ಮಂಗಳೂರು: ಪುತ್ರ ಶೋಕದಲ್ಲೂ ಮಗನ ಅಂಗಾಂಗ ದಾನ, ದಂಪತಿ ಕಾರ್ಯಕ್ಕೆ ಸಚಿವ ಗುಂಡೂರಾವ್ ಶ್ಲಾಘನೆ

ಡಿಸೋಜಾ ದಂಪತಿಯವರ ಈ ಕಾರ್ಯ ಸನ್ಮಾನಕ್ಕೆ ಅರ್ಹವಾದದ್ದು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಕುಟುಂಬದ ಮನೆಗೆ ತೆರಳಿ, ಆಶಿಶ್ ತಂದೆ ತಾಯಿ ಇಬ್ಬರಿಗೂ ಸಾಂತ್ವಾನ ಹೇಳುವ ಜೊತೆಗೆ ಅವರ ಕಾರ್ಯವನ್ನ ಸನ್ಮಾನಿಸಿ, ನೋವಿನ ಸಂದರ್ಭವಾದರೂ ನಿಮ್ಮ ಕಾರ್ಯ ಇತರರಿಗೆ ಮಾದರಿ ಎಂದು ಕೈ ಮುಗಿದ ಸಚಿವ ದಿನೇಶ್ ಗುಂಡೂರಾವ್ 

Dinesh Gundu Rao Appreciation to Who Parents Organ Donate Their Son in Mangaluru grg

ಮಂಗಳೂರು(ಅ.18):  ಮಂಗಳೂರಿನ ಆಶಿಶ್ ಡಿಸೋಜಾ ಎಂಬ 13 ವರ್ಷದ ಬಾಲಕ ಡೆಂಘಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಆದರೆ ಪುತ್ರ ಶೋಕದಲ್ಲೂ ಅಂಗಾಂಗ ದಾನ ಮಾಡುವ ಶ್ರೇಷ್ಠ ನಿರ್ಧಾರ ತೆಗೆದುಕೊಂಡ ಆಶಿಶ್ ತಂದೆ ಅಲ್ಫೋನ್ಸ್ ತಾಯಿ ಸೋನಿಯಾ ಡಿಸೋಜಾ ನಿಜಕ್ಕೂ ಆದರ್ಶ ದಂಪತಿಯಾಗಿದ್ದಾರೆ.  ಅಗತ್ಯ ಚಿಕಿತ್ಸೆ ಪಡೆದ ಬಳಿಕ ಡೆಂಘಿ ಜ್ವರದಿಂದ ಗುಣಮುಖರಾಗಿದ್ದ ಆಶಿಶ್, ಇನ್ನೇನು ಮನೆಗೆ ತೆರಳಲು ತಯಾರಿ ನಡೆಸುವ ಸಂದರ್ಭದಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು. 

ಆಶಿಶ್ ತಂದೆ ಅಲ್ಫೋನ್ಸ್, ತಾಯಿ ಸೋನಿಯಾ ಡಿಸೋಜಾ ತಮ್ಮ ಪುತ್ರರ ಎದುರು ಅಂಗಾಂಗ ದಾನದ ಮಹತ್ವದ ಬಗ್ಗೆ ಸದಾ ಮಾತನಾಡುತ್ತಿದ್ದರು. ತಾವು ನಿಧನರಾದರೆ ತಮ್ಮ ಅಂಗಾಂಗಗಳನ್ನ ದಾನ ಮಾಡುವಂತೆ ದಂಪತಿಗಳು ತಮ್ಮ ಮಕ್ಕಳಿಗೆ ಸೂಚನೆ ನೀಡಿದ್ದರು. 

ಫುಟ್ ಪಾತ್ ಮೇಲೆ ಕಾರು ಹತ್ತಿಸಿ ಹಿಟ್ ಆಂಡ್‌ ರನ್‌ಗೆ ಯುವತಿ ಬಲಿ: ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ದುರಾದೃಷ್ಟವಷಾತ್‌ ತಮ್ಮ ಕಣ್ಣೆದುರೇ ಪುತ್ರನ ಸಾವನ್ನ ನೋಡಬೇಕಾಗಿ ಬಂತು. ಅತ್ಯಂತ ನೋವಿನ ಸಂದರ್ಭದಲ್ಲೂ ತಾವು ಪಾಲಿಸಬೇಕು ಎಂದುಕೊಂಡಿದ್ದ ಆದರ್ಶ ಮರೆಯದ ಅಲ್ಫೋನ್ ಮತ್ತು ಸೋನಿಯಾ ಡಿಸೋಜಾ, ಪುತ್ರ ಆಶಿಶ್‌ನ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡರು. 

ಆಶಿಶ್‌ನ ಎರಡು ಕಣ್ಣುಗಳನ್ನ ದಾನ ಮಾಡುವುದರ ಜೊತೆಗೆ ದೇಹ ದಾನವನ್ನ ಕೂಡ ಮಾಡಿದ್ದರೆ. ದಂಪತಿಯ ಈ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಇತರರಿಗೆ ಪ್ರೇರಣೆಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.  

ಡಿಸೋಜಾ ದಂಪತಿಯವರ ಈ ಕಾರ್ಯ ಸನ್ಮಾನಕ್ಕೆ ಅರ್ಹವಾದದ್ದು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಕುಟುಂಬದ ಮನೆಗೆ ತೆರಳಿ, ಆಶಿಶ್ ತಂದೆ ತಾಯಿ ಇಬ್ಬರಿಗೂ ಸಾಂತ್ವಾನ ಹೇಳುವ ಜೊತೆಗೆ ಅವರ ಕಾರ್ಯವನ್ನ ಸಚಿವ ದಿನೇಶ್ ಗುಂಡೂರಾವ್ ಸನ್ಮಾನಿಸಿದರು. ನೋವಿನ ಸಂದರ್ಭವಾದರೂ ನಿಮ್ಮ ಕಾರ್ಯ ಇತರರಿಗೆ ಮಾದರಿ ಎಂದು ಕೈ ಮುಗಿದರು.

Latest Videos
Follow Us:
Download App:
  • android
  • ios