ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ, ಖಲಿಸ್ತಾನ ಲಿಂಕ್‌ ಕುರಿತಾಗಿ ಎನ್‌ಐಎ ತನಿಖೆಗೆ ಶಿಫಾರಸು


ಖಲಿಸ್ತಾನ್ ಪರ ಸಂಸ್ಥೆಯಿಂದ ಹಣ ಪಡೆದ ಆರೋಪದ ಮೇಲೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ್ದಾರೆ.

funding from pro-Khalistan body Delhi Lt Governor recommends NIA probe Arvind Kejriwal san

ನವದೆಹಲಿ (ಮೇ.6): ಅಕ್ರಮ ಮದ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಮತ್ತೊಂದು ಬಹುದೊಡ್ಡ ಆರೋಪ ಎದುರಾಗಿದೆ. ದೇಶದಲ್ಲಿ ನಿಷೇಧಿತ ಸಂಘಟನೆಯಾಗಿರುವ ಖಲಿಸ್ತಾನಿ ಪರ ಸಂಸ್ಥೆಯಿಂದ ಹಣ ಪಡೆದ ಆರೋಪದ ಮೇಲೆ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು ಮಾಡಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಅಮೆರಿಕ ಮೂಲದ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ನಿಂದ ರಾಜಕೀಯ ನಿಧಿ ಪಡೆದ ಆರೋಪ ಅರವಿಂದ್‌ ಕೇಜ್ರಿವಾಲ್‌ ಅವರ ಮೇಲಿದೆ. 

ಖಲಿಸ್ತಾನಿ ಗ್ರೂಪ್‌ ನಾಯಕರೊಂದಿಗೆ ನಂಟು ಇರುವ ಆರೋಪವೂ ಅರವಿಂದ್‌ ಕೇಜ್ರಿವಾಲ್‌ ಮೇಲಿದೆ. ಆಪ್ ಪಕ್ಷಕ್ಕೆ ಖಾಲಿಸ್ತಾನಿ ಸಹಾನುಭೂತಿ ವುಳ್ಳವರಿಂದ ಹಣ ಸಂದಾಯವಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಚುನಾವಣೆ ಹೊತ್ತಲ್ಲಿ ಕೇಜ್ರಿವಾಲ್‌ಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದೆ. 2014 ರಿಂದ 2022 ರವರೆಗೂ 16 ಮಿಲಿಯನ್ ಡಾಲರ್ ಹಣವನ್ನು ಕೆ ಗ್ರೂಪ್, ಆಪ್‌ಗೆ ಫಂಡ್ ಮಾಡಿದೆ ಎಂದು ಆರೋಪಿಸಲಾಗಿದೆ.

ದೇವೇಂದ್ರ ಪಾಲ್ ಭುಲ್ಲರ್ ಅವರ ಬಿಡುಗಡೆಗೆ ಅನುಕೂಲ ಮಾಡಿಕೊಡಲು ಮತ್ತು ಖಲಿಸ್ತಾನಿ ಪರ ಭಾವನೆಗಳನ್ನು ತುಂಬಲು ಎಎಪಿ ಉಗ್ರ ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಯುಎಸ್‌ ಡಾಲರ್‌ ಹಣ ಪಡೆದಿದೆ ಎಂದು ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ದೂರು ಸ್ವೀಕರಿಸಿದ್ದರು. ಮುಖ್ಯಮಂತ್ರಿಯೊಬ್ಬರ ವಿರುದ್ಧ ದೂರು ನೀಡಲಾಗಿರುವುದರಿಂದ ಮತ್ತು ನಿಷೇಧಿತ ಸಂಘಟನೆಯಿಂದ ಪಡೆದ ರಾಜಕೀಯ ನಿಧಿಗೆ ಸಂಬಂಧಿಸಿರುವುದರಿಂದ, "ದೂರುದಾರರು ಸೇರಿಸಿರುವ ಎಲೆಕ್ಟ್ರಾನಿಕ್ ಪುರಾವೆಗಳು ವಿಧಿವಿಜ್ಞಾನ ಪರೀಕ್ಷೆ ಸೇರಿದಂತೆ ತನಿಖೆಯ ಅಗತ್ಯವಿದೆ" ಎಂದು ಅವರು ತಿಳಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಅವರು ಗೃಹ ವ್ಯವಹಾರಗಳ ಸಚಿವಾಲಯವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ, ಕೇಜ್ರಿವಾಲ್ ಅವರು ಜನವರಿ 2014 ರಲ್ಲಿ ಒಬ್ಬ ಇಕ್ಬಾಲ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ "ಎಎಪಿ ಸರ್ಕಾರವು ಈಗಾಗಲೇ ಭುಲ್ಲರ್ ಅವರನ್ನು ಬಿಡುಗಡೆ ಮಾಡುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದೆ' ಎಂದು ತಿಳಿಸಿದ್ದರು. ಭುಲ್ಲರ್ ಬಿಡುಗಡೆಗೆ ಲಿಖಿತ ಭರವಸೆ ನೀಡುವಂತೆ ಒತ್ತಾಯಿಸಿ ಇಕ್ಬಾಲ್ ಸಿಂಗ್ ಜಂತರ್ ಮಂತರ್ ನಲ್ಲಿ ಉಪವಾಸ ಕುಳಿತಿದ್ದರು. ಕೇಜ್ರಿವಾಲ್ ಅವರಿಂದ ಪತ್ರ ಸ್ವೀಕರಿಸಿದ ನಂತರ ಅವರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು.

ದೂರಿನಲ್ಲಿ ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥರು ಬಿಡುಗಡೆ ಮಾಡಿದ ವೀಡಿಯೊವನ್ನು ಉಲ್ಲೇಖಿಸಲಾಗಿದೆ ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರು 2014 ಮತ್ತು 2022 ರ ನಡುವೆ ಆಪ್‌ಗೆ,  ಖಲಿಸ್ತಾನಿ ಗುಂಪುಗಳಿಂದ ಯುಎಸ್‌ಡಿ 16 ಮಿಲಿಯನ್ ನೀಡಲಾಗಿದೆ ಎನ್ನುವ ವಿಡಿಯೋ ಇದಾಗಿದೆ.

ಕೇಜ್ರಿವಾಲ್ ಅವರು 2014 ರಲ್ಲಿ ನ್ಯೂಯಾರ್ಕ್‌ನ ಗುರುದ್ವಾರ ರಿಚ್ಮಂಡ್ ಹಿಲ್ಸ್‌ನಲ್ಲಿ ಖಲಿಸ್ತಾನಿ ನಾಯಕರೊಂದಿಗೆ ಕ್ಲೋಸಡ್‌ ಡೋರ್‌ ಸಭೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಖಲಿಸ್ತಾನಿ ಬಣಗಳಿಂದ ಎಎಪಿಗೆ ಗಣನೀಯ ಆರ್ಥಿಕ ಬೆಂಬಲಕ್ಕಾಗಿ ಪ್ರತಿಯಾಗಿ ಭುಲ್ಲರ್ ಬಿಡುಗಡೆಗೆ ಅನುಕೂಲ ಮಾಡಿಕೊಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದ್ದರು ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿಯು ಹೇಳಿಕೊಂಡಿದೆ.

ಚುನಾವಣೆ ಟೈಮ್‌ನಲ್ಲೇ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌ ಮಾಡಿದ್ದೇಕೆ? ಇಡಿಗೆ ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್‌

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳ ಸರಣಿಯಲ್ಲಿ, ಮಾಜಿ ಎಎಪಿ ಕಾರ್ಯಕರ್ತ ಡಾ ಮುನೀಶ್ ಕುಮಾರ್ ರೈಜಾಡಾ ಅವರು ಖಲಿಸ್ತಾನಿ ನಾಯಕರೊಂದಿಗಿನ ಕೇಜ್ರಿವಾಲ್ ಅವರ ಸಭೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹಣ ವರ್ಗಾವಣೆ ಮತ್ತು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್‌  ಕೇಜ್ರಿವಾಲ್‌ ಏಪ್ರಿಲ್ 1 ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.

 

ವೈದ್ಯರ ಸೂಚನೆ ಮೀರಿ, ಶುಗರ್ ಏರುವ ಆಹಾರವನ್ನು ಅರವಿಂದ್‌ ಕೇಜ್ರಿವಾಲ್‌ಗೆ ನೀಡಲಾಗಿದೆ: ಕೋರ್ಟ್‌

Latest Videos
Follow Us:
Download App:
  • android
  • ios