ಸನಾತನ ಧರ್ಮದ ಬಗ್ಗೆ ಹೇಳಿಕೆ: ಬೆದರಿಕೆಗಳಿಗೆಲ್ಲ ನಾ ಹೆದರಲ್ಲ: ಉದಯನಿಧಿ
ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಮಾರನ್ ಅವರು, ತಮ್ಮ ತಲೆ ಕತ್ತರಿಸಿದರೆ 10 ಕೋಟಿ ರು. ನೀಡುವುದಾಗಿ ಹೇಳಿರುವ ಅಯೋಧ್ಯೆಯ ಪರಮಹಂಸ ಆಚಾರ್ಯ ಶ್ರೀಗಳಿಗೆ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ.

ಚೆನ್ನೈ/ಅಯೋಧ್ಯೆ: ಸನಾತನ ಧರ್ಮ ಡೆಂಘೀ, ಮಲೇರಿಯಾ ಇದ್ದಂತೆ ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದಿದ್ದ ತಮಿಳುನಾಡು ಸಚಿವ ಉದಯನಿಧಿ ಮಾರನ್ ಅವರು, ತಮ್ಮ ತಲೆ ಕತ್ತರಿಸಿದರೆ 10 ಕೋಟಿ ರು. ನೀಡುವುದಾಗಿ ಹೇಳಿರುವ ಅಯೋಧ್ಯೆಯ ಪರಮಹಂಸ ಆಚಾರ್ಯ ಶ್ರೀಗಳಿಗೆ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ. ಇಂಥ ಬೆದರಿಕೆಗೆ ನಾನು ಹೆದರಲ್ಲ. 10 ಕೋಟಿ ರು. ಏಕೆ? ನನ್ನ ತಲೆ ಕತ್ತರಿಸಲು 10 ರು. ಬಾಚಣಿಕೆ ಸಾಕು ಎಂದಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಉದಯನಿಧಿ, ‘ತಮಿಳುನಾಡಿಗೆ ತಮ್ಮ ಜೀವವನ್ನೇ ಸವೆಸಿದ ಕರುಣಾನಿಧಿ (Karunanidhi) ಅವರ ಮೊಮ್ಮಗ ನಾನು. ಬೆದರಿಕೆಗಳಿಗೆ ಹೆದರುವವನಲ್ಲ. ನನ್ನ ತಲೆ ಕತ್ತರಿಸಲು 10 ರು. ಬಾಚಣಿಕೆ ಸಾಕು ಎಂದರು. ತಮಿಳಿನಲ್ಲಿ ತಲೆ ಬಾಚುವುದಕ್ಕೆ ತಲೆ ತೆಗೆಯುವುದು/ಕತ್ತರಿಸುವುದು ಎಂದೂ ಹೇಳುತ್ತಾರೆ. ಹೀಗಾಗಿ ಉದಯನಿಧಿ ಈ ಮಾತು ಹೇಳಿದ್ದಾರೆ.
ಡಿಎಂಕೆಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದೂ ಧರ್ಮವೇ ಬೇಕಾ?
ಇನ್ನಷ್ಟು ಹಣ ಕೊಡುವೆ
ಈ ನಡುವೆ, ಉದಯನಿಧಿ ತಲೆ ತೆಗೆಯಲು .10 ಕೋಟಿ ಸಾಲದಿದ್ದರೆ ಇನ್ನಷ್ಟು ಹಣ ಕೊಡುವೆ. ಯಾರೂ ತೆಗೆಯಲು ಆಗದಿದ್ದರೆ ನಾನೇ ಹೋಗಿ ತಲೆ ಕತ್ತರಿಸುವೆ ಎಂದು ಅಯೋಧ್ಯಾ ಶ್ರೀ ಪರಮಹಂಸ ಆಚಾರ್ಯರು (Ayodhya Paramahamsa Acharya) ಗುಡುಗಿದ್ದಾರೆ. ಈ ನಡುವೆ, ಉದಯನಿಧಿ ತಲೆ ಕತ್ತರಿಸುವ ಶ್ರೀಗಳ ಹೇಳಿಕೆ ಖಂಡಿಸಿ ತಮಿಳುನಾಡಿನ ವಿವಿಧ ಕಡೆ ಡಿಎಂಕೆ ಕಾರ್ಯಕರ್ತರು, ಶ್ರೀಗಳ ಪ್ರತಿಕೃತಿ ದಹಿಸಿದ್ದಾರೆ.
ಉದಯನಿಧಿ ವಿರುದ್ಧ ಕ್ರಮ ಕೋರಿ ಸಿಜೆಐಗೆ 260 ಗಣ್ಯರ ಪತ್ರ
ನವದೆಹಲಿ: ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ನಿರ್ಮೂಲನೆ ಹೇಳಿಕೆಯನ್ನು ದ್ವೇಷ ಭಾಷಣ ಎಂದು ಪರಿಗಣಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದಂತೆ 260 ಕ್ಕೂ ಹೆಚ್ಚು ಪ್ರಖ್ಯಾತ ನಾಗರಿಕರು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ ಅವರಿಗೆ ಪತ್ರ ಬರೆದಿದ್ದಾರೆ.
ಸನಾತನ ಧರ್ಮದ ಬಗ್ಗೆ ಗೌರವವಿದೆ ಆದರೆ... ಉದಯನಿಧಿ ವಿವಾದಕ್ಕೆ ಮಮತಾ ರಿಯಾಕ್ಷನ್
ದಿಲ್ಲಿ ಹೈಕೋರ್ಟ್ ನಿವೃತ್ತ ನ್ಯಾ. ಎಸ್.ಎನ್. ಧಿಂಗ್ರಾ ಸೇರಿ ಅನೇಕರು ಸಹಿ ಮಾಡಿದ್ದು, ಉದಯನಿಧಿ ದ್ವೇಷ ಭಾಷಣ ಮಾಡಿದ್ದಲ್ಲದೆ, ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಇದು ದೊಡ್ಡ ಜನಸಂಖ್ಯೆಯ ವಿರುದ್ಧ ದ್ವೇಷ ಭಾಷಣ ಎನ್ನಬಹುದು. ಜಾತ್ಯತೀತ ಭಾರತದ ಕಲ್ಪನೆಯನ್ನು ಜನರ ಮುಂದೆ ಇರಿಸುವ ಭಾರತದ ಸಂವಿಧಾನದ ತಿರುಳನ್ನು ಇಂಥ ಹೇಳಿಕೆ ಅಳಿಸಿ ಹಾಕುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ದೇಶದ ಜಾತ್ಯತೀತ ಸ್ವರೂಪ ರಕ್ಷಿಸಲು ಅವರ ವಿರುದ್ಧ ಕ್ರಮ ಅಗತ್ಯ ಎಂದು ಆಗ್ರಹಿಸಿದ್ದಾರೆ. 14 ನಿವೃತ್ತ ನ್ಯಾಯಾಧೀಶರು, 130 ನಿವೃತ್ತ ಅಧಿಕಾರಿಗಳು ಮತ್ತು 118 ನಿವೃತ್ತ ಸಶಸ್ತ್ರ ಪಡೆಗಳ ಅಧಿಕಾರಿಗಳು ಸೇರಿದಂತೆ 262 ಜನರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.