ನಗರದಲ್ಲಿ ಕೆಲವು ದಿನಗಳಿಂದ ವಾತಾವರಣ ಬದಲಾಗ್ತಿದ್ದಂತೆ ಸಿಟಿ ಜನರ ಆರೋಗ್ಯದಲ್ಲೂ ಏರುಪೇರು ಆಗಿದೆ. ಕಳೆದೊಂದು ತಿಂಗಳಿಂದ ಡೆಂಗ್ಯೂ ಫೀವರ್ ದುಪ್ಪಟ್ಟಾಗ್ತಿದೆ. ಸಿಕ್ಕಾಪಟ್ಟೆ ತಲೆನೋವು ಜ್ವರ ಅಂತಾ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಳವಾಗ್ತಿದೆ.
Health Dec 15, 2023, 1:16 PM IST
ಮಲ್ಲೇಶ್ವರ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅನಾರೋಗ್ಯ ಪೀಡಿತರ ದಾಖಲಾತಿ ಹೆಚ್ಚಾಗಿದೆ. ಹೀಗಾಗಿ ಐಸಿಯು ಬೆಡ್‌ಗಳು ಪೂರ್ತಿಯಾಗಿವೆ. ಇನ್ನು ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆಯೂ ಇದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇದೇ ರೀತಿಯ ಪರಿಸ್ಥಿತಿಯಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಬೆಡ್‌ಗಳು ಭರ್ತಿಯಾಗಿವೆ.
Karnataka Districts Nov 25, 2023, 5:30 AM IST
ಡಿಸೋಜಾ ದಂಪತಿಯವರ ಈ ಕಾರ್ಯ ಸನ್ಮಾನಕ್ಕೆ ಅರ್ಹವಾದದ್ದು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಕುಟುಂಬದ ಮನೆಗೆ ತೆರಳಿ, ಆಶಿಶ್ ತಂದೆ ತಾಯಿ ಇಬ್ಬರಿಗೂ ಸಾಂತ್ವಾನ ಹೇಳುವ ಜೊತೆಗೆ ಅವರ ಕಾರ್ಯವನ್ನ ಸನ್ಮಾನಿಸಿ, ನೋವಿನ ಸಂದರ್ಭವಾದರೂ ನಿಮ್ಮ ಕಾರ್ಯ ಇತರರಿಗೆ ಮಾದರಿ ಎಂದು ಕೈ ಮುಗಿದ ಸಚಿವ ದಿನೇಶ್ ಗುಂಡೂರಾವ್
Karnataka Districts Oct 18, 2023, 11:15 PM IST
ಮಕ್ಕಳನ್ನು ಶಾಲೆಗೆ ಕಳುಹಿಸದೆ ಆರೋಗ್ಯದ ಬಗ್ಗೆ ಕೇರ್ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಈಡಿಸ್ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತಿದ್ದು, 5-7 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
state Sep 20, 2023, 9:30 PM IST
ರಾಜ್ಯ ಆರೋಗ್ಯ ಇಲಾಖೆ, ಬಿಬಿಎಂಪಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆರ್ಚ್ ಪಾರ್ಕ್ ಸಹಭಾಗಿತ್ವದಲ್ಲಿ ಡೆಂಘಿ ಮತ್ತಿತರ ರೋಗಗಳ ಮೇಲೆ ನಿಗಾ ಇಡಲು ಅಧಿಕಾರಿಗಳಿಗೆ ನೆರವಾಗುವ ರೋಗ ಕಣ್ಗಾ ವಲು ಡ್ಯಾಶ್‌ಬೋರ್ಡ್ ಹಾಗೂ PRISM-Hಮೊಬೈಲ್ ಅಪ್ಲಿಕೇಶನ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಐಐಎಸ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಚಾಲನೆ ನೀಡಿದ್ದಾರೆ.
Health Sep 9, 2023, 8:19 AM IST
ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಮಾರನ್ ಅವರು, ತಮ್ಮ ತಲೆ ಕತ್ತರಿಸಿದರೆ 10 ಕೋಟಿ ರು. ನೀಡುವುದಾಗಿ ಹೇಳಿರುವ ಅಯೋಧ್ಯೆಯ ಪರಮಹಂಸ ಆಚಾರ್ಯ ಶ್ರೀಗಳಿಗೆ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.
India Sep 6, 2023, 9:56 AM IST
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮತ್ತು ಬಿಸಿಲ ವಾತಾವರಣ ಇರುವ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ಒಂದೇ ತಿಂಗಳಿನಲ್ಲಿಯೇ ಬರೋಬ್ಬರಿ 2 ಸಾವಿರಕ್ಕೂ ಅಧಿಕ ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ.
Karnataka Districts Sep 6, 2023, 7:23 AM IST
ಈ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆಗೆ ಕಾರಣವಾಗಿದ್ದು, ತಮಿಳುನಾಡು ಸಚಿವರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಲವರು ಕರೆ ನೀಡಿದ್ದಾರೆ.
India Sep 3, 2023, 9:36 AM IST
ಕಳೆದ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ದ.ಕ. ಜಿಲ್ಲೆಯಲ್ಲಿ ಡೆಂಘೀ, ಮಲೇರಿಯಾ ಸೋಂಕಿನ ಪ್ರಕರಣಗಳು ಅತ್ಯಂತ ಕನಿಷ್ಠ ದಾಖಲಾಗಿದ್ದರೂ, ಬೆಂಗಳೂರು ಮತ್ತು ಮೈಸೂರಿನಲ್ಲಿ ಡೆಂಘೀ ಪ್ರಕರಣಗಳು ಏರಿಕೆಗತಿಯಲ್ಲಿ ಇರುವುದರಿಂದ ದ.ಕ. ಜಿಲ್ಲೆಯಲ್ಲೂ ಜನರು ಎಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ
Health Aug 27, 2023, 10:14 PM IST
ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಆಗಸ್ಟ್ 20ರವರೆಗೆ ಜಿಲ್ಲೆಯಲ್ಲಿ ಒಟ್ಟು 163 ಡೆಂಘೀ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿ ಡೆಂಘೀ ಜ್ವರ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ 187 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದವು. ಆ ವೇಳೆ ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿಯೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಇಂದಿನವರೆಗೆ 163 ಪ್ರಕರಣಗಳು ದಾಖಲಾಗಿವೆ. ಮುಂದಿನ ತಿಂಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
Health Aug 20, 2023, 9:45 PM IST
ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಡೆಂಘೀ ಜ್ವರದ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಜುಲೈ ತಿಂಗಳಿನಲ್ಲಿಯೇ ಬರೋಬ್ಬರಿ 2,489 ಪ್ರಕರಣಗಳು ದೃಢಪಟ್ಟಿವೆ.
state Jul 31, 2023, 2:40 AM IST
ನಿರಂತರ ಮಳೆ ಹಾಗೂ ತಂಪು ವಾತಾವರಣದಿಂದ ನೆಗಡಿ, ಕೆಮ್ಮು ಹಾಗೂ ಡೆಂಘೀ, ಚಿಕೂನ್‌ಗುನ್ಯಾನಂತಹ ಸಾಂಕ್ರಾಮಿಕ ರೋಗಗಳ ಕಾಟ ಒಂದೆಡೆಯಾದರೆ, ಇತ್ತೀಚೆಗೆ ಹೊಸದಾಗಿ ಮದ್ರಾಸ್ ಐ ಎಂಬ ಕಣ್ಣು ನೋವಿನ ಬಾಧೆ ಜಿಲ್ಲೆಯ ಜನತೆಯನ್ನು ತೀವ್ರವಾಗಿ ಕಾಡುತ್ತಿದೆ.
state Jul 30, 2023, 5:57 AM IST
ಆಗಾಗ ಮಳೆ, ಬಿಸಿಲು ವಾತಾವರಣದಿಂದ ನಗರದಲ್ಲಿ ಡೇಂಜರಸ್ ಡೆಂಘಿ ಪ್ರಕರಣಗಳು ಹೆಚ್ಚಳವಾಗಿರೋದು ಆತಂಕ ಮೂಡಿಸಿದೆ. ದಿನಬಿಟ್ಟು ದಿನ ಮಳೆ ಬರುತ್ತಿರುವುದರಿಂದ ಸೊಳ್ಳೆಗಳು ಹೆಚ್ಚುತ್ತಿವೆ. ಕೊಳಚೆ ಪ್ರದೇಶ, ನಿಂತ ಚರಂಡಿ ನೀರಲ್ಲಿ ಸೊಳ್ಳೆಗಳು ಹೆಚ್ಚಳ. ಮನೆ ಸುತ್ತಮುತ್ತ ಕೊಳಚೆ ನೀರು ನಿಂತಿದ್ದರೆ ಅಪಾಯ ಕಟ್ಟಿಟ್ಟಬುತ್ತಿ!
Health Jul 24, 2023, 9:46 AM IST
ಕಳೆದ 15 ದಿನದಿಂದ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆ ಹಾಗೂ ಬಿಸಿಲಿನ ವಾತಾವರಣ ಇರುವುದರಿಂದ ಸೊಳ್ಳೆಯ ಉತ್ಪತ್ತಿಗೆ ಅತ್ಯಂತ ಅನುಕೂಲವಾಗಿ ಪರಿಸರ ಸೃಷ್ಟಿಯಾಗಿದೆ. ಹೀಗಾಗಿ, ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ.
Karnataka Districts Jul 14, 2023, 4:28 AM IST
ಡೆಂಘೀ ಜ್ವರದ ಕಾರಣ ನೂರಾರು ಸಂಖ್ಯೆಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ನಗರ, ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ರೋಗ ಭೀತಿಯಿಂದ ಹಾಗೂ ಲಕ್ಷಣದಿಂದ ಜನರು ತತ್ತರಿಸಿದ್ದಾರೆ.
Health Dec 23, 2022, 11:00 PM IST