Asianet Suvarna News Asianet Suvarna News

ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ, ವಿಡಿಯೋ ಟಿಕ್ ಮಾಡಿದ್ದು ಸುರ್ಜೇವಾಲ, ಹೆಚ್‌ಡಿಕೆ ಗಂಭೀರ ಆರೋಪ!

ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂಪೂರ್ಣ ರೂವಾರಿ ಡಿಕೆ ಶಿವಕುಮಾರ್, ಇಷ್ಟೇ ಅಲ್ಲ ಯಾವ ವಿಡಿಯೋ ರಿಲೀಸ್ ಮಾಡಬೇಕು ಎಂದು ಟಿಕ್ ಮಾಡಿಕೊಟ್ಟಿದ್ದು ಕಾಂಗ್ರೆಸ್ ಹೈಕಮಾಂಡ್ ರಣದೀಪ್ ಸಿಂಗ್ ಸುರ್ಜೆವಾಲ ಎಂದು ಹೆಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
 

Hassan Pend Drive Video Case Dk Shivakumar and randeep surjewala behind this Scandal says HD Kumaraswmy ckm
Author
First Published May 7, 2024, 1:22 PM IST

ಬೆಂಗಳೂರು(ಮೇ.07) ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಹೆಚ್‌ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಇದೀಗ ತೀವ್ರ ಸಂಚಲನ ಸೃಷ್ಟಿಸಿದ್ದಾರೆ. ಈ ವಿಡಿಯೋ ಪ್ರಕರಣದ ಸಂಪೂರ್ಣ ರೂವಾರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕಾಗಿ 30 ರಿಂದ 40 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಯಾವ ವಿಡಿಯೋಗಳನ್ನು ರಿಲೀಸ್ ಮಾಡಬೇಕು, ಯಾರಿಂದ ದೂರು ಕೊಡಿಸಬೇಕು ಎಂದು ಕುಳಿತು ಟಿಕ್ ಮಾಡಿದ್ದು ಕಾಂಗ್ರೆಸ್ ಹೈಕಮಾಂಡ್ ರಣದೀಪ್ ಸಿಂಗ್ ಸುರ್ಜೆವಾಲ ಎಂದು ಗಂಬೀರ ಆರೋಪ ಮಾಡಿದ್ದಾರೆ.

ಹಾಸನ ವಿಡಿಯೋ ಪ್ರಕರಣದ ರೂವಾರಿ ಡಿಕೆ ಶಿವಕುಮಾರ್. ಈ ವಿಡಿಯೋ ಪ್ರಕರಣವನ್ನು ವ್ಯವಸ್ಥಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ರೇವಣ್ಣ ಪರ ನಾನು ವಕಾಲತು ವಹಿಸುತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ ಈ ವಿಡಿಯೋ ಹಿಡಿದು ರಾಜಕೀಯ ಮಾಡಿದವರಿಗೂ ಶಿಕ್ಷೆ ಆಗಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ವಿಡಿಯೋ ಪ್ರಕರಣದಲ್ಲಿ ಹೊಸ ತಿರುವು, ನವೀನ್ ಗೌಡ ಸಂಭಾಷಣೆಯ ಆಡಿಯೋ ಪ್ಲೆ ಮಾಡಿದ ಕುಮಾರಸ್ವಾಮಿ!

ಯಾವ ವಿಡಿಯೋ ರಿಲೀಸ್ ಮಾಡಬೇಕು, ಬಿಡುಗಡೆ, ವೈರಲ್, ದೂರಿನ ಕುರಿತು ಕಾಂಗ್ರೆಸ್ ಹೈಕಮಾಂಡ್ ರಣದೀಪ್ ಸಿಂಗ್ ಸುರ್ಜೆವಾಲ ಕುಳಿತು ಟಿಕ್ ಮಾಡಿದ್ದಾರೆ. ಈ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಅಷ್ಟೇ ಪಾಲುದಾರ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನನ್ನ ಮಗ ಎಂದು ಪ್ರಜ್ವಲ್ ರೇವಣ್ಣನಿಗೆ ಹೇಳಿದ್ದೇನೆ. ನಾನ ಸಭೆಯಲ್ಲಿ ಹೇಳಿದ್ದೇನೆ ನಿಜ. ನನಗೆ ಈ ರೀತಿಯ ವಿಡಿಯೋ ಪ್ರಕರಣ ಗೊತ್ತಿರಲಿಲ್ಲ. ನಾನು ಜನನ ಭಾವನೆಗಳ ಬಗ್ಗೆ ಮಾತನಾಡಿದ್ದೇನೆ. ಆದರೆ ಡಿಕೆ ಶಿವುಕಮಾರ್ ಬೇರೆ ಬೆರೆ ಕತೆ ಕಟ್ಟಿ ಆರೋಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.  

ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬದ ಮದ್ಯೆ ಒಡಕು ಇತ್ತು. ಅದಕ್ಕೆ ಕುಮಾರಸ್ವಾಮಿ ಹೀಗೆ ಮಾಡಿದ್ದಾರೆ ಅಂತ ಡಿಕೆ ಹೇಳಿದ್ದಾರೆ. ಅವರಿಗೆ ಸ್ವಲ್ಪ ನಾದ್ರೂ ಮನುಷ್ಯತ್ವ ಇದೆಯಾ. ಮೋದಿ ಮಹಿಳೆಯರ ಕ್ಷಮೆ ಕೇಳಲಿ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಪ್ರಜ್ವಲ್ ಬಗ್ಗೆ ಸಾಫ್ಟ್ ಕಾರ್ನರ್ ಇಲ್ಲ ಅಂತ ಮೋದಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 

ಪೆನ್‌ಡ್ರೈವ್ ಡೀಲ್, ಸಂತ್ರಸ್ಥೆಯರ ರಕ್ಷಣೆಗಿಂತ ಪ್ರಚಾರ ಬಯಸುತ್ತಿದೆ ಸರ್ಕಾರ; ಹೆಚ್‌ಡಿಕೆ ವಾಗ್ದಾಳಿ!

ಪ್ರಜ್ವಲ್ ಪ್ರಕರಣದಲ್ಲಿ ಹದಿನಾರು ವರ್ಷಕ್ಕಿಂತ ಕಡಿಮೆ ವಯಸಿನ ಸಂತ್ರಸ್ಥೆಯರಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮುಂದಿನ ಪ್ರಧಾನಿ ಅಂತಾ ಅವರನ್ನು ಘೋಷಣೆ ಮಾಡಿಕೊಂಡಿದ್ದೀರಲ್ಲಾ? ಯಾವ ಆಧಾರದ ಮೇಲೆ ರಾಹುಲ್ ಈ ಹೇಳಿಕೆ ಕೊಟ್ಟ. ಪೋಕ್ಸೋ ಕೇಸ್ ಹಾಕಲು ಹೊರಟಿದ್ದೀರಾ? ಇದಕ್ಕಾಗಿ ದೂರುದಾರರನ್ನು ಹುಡುಕುತ್ತಾ ಇದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.  ನಾನೂರು ಜನ ಸಂತ್ರಸ್ಥರು ಇದಾರೆ ಅಂತಾ ಹೇಳ್ತಾರೆ. ಅವರನ್ನು ಯಾಕೆ ವಿಚಾರಣೆಗೆ ಕರೆದಿಲ್ಲ. ಯಾವನಪ್ಪ ಅದು ಎಸ್ ಐ ಟಿ ಮುಖ್ಯಸ್ಥ ಎಂದು ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
 

Latest Videos
Follow Us:
Download App:
  • android
  • ios