿಗೆ ಎದುರಾಗವು ಸವಾಲೇನು?
 

India Jan 15, 2022, 6:09 PM IST

10 Life Tips youth should learn from Swami Vivekananda10 Life Tips youth should learn from Swami Vivekananda

Swami Vivekananda 159th Birthday: ಸ್ವಾಮಿ ವಿವೇಕಾನಂದರಿಂದ ಯುವಜನ ಕಲಿಯಬೇಕಾದ 10 ಜೀವನ ಪಾಠಗಳು

ನೂರಾರು ವರ್ಷಗಳಿಂದಲೂ ನಮ್ಮ ಜನಮಾನಸದಲ್ಲಿ ನೆಲೆಸಿ ಸ್ಫೂರ್ತಿ ನೀಡುತ್ತಿರುವ ಸ್ವಾಮಿ ವಿವೇಕಾನಂದರಿಂದ ನಾವು ಪಡೆಯಬಹುದಾದ 10 ಟಿಪ್ಸ್ ಇಲ್ಲಿವೆ.
 

relationship Jan 12, 2022, 11:46 AM IST

Again Hindu God Derogatory at Putturu in Dakshina Kannada grgAgain Hindu God Derogatory at Putturu in Dakshina Kannada grg

Insulted Hindu God: ಕೊರಗಜ್ಜನ ನಂತರ ಮತ್ತೆ ದಕ್ಷಿಣ ಕನ್ನಡದಲ್ಲಿ ಹಿಂದು ದೇವರ ಅವಹೇಳನ

*   ಅರಣ್ಯಾಧಿಕಾರಿ ಸಂಜೀವ್‌ ಕಾಣಿಯೂರು ವಿರುದ್ಧ ಜನರ ಕಿಡಿ
*   ಹಿಂದು ದೇವರ ಬಗ್ಗೆ ಅವಹೇಳನ ಮಾಡಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ 
*   ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ 

Karnataka Districts Jan 10, 2022, 8:55 AM IST

Reasons Why we Should Celebrate Makar Sankranti skrReasons Why we Should Celebrate Makar Sankranti skr

Hindu Festivals: ನಾವೇಕೆ ಮಕರ ಸಂಕ್ರಾಂತಿ ಆಚರಿಸಲೇಬೇಕು ಎಂಬುದಕ್ಕೆ 5 ಕಾರಣಗಳು..

ಮಕರ ಸಂಕ್ರಾಂತಿಯು ಹಿಂದೂಗಳಿಗೆ ಬಹಳ ಪ್ರಮುಖವಾದ ಹಬ್ಬವಾಗಿದೆ. ಈ ದಿನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಎಳ್ಳು ಬೆಲ್ಲ ಬೀರಲಾಗುತ್ತದೆ. 

Festivals Jan 9, 2022, 12:30 PM IST

Senior Congress leader and former Madhya Pradesh chief minister Digvijaya Singh says earlier Hindu was in danger but now the PM is sanSenior Congress leader and former Madhya Pradesh chief minister Digvijaya Singh says earlier Hindu was in danger but now the PM is san

PM Modi Security Breach: ಆಗ ಹಿಂದುಗಳು ಅಪಾಯದಲ್ಲಿದ್ರು, ಈಗ ಪ್ರಧಾನಿಗೆ ಡೇಂಜರ್ ಇದೆ ಎಂದ ದಿಗ್ವಿಜಯ್ ಸಿಂಗ್!

"ನಾನು ಜೀವಂತವಾಗಿ ಮರಳಿ ಬಂದೆ" ಎಂದ ಪ್ರಧಾನಿ ಮಾತಿಗೆ ತಿರುಗೇಟು
ರೈತರು ಜೀವಂತವಾಗಿ ಮನೆಗೆ ತೆರಳಲು ಅವರು ಅವಕಾಶ ನೀಡಿಲ್ಲ ಎಂದ ದಿಗ್ವಿಜಯ್ ಸಿಂಗ್
ಮೋದಿ ಮತ್ತು ಹಿಟ್ಲರ್ ಒಂದೇ ಎಂದ ಕಾಂಗ್ರೆಸ್ ಹಿರಿಯ ನಾಯಕ

India Jan 8, 2022, 12:18 PM IST

hal recruitment 2022 notification for principal posts in bengaluru gowhal recruitment 2022 notification for principal posts in bengaluru gow

HAL Recruitment 2022: ಬೆಂಗಳೂರಿನಲ್ಲಿ ಪ್ರಿನ್ಸಿಪಾಲ್ ಹುದ್ದೆಗೆ ಅರ್ಜಿ ಆಹ್ವಾನಿಸಿದ HAL

ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.   ಕಂಪನಿಯು ಖಾಲಿ ಇರುವ ಎರಡು ಪ್ರಿನ್ಸಿಪಾಲ್  ಹುದ್ದೆಗಳನ್ನು ಭರ್ತಿ ಮಾಡಲು ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಜನವರಿ 29, 2022ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Central Govt Jobs Jan 7, 2022, 10:18 PM IST

Insult To Koragajja: Hindu Groups Hold Protest in Mangaluru rbjInsult To Koragajja: Hindu Groups Hold Protest in Mangaluru rbj
Video Icon

Insult To Koragajja ಕೊರಗಜ್ಜನ ವೇಷ ಧರಿಸಿ ವರನ ಹುಚ್ಚಾಟ, ಕಾನೂನು ಕ್ರಮಕ್ಕೆ ಆಗ್ರಹ

ಕರಾವಳಿಯ ಜನ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಕೊರಗಜ್ಜ ದೈವಕ್ಕೆ ಅವಮಾನ ಎಸಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಎಂಬಲ್ಲಿ ನಡೆದಿದೆ. ಮದುವೆ ದಿನ ವರ- ವಧುವಿನ ಮನೆಯಲ್ಲಿ ಕೊರಗಜ್ಜ ದೈವದ ರೀತಿ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದು, ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Karnataka Districts Jan 7, 2022, 7:30 PM IST

mangalore university chancellor P S Yadapadithaya  disappointed about saffron shawl vs Hijab row at Aikala Pompei College gowmangalore university chancellor P S Yadapadithaya  disappointed about saffron shawl vs Hijab row at Aikala Pompei College gow

Mangaluru College saffron shawl vs Hijab issue:ಪೊಂಪೈ ಕಾಲೇಜಿನಲ್ಲಿ ಕೇಸರಿ ಶಾಲು ವಿವಾದ, ಮಂಗಳೂರು ವಿವಿ ಕುಲಪತಿ ಅಸಮಾಧಾನ

ಮೂಲ್ಕಿಯ ಕಿನ್ನಿಗೋಳಿ ಸಮೀಪದ ಪೊಂಪೈ ಖಾಸಗಿ ಕಾಲೇಜು ಸ್ಕಾರ್ಫ್ ಮತ್ತು ಕೇಸರಿ ಶಾಲು ಧರಿಸಿ ಭಾರೀ ವಿವಾದಕ್ಕೆ ಕಾರಣವಾಯ್ತು. ಒಂದು ಕೋಮಿಗೆ ಸೇರಿದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾದ ಕಾರಣ   ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು.  

Education Jan 7, 2022, 6:53 PM IST

Intermediate Jet Trainer has cleared a major milestone says HAL chief podIntermediate Jet Trainer has cleared a major milestone says HAL chief pod

HAL HJT: ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್‌ ನಿರ್ಮಿತ ಐಜೆಟಿ ವಿಮಾನ ಪಾಸ್‌!

* ವಾಯುಪಡೆ ಪೈಲಟ್‌ಗಳ ತರಬೇತಿ ವಿಮಾನ

* ಗಿರಿಗಿಟ್ಲೆ ಪರೀಕ್ಷೆಯಲ್ಲಿ ಎಚ್‌ಎಎಲ್‌ ನಿರ್ಮಿತ ಐಜೆಟಿ ವಿಮಾನ ಪಾಸ್‌

India Jan 7, 2022, 7:36 AM IST

Telegram channel targeting Hindu women blocked by govt snrTelegram channel targeting Hindu women blocked by govt snr

Targeting Hindu Women : ಟೆಲಿಗ್ರಾಮ್ ಚಾನೆಲ್‌ ಬಂದ್‌

  •  ಹಿಂದೂ ಮಹಿಳೆಯರ ಅವಹೇಳನ : ಟೆಲಿಗ್ರಾಂ ಚಾನೆಲ್‌ ಬಂದ್‌
  • ಬುಲ್ಲೀ ಬಾಯಿ ಆ್ಯಪ್‌ ಬೆನ್ನಲ್ಲೇ ಹಿಂದೂ ಮಹಿಳೆಯರ ಫೋಟೋಗಳನ್ನು ಹಂಚಿ   ಅವಹೇಳನ

India Jan 6, 2022, 7:20 AM IST

We should allow Conversion of our people to another religion said Nirmalanandanatha Swamiji mnjWe should allow Conversion of our people to another religion said Nirmalanandanatha Swamiji mnj

Religious Conversion: ನಮ್ಮ ಧರ್ಮದವರು ಅನ್ಯಧರ್ಮಕ್ಕೆ ಹೋಗಲು ಬಿಡಬಾರದು: ನಿರ್ಮಲಾನಂದ ಶ್ರೀ

*ಏನೆಲ್ಲಾ ಪ್ರೀತಿ, ಆಮಿಷ ತೋರಿ ಸೆಳೆಯುತ್ತಿರುವ ಅನ್ಯಧರ್ಮೀಯರು
*ಸಂಪ್ರದಾಯಗಳು ಮತಾಂತರಕ್ಕೆ ಪ್ರೇರಣೆಯಾಗದಂತೆ ನೋಡಿಕೊಳ್ಳಬೇಕು
*ರಾಜ್ಯಮಟ್ಟದ ಅರ್ಚಕರ ವೃತ್ತಿ ಶಿಕ್ಷಣ ತರಬೇತಿ ಸಮಾರೋಪ ಸಮಾರಂಭದ
 

state Jan 6, 2022, 5:25 AM IST

Congress Does Not Dare to tell that they Dont want Hindu Votes Says Nalin Kumar Kateel mnjCongress Does Not Dare to tell that they Dont want Hindu Votes Says Nalin Kumar Kateel mnj

Free Hindu Temples: ಕಾಂಗ್ರೆಸ್‌ನವರು ಧಮ್‌ ಇದ್ದರೆ ಹಿಂದು ಮತಗಳು ಬೇಡವೆಂದು ಹೇಳಲಿ: ಕಟೀಲ್‌!

*ದೇವಸ್ಥಾನ ಸ್ವಾಯುತ್ತತೆ ವಿಚಾರ ಕಾಂಗ್ರೆಸ್‌ ವಿರೋಧಿಸುತ್ತಿದೆ: ನಳಿನ್‌ಕುಮಾರ್‌ ಕಟೀಲ್‌
*ಹಿಂದು ಮತಗಳು ಬೇಡವಾದರೆ, ಕಾಂಗ್ರೆಸ್‌ನವರಿಗೆ ಧಮ್‌ ಇದ್ದರೆ ಹೇಳಬೇಕು ಎಂದ ಬಿಜೆಪಿ ರಾಜ್ಯಾಧ್ಯಕ್ಷ

Politics Jan 6, 2022, 5:05 AM IST

Do you know which are the Jyotirlinga Temples in India skrDo you know which are the Jyotirlinga Temples in India skr

Hindu Temples: ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಿವು..

ದೇಶದಲ್ಲಿ 64 ಜ್ಯೋತಿರ್ಲಿಂಗಗಳಿವೆ. ಅವುಗಳಲ್ಲಿ 12 ಅತಿ ಪ್ರಮುಖವಾದವು. ಅವು ಎಲ್ಲೆಲ್ಲ ಇವೆ ಅಂದ್ರೆ..

Festivals Jan 5, 2022, 5:30 PM IST

UP Elections Yati Narsinghanand makes distasteful remarks against women podUP Elections Yati Narsinghanand makes distasteful remarks against women pod

UP Elections: 'ಹಿಂದೂಗಳೇ ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಇಲ್ಲದಿದ್ದರೆ ಸತ್ತೋಗ್ತೀರಿ'

* ಉತ್ತರ ಪ್ರದೇಶ ಚುನಾವಣೆಗೂ ಮುನ್ನ ವಿವಾದಾತ್ಮಕ ಹೇಳಿಕೆಗಳು

* ಎಫ್‌ಐಆರ್ ದಾಖಲಿಸುವುದಕ್ಕಿಂತ ನಮ್ಮನ್ನು ಕೊಲ್ಲುವುದು ಉತ್ತಮ: ನರಸಿಂಹಾನಂದ್

* ಹಿಂದೂ ಹೆಣ್ಮಕ್ಕಳಿಗೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಮನವಿ

India Jan 5, 2022, 11:31 AM IST