ಮಗಳ ಫೋಟೋ ಕ್ಲಿಕ್ ಮಾಡ್ಬೇಡಿ ಪ್ಲೀಸ್: ಮಾಧ್ಯಮಕ್ಕೆ ಕೊಹ್ಲಿ ಮನವಿ
ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಭಾನುವಾರ ಕೇಪ್‌ಟೌನ್‌ನಲ್ಲಿ ನಡೆಯಿತು. ಈ ಸಮಯದಲ್ಲಿ ಈ ಪಂದ್ಯದ ವೇಳೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಪುತ್ರಿ ವಮಿಕಾ (Vamika) ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಅರ್ಧ ಶತಕ ಸಿಡಿಸಿದ ವಿರಾಟ್‌ರನ್ನು ಅನುಷ್ಕಾ ಹುರಿದುಂಬಿಸುತ್ತಿದ್ದರು. ಈ ಕ್ಷಣದಲ್ಲಿ ವಮಿಕಾಳ ಪೋಟೋವನ್ನು ಕ್ಲಿಕ್ ಮಾಡಿದ್ದು, ಎಲ್ಲೆಡೆ ಶೇರ್ ಮಾಡಿಕೊಳ್ಳಲಾಗಿದೆ. ವಮಿಕಾಳ ಫೋಟೋ ಸಖತ್ ವೈರಲ್ ಆಗಿದೆ. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸೋಮವಾರ ಮತ್ತೊಮ್ಮೆ ತಮ್ಮ ಪುತ್ರಿ ವಾಮಿಕಾ ಅವರ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಪ್ರಕಟಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೋಮವಾರ ಮತ್ತೊಮ್ಮೆ ತಮ್ಮ ಪುತ್ರಿ ವಾಮಿಕಾ ಅವರ ಚಿತ್ರಗಳನ್ನು ಕ್ಲಿಕ್ ಮಾಡಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ನಿನ್ನೆ ನಮ್ಮ ಮಗಳ ಫೋಟೋಗಳನ್ನು ಸ್ಟೇಡಿಯಂನಲ್ಲಿ ತೆಗೆದಿರುವುದನ್ನು ಮತ್ತು ನಂತರ ಅದು ವೈರಲ್ ಅಗಿದೆ ಎಂಬುವುದು ಗೊತ್ತಾಗಿದೆ, ಎಂದು ಕೊಹ್ಲಿ ಹೇಳಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಭಾನುವಾರ ನಡೆಯಿತು. ಈ ಪಂದ್ಯದ ವೇಳೆ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. 'ನಾವು ಅಲರ್ಟ್ ಆಗಿದ್ದೇವೆ ಮತ್ತು ನಮ್ಮ ಮೇಲೆ ಕ್ಯಾಮೆರಾ ಇದೆ ಎಂದು ತಿಳಿದಿರಲಿಲ್ಲ ಎಂದು ಎಲ್ಲರಿಗೂ ತಿಳಿಸಲು ಬಯಸುತ್ತೇವೆ. ವಿಷಯದ ಬಗ್ಗೆ ನಮ್ಮ ನಿಲುವು ಮತ್ತು ವಿನಂತಿಯು ಒಂದೇ ಆಗಿರುತ್ತದೆ.
ವಿರಾಟ್ ಅರ್ಧ ಶತಕದ ನಂತರ ಅನುಷ್ಕಾ ಅವರನ್ನು ಹುರಿದುಂಬಿಸುತ್ತಿದ್ದರು. ಈ ಕ್ಷಣದಲ್ಲಿ ವಾಮಿಕಾಳ ಪೋಟೋವನ್ನು ಕ್ಲಿಕ್ ಮಾಡಲಾಗಿದೆ ಮತ್ತು ಮೊದಲ ಬಾರಿಗೆ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ ಮತ್ತು ಪ್ರಕಟಿಸಲಾಗಿದೆ. ನಾವು ಹಿಂದೆ ಹೇಳಿದ ಕಾರಣಗಳಿಗಾಗಿ ವಾಮಿಕಾಳ ಫೋಟೋಗಳನ್ನು ಕ್ಲಿಕ್ ಮಾಡಿದೆ ಮತ್ತು ಪ್ರಕಟಿಸದಿದ್ದರೆ ನಾವು ಅದನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ' ಎಂದು ಕೊಹ್ಲಿ ಹೇಳಿದ್ದಾರೆ
ವಿರಾಟ್ ಅನುಷ್ಕಾ ಮಗಳು ವಾಮಿಕಾಳ ಫೋಟೋಗಳು ಮೊದಲ ಬಾರಿಗೆ ಮಾಧ್ಯಮಗಳಲ್ಲಿ ಪ್ರಕಟವಾದವು. ಇದೇ ಮೊದಲ ಬಾರಿಗೆ ವಾಮಿಕಾಳ ಚಿತ್ರಗಳು ಎಲ್ಲಾ ಕಡೆ ಕಾಣಿಸಿಕೊಂಡವು. ಸೋಷಿಯಲ್ ಮೀಡಿಯಾದಲ್ಲಂತೂ ಕಾಡ್ಗಿಚ್ಚಿನಂತೆ ವೈರಲ್ ಆದವು.
ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ವಾಮಿಕಾ ಅವರ ಚಿತ್ರಗಳನ್ನು ತೆಗೆದುಕೊಳ್ಳಬೇಡಿ ಎಂದು ಮಾಧ್ಯಮಗಳಿಗೆ ಒತ್ತಾಯಿಸಿದ್ದರು. ವಿರಾಟ್ ಮತ್ತು ಅನುಷ್ಕಾ ಅಧಿಕೃತ ಹೇಳಿಕೆ ನೀಡಿ ವಾಮಿಕಾ ಅವರನ್ನು ಲೈಮ್ ಲೈಟ್ ನಿಂದ ದೂರವಿಡುವಂತೆ ಮನವಿ ಮಾಡಿದ್ದರು.
ಆಗ ಅವರು, 'ನಮ್ಮ ಮಗುವಿಗೆ ಸಾಮಾಜಿಕ ಮಾಧ್ಯಮ ಅರ್ಥವಾಗುವ ಮೊದಲು ನಾವು ದಂಪತಿಗಳಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸದಿರಲು ನಿರ್ಧರಿಸಿದ್ದೇವೆ' ಎಂದು ಹೇಳಿದ್ದರು. ಇತ್ತೀಚೆಗೆ, ಅನುಷ್ಕಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ವಿರಾಟ್ ಜೊತೆಗಿರುವಾಗ ತಮ್ಮ ಮಗಳು ವಾಮಿಕಾ ಅವರ ಚಿತ್ರಗಳನ್ನು ಕ್ಲಿಕ್ ಮಾಡದಿದ್ದಕ್ಕಾಗಿ ಮಾಧ್ಯಮಗಳಿಗೆ ಧನ್ಯವಾದಗಳನ್ನು ಹೇಳಿದ್ದರು.
ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 4 ರನ್‌ಗಳಿಂದ ಸೋತಿದೆ. ಆತಿಥೇಯರು ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡರು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಭಾರತವನ್ನು 2-1 ಅಂತರದಿಂದ ಸೋಲಿಸಿತ್ತು.