ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) 15 ನೇ ಋತುವಿನ ಮುಕ್ತಾಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ವಿಶ್ರಾಂತಿ ಮೋಡ್ನಲ್ಲಿ ಓಡುತ್ತಿದ್ದಾರೆ. ಈ ಸಮಯದಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ T20 ಸರಣಿಯ ಭಾಗವಾಗಿಲ್ಲ. ಇದೇ ವೇಳೆ ಬುಧವಾರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
Cricket Jun 8, 2022, 7:04 PM IST
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ, ವಿರಾಟ್ ಕೊಹ್ಲಿ ಮುದ್ದಿನ ಮಗಳು ವಮಿಕಾ ಫೋಟೋ ವೈರಲ್ ಆಗಿದೆ. ಭಾರತದ ಇನ್ನಿಂಗ್ಸ್ನಲ್ಲಿ ವಿರಾಟ್ ಅರ್ಧಶತಕವನ್ನು ಪೂರ್ಣಗೊಳಿಸಿದಾಗ ಅನುಷ್ಕಾ ಶರ್ಮಾ ತನ್ನ ಮಗಳನ್ನು ಎತ್ತಿಕೊಂಡಿದ್ದರು.
Cine World Jan 26, 2022, 2:38 PM IST
ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಭಾನುವಾರ ಕೇಪ್ಟೌನ್ನಲ್ಲಿ ನಡೆಯಿತು. ಈ ಸಮಯದಲ್ಲಿ ಈ ಪಂದ್ಯದ ವೇಳೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಪುತ್ರಿ ವಮಿಕಾ (Vamika) ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಅರ್ಧ ಶತಕ ಸಿಡಿಸಿದ ವಿರಾಟ್ರನ್ನು ಅನುಷ್ಕಾ ಹುರಿದುಂಬಿಸುತ್ತಿದ್ದರು. ಈ ಕ್ಷಣದಲ್ಲಿ ವಮಿಕಾಳ ಪೋಟೋವನ್ನು ಕ್ಲಿಕ್ ಮಾಡಿದ್ದು, ಎಲ್ಲೆಡೆ ಶೇರ್ ಮಾಡಿಕೊಳ್ಳಲಾಗಿದೆ. ವಮಿಕಾಳ ಫೋಟೋ ಸಖತ್ ವೈರಲ್ ಆಗಿದೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸೋಮವಾರ ಮತ್ತೊಮ್ಮೆ ತಮ್ಮ ಪುತ್ರಿ ವಾಮಿಕಾ ಅವರ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಪ್ರಕಟಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
Cricket Jan 24, 2022, 6:36 PM IST
ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಉತ್ತಮ ಬ್ಯಾಟಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇದಲ್ಲದೆ, ಅವರ ವೈಯಕ್ತಿಕ ಜೀವನವೂ ಎಲ್ಲರ ಗಮನ ಸೆಳೆಯುತ್ತದೆ.ಇದರಲ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರ ಪಾಲು ಸಹ ಬಹಳ. ಕಳೆದ ವರ್ಷ ಜನವರಿಯಲ್ಲಿ ಈ ದಂಪತಿಗಳು ವಾಮಿಕಾ (Vamika) ಎಂಬ ಹೆಣ್ಣು ಮಗುವನ್ನು ಸ್ವಾಗತಿಸಿದರು. ಈಗ ಮಗಳಿಗೆ ಒಂದು ವರ್ಷ ತುಂಬಿದೆ. ವಿರಾಟ್ ಮತ್ತು ತಮ್ಮ ಅನುಷ್ಕಾ ಮಂಗಳವಾರ ಮಗಳ ಫಸ್ಟ್ ಬರ್ತ್ಡೇ ಹೇಗೆ ಆಚರಿಸಿದರು ನೋಡಿ.
Cine World Jan 13, 2022, 6:25 PM IST
Cine World Jan 11, 2022, 3:58 PM IST
ಬಾಲಿವುಡ್ ನಟಿ ಅನುಷ್ಕಾ ಶರ್ಮ (Anushka Sharma) ಅವರ ಮಗಳು ವಮಿಕಾಳ (Vamika) ಪ್ರೈವೇಸಿಯ ಅಗತ್ಯವನ್ನು ನಿರಂತರವಾಗಿ ಒತ್ತಿ ಹೇಳುತ್ತಿರುತ್ತಾರೆ. ಇಲ್ಲಿ ವರೆಗೂ ಅನುಷ್ಕಾ ಶರ್ಮಾ ಹಾಗೂ ವಿರಾಟ್ ದಂಪತಿಗಳು ತಮ್ಮ ಮಗಳ ಪೋಟೋ ಅಥವಾ ವಿಡಿಯೋವನ್ನು ಶೇರ್ ಮಾಡಿಕೊಂಡಿಲ್ಲ. ಈ ನಡುವೆ ಅನುಷ್ಕಾ ಶರ್ಮ ಅವರು ಮಗಳು ವಾಮಿಕಾಳ ಫೋಟೋಗಳು ಅಥವಾ ವೀಡಿಯೊಗಳನ್ನು ಪ್ರಕಟಿಸದ ಪಾಪರಾಜಿ ಮತ್ತು ಫ್ಯಾನ್ ಕ್ಲಬ್ಗಳಿಗೆ ಧನ್ಯವಾದ ಹೇಳಿದ್ದಾರೆ. ಅನುಷ್ಕಾ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ.
Cine World Dec 22, 2021, 6:23 PM IST
Cricket Nov 10, 2021, 8:46 PM IST
ಬೆಂಗಳೂರು: ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli), ನವೆಂಬರ್ 05ರಂದು 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ರತಿ ಬಾರಿಗಿಂತ ಈ ಬಾರಿಯ ಹುಟ್ಟುಹಬ್ಬ ಕೊಹ್ಲಿ ಪಾಲಿಗೆ ಅತ್ಯಂತ ಮಹತ್ವದ ಹುಟ್ಟುಹಬ್ಬವಾಗಿದೆ. ಏಕೆಂದರೆ ಈ ಬಾರಿ ತಮ್ಮ ಮಗಳು ವಮಿಕಾ (Vamika) ಜತೆ ಕೊಹ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಯುಎಇನಲ್ಲಿದ್ದು, ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಕಳೆದ 10 ತಿಂಗಳಲ್ಲಿ ವಮಿಕಾ ಕೆಲವೊಮ್ಮೆ ತಂದೆ-ತಾಯಿ ಜತೆ ಇಂಗ್ಲೆಂಡ್ನಲ್ಲಿದ್ದಳು, ಮತ್ತೆ ಕೆಲವೊಮ್ಮೆ ದುಬೈಗೂ ತೆರಳಿದ್ದಳು. ಇವೆಲ್ಲದರ ನಡುವೆ ಅನುಷ್ಕಾ ಶರ್ಮಾ (Anushka Sharma) ಜತೆ ವಮಿಕಾ ಮುಂಬೈನಲ್ಲೂ ಕೆಲಕಾಲ ಕಳೆದಿದ್ದಳು. ಕೊಹ್ಲಿ ಹುಟ್ಟುಹಬ್ಬದ ಸಂದರ್ಭದಲ್ಲಿ ವಿರಾಟ್ ಹಾಗೂ ವಮಿಕಾ ನಡುವಿನ ಸುಂದರ ಕ್ಷಣಗಳು ಹೇಗಿದ್ದವು ಎನ್ನುವುದನ್ನು ನೋಡೋಣ ಬನ್ನಿ
Cricket Nov 5, 2021, 12:00 PM IST
ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ 10 ವಿಕೆಟ್ಗಳ ಸೋಲು ಕಂಡ ನಂತರ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ (Mohammed Shami) ಮೇಲೆ ಧರ್ಮದ ಆಧಾರದ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ನಿಂದನೆ ಮಾಡಿದ್ದರು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ಇಂತಹ ಟೀಕೆಗಳ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದರು ಮತ್ತು ಶಮಿಗೆ ಪರ ನಿಂತಿದ್ದರು. ಇದರ ಬೆನ್ನಲ್ಲೇ ನೆಟ್ಟಿಗನೊಬ್ಬ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kolhi) ಅವರ 10 ತಿಂಗಳ ಮಗಳು ವಾಮಿಕಾಗೆ (Vamika) ಅತ್ಯಾಚಾರ (Rape) ಕೊಲೆ ಬೆದರಿಕೆಯನ್ನು (death threats) ಹಾಕಿದ್ದಾನೆ. ಇದಕ್ಕೆ ಅನುಷ್ಕಾ ತಿರುಗೇಟು ನೀಡಿದ್ದಾರೆ.
Cine World Nov 4, 2021, 3:46 PM IST
ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ 10 ವಿಕೆಟ್ಗಳ ಅಂತರದ ಸೋಲು ಕಂಡ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಮೇಲೆ ಧರ್ಮದ ಆಧಾರದ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ನಿಂದನೆ ಮಾಡಿದ್ದರು.
Cricket Nov 1, 2021, 8:01 PM IST
Cricket Oct 18, 2021, 8:14 PM IST
ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಒಂದು ವಾರದ ಹಿಂದೆ ದುಬೈನಿಂದ ಮುಂಬೈಗೆ ಮರಳಿದ್ದಾರೆ. ಪತಿ ಆರ್ಸಿಬಿ (RCB)ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಬಿಟ್ಟು ಅನುಷ್ಕಾ ಮಗಳ ಜೊತೆ ಭಾರತಕ್ಕೆ ಮರಳಿದ್ದು, ಹಲವು ವಂದತಿಗಳಿಗೆ ಕಾರಣವಾಗಿತ್ತು. ಆದರೆ ವಾಸ್ತವವಾಗಿ, ಅನುಷ್ಕಾ ಶರ್ಮಾ ಮತ್ತೊಮ್ಮೆ ಸೆಟ್ಗೆ ಮರಳಿದ್ದಾರೆ ಮತ್ತು ಅವರು ಇತ್ತೀಚೆಗೆ ಶೂಟಿಂಗ್ ಸೆಟ್ನಲ್ಲಿ ಕಾಣಿಸಿಕೊಂಡರು. ಅನುಷ್ಕಾ ಸ್ವಲ್ಪ ಸಮಯದಿಂದ ಬೆಳ್ಳಿತೆರೆಯಿಂದ ದೂರವಿದ್ದರು. ಆದರೆ ಈಗ ಮಗಳು ವಾಮಿಕಾಗೆ 8 ತಿಂಗಳ ನಂತರ, ಅವರು ಮತ್ತೆ ಸಿನಿಮಾ ಜಗತ್ತಿಗೆ ಮರಳಿದರು ಮತ್ತು ತನ್ನ ಪುಟ್ಟ ಕಂದನನ್ನು ಮನೆಯಲ್ಲಿ ಬಿಟ್ಟು, ಶೂಟಿಂಗ್ನಲ್ಲಿ ನಿರತನಾಗಿದ್ದಾರೆ.
Cricket Sep 30, 2021, 10:56 AM IST
ಇಂಗ್ಲೆಂಡ್ ಟೂರ್ನಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಸಹ ಇದ್ದಾರೆ. ವಿರಾಟ್ ತಮ್ಮ ಪ್ಯಾಮಿಲಿ ಜೊತೆ ಜೂನ್ ತಿಂಗಳಿನಿಂದ ಇಂಗ್ಲೆಂಡಿನಲ್ಲಿದ್ದಾರೆ. ಸುಮಾರು ಎರಡು ತಿಂಗಳಿಗಳಿಗಿಂತ ಹೆಚ್ಚು ಸಮಯದಿಂದ ಅಲ್ಲೇ ಇರುವ ಅನುಷ್ಕಾ ಮತ್ತು ವಿರಾಟ್ ಜೊತೆಯಾಗಿ ಎಂಜಾಯ್ ಮಾಡುತ್ತಿದ್ದಾರೆ. ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಅಪ್ಡೇಟ್ ಮಾಡುತ್ತಿದ್ದಾರೆ. ವಿರುಷ್ಕಾರ ರೋಮ್ಯಾಂಟಿಕ್ ಫೋಟೋಗಳು ಸಖತ್ ವೈರಲ್ ಆಗಿವೆ
Cricket Aug 27, 2021, 6:20 PM IST
Cine World Jul 12, 2021, 9:29 AM IST
ಬಾಲಿವುಡ್ ನಟಿ ಅನುಷ್ಕಾ ಶರ್ಮ ಈ ದಿನಗಳಲ್ಲಿ ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್ನಲ್ಲಿದ್ದಾರೆ. ಇತ್ತೀಚೆಗೆ ಅನುಷ್ಕಾ ಮಗಳು ವಮಿಕಾ ಜೊತೆ ಲಂಡನ್ನ ಸ್ಟ್ರೀಟ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾರ ಈ ಫೋಟೋ ಸಖತ್ ವೈರಲ್ ಆಗಿದೆ.
Cine World Jul 1, 2021, 5:46 PM IST