Asianet Suvarna News Asianet Suvarna News

ಕತ್ತಲೆಯಿದ್ದಾಗಲೇ ನಕ್ಷತ್ರಗಳನ್ನು ನೋಡಲು ಸಾಧ್ಯ ಅಂದಿದ್ಯಾಕೆ ನಟಿ ಅನುಪಮಾ ಗೌಡ?

ಆರೇಳು ವರ್ಷಗಳಲ್ಲಿ ನನಗೆ ಕೆಲವೊಂದು ರಿಯಾಲಿಟಿ ಶೋಗಳು ಸಿಕ್ಕವು. ಸಿನಿಮಾ, ಬಿಗ್ ಬಾಸ್ ಹೀಗೆ ಹಲವು ಕೆಲಸಗಳಲ್ಲಿ ಬ್ಯುಸಿಯಾದೆ. ನನ್ನ ಜೀವನದಲ್ಲಿ ಒಳ್ಳೆಯ ಸ್ನೇಹಿತರ ಪ್ರವೇಶವಾಯ್ತು. ಅವರಿಂದ ನನ್ನ ಜೀವನವೇ ಬದಲಾಯ್ತು...

Actress and Anchor Anupama Gowda talks about her life hard situation srb
Author
First Published May 2, 2024, 1:35 PM IST

ನಟಿ, ನಿರೂಪಕಿ ಅನುಪಮಾ ಗೌಡ (Anupama Gowda) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮ್ಮ ಜೀವನದಲ್ಲಿ ನಡೆದಿದ್ದ ಹಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅನುಪಮಾ ಗೌಡ 'ಹೌದು, ನಾನು ಅಂದು ಪರಿಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ಹ್ಯಾಂಡಲ್‌ ಮಾಡಬಹುದಿತ್ತು ಎಂದು ಈಗ ಅನ್ನಿಸುತ್ತಿದೆ. ಆದರೆ ಆವತ್ತು ನನಗೆ ಆ ಬಗ್ಗೆ ಅಷ್ಟು ಜ್ಞಾನವಾಗಲೀ, ಕಾನ್ಫಿಡೆನ್ಸ್ ಆಗಲೀ ಇರಲಿಲ್ಲ. ಆರೇಳು ವರ್ಷಗಳ ಹಿಂದೆ ನಾನು ಡಿಫ್ರೆಶನ್‌ಗೆ ಜಾರಿದ್ದೆ. ಮನೆ ಪರಿಸ್ಥಿತಿ, ಪರ್ಸನಲ್ ಸಮಸ್ಯೆಗಳು, ವೃತ್ತಿ ಬದುಕಿನ ಸಮಸ್ಯೆಗಳು ನನ್ನನ್ನು ಹೈರಾಣಾಗಿ ಮಾಡಿದ್ದವು. 

ಆ ಕಾರಣಕ್ಕೆ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂಬುದು ಬಹುಶಃ ಎಲ್ಲರಿಗೂ ಗೊತ್ತು. ಆದರೆ, ಇಂದು ಹಿಂತಿರುಗಿ ನೋಡಿದಾಗ ಅವೆಲ್ಲವನ್ನ ನಾನೇ ಅಚ್ಚರಇಪಟ್ಟು ನೋಡುತ್ತೇನೆ. ಏಕೆಂದರೆ, ಜೀವನದಲ್ಲಿ ನಾನೀಗ ಸಾಕಷ್ಟು ಮುಂದೆ ಬಂದಿದ್ದೇನೆ. ನನಗೀಗ ಮೂವತ್ಮೂರು ವರ್ಷ. ಆದರೆ ಆರೇಳು ವರ್ಷಗಳ ಹಿಂದೆ ನನಗೆ ಇಂದು ಇರುವಂತೆ ಸೂಕ್ತ ಸಪೋರ್ಟ್ ಇರಲಿಲ್ಲ. ನನ್ನ ಜೀವನದಲ್ಲಿ ಸರಿಯಾದ ವ್ಯಕ್ತಿಗಳು ಇರಲಿಲ್ಲ. ಆದರೆ ಇಂದು ನನ್ನ ಜೀವನ ಬಹಳಷ್ಟು ಬದಲಾಗಿದೆ. 

ಕನ್ನಡದ 'ಕಥಾನಾಯಕ' ಸಿನಿಮಾದಲ್ಲೂ ಹಾಡಿದ್ದ ತಮಿಳು ಗಾಯಕಿ ಉಮಾ ರಮಣನ್ ನಿಧನ

ಆರೇಳು ವರ್ಷಗಳಲ್ಲಿ ನನಗೆ ಕೆಲವೊಂದು ರಿಯಾಲಿಟಿ ಶೋಗಳು ಸಿಕ್ಕವು. ಸಿನಿಮಾ, ಬಿಗ್ ಬಾಸ್ ಹೀಗೆ ಹಲವು ಕೆಲಸಗಳಲ್ಲಿ ಬ್ಯುಸಿಯಾದೆ. ನನ್ನ ಜೀವನದಲ್ಲಿ ಒಳ್ಳೆಯ ಸ್ನೇಹಿತರ ಪ್ರವೇಶವಾಯ್ತು. ಅವರಿಂದ ನನ್ನ ಜೀವನವೇ ಬದಲಾಯ್ತು. ನಾನು ಡಿಫ್ರೆಶನ್‌ನಿಂದ ನಿಧಾನವಾಗಿ ಹೊರಬರಲು ಸಾಧ್ಯವಾಯಿತು. ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳೇ ನಮ್ಮನ್ನು ಸ್ಟ್ರಾಂಗ್ ಆಗಿ ಮಾಡುತ್ತವೆ. ನಮ್ಮ ಲೈಫ್‌ನಲ್ಲಿ ಬಂದ ಕೆಲವು ವ್ಯಕ್ತಿಗಳಿಂದ ನಾವು ಸಾಕಷ್ಟು ಪಾಠ ಕಲಿಯುತ್ತೇವೆ. ಮತ್ತು, ನಮಗೆ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್‌ ಮಾಡುತ್ತೇವೆ ಎಂಬುದು ಕೂಡ ತುಂಬಾ ಮುಖ್ಯವಾಗುತ್ತದೆ' ಎಂದಿದ್ದಾರೆ ಅನುಪಮಾ ಗೌಡ. 

ಮಕ್ಕಳ ಜೊತೆ ಚೆನ್ನಾಗಿರದೇ ಮೊಮ್ಮಕ್ಕಳನ್ನ ಪ್ರೀತಿಸ್ತಾರೆ; ಸಮಾಜದ ಹುಳುಕು ಹೇಳಿದ ನಟಿ ನೀತೂ!

ಅಂದಹಾಗೆ, ಸದ್ಯ ನಟಿ, ನಿರೂಪಕಿ ಅನುಪಮಾ ಗೌಡ ಅವರು ಸ್ಟಾರ್ ಸುವರ್ಣ ವಾಹಿನಿಯ 'ಸುವರ್ಣ ಜಾಕ್‌ಪಟ್ (Suvarna Jackpot)ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 22 ವಾರಗಳು, 26 ಸಂಚಿಕೆಗಳು ಹಾಗೂ 160 ಸೆಲೆಬ್ರಿಟಿಗಳ ಮೂಲಕ ಸಾಗುತ್ತಿರುವ ಸುವರ್ಣ ಜಾಕ್‌ಪಟ್ ಶೋನಲ್ಲಿ ನಿರೂಪಕಿ ಅನುಪಮಾ ಗೌಡ ಅಕ್ಷರಶಃ ಮಿಂಚುತ್ತಿದ್ದಾರೆ. ಭವಿಷ್ಯದ ಅನಿಶ್ಚಿತತೆ ಬಗ್ಗೆ ಅರಿವಿರುವ ಅನುಪಮಾ, ಸದ್ಯ ಮಾಡುತ್ತಿರುವ ಕೆಲಸದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 

ಭಾರೀ ಟ್ರೆಂಡಿಂಗ್‌ನಲ್ಲಿ 'ನಿರ್ಗತಿಕ' ಪದ.., ಬಿಸಿಬಿಸಿ ಚರ್ಚೆ; ಭಾರೀ ಟ್ರೋಲ್ ಆಗುತ್ತಿರುವ ಪ್ರಕಾಶ್ ರಾಜ್!

Latest Videos
Follow Us:
Download App:
  • android
  • ios