Asianet Suvarna News Asianet Suvarna News
615 results for "

India Gate

"
how Smriti Irani miss broadcasting ministryhow Smriti Irani miss broadcasting ministry

ಸ್ಮೃತಿ ಇರಾನಿ ಮಾಹಿತಿ ಮತ್ತು ಪ್ರಸಾರ ಖಾತೆ ಕಳೆದುಕೊಂಡಿದ್ದು ಹೇಗೆ?

ಇಬ್ಬರು ಪತ್ರಕರ್ತರನ್ನು ದೂರದರ್ಶನಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ಸಚಿವೆ ಸ್ಮತಿ ಇರಾನಿ ಹಾಗೂ ಪ್ರಸಾರ ಭಾರತಿ ಮುಖ್ಯಸ್ಥ ಅರಕಲಗೂಡು ಸೂರ್ಯಪ್ರಕಾಶ್ ನಡುವಿನ ಜಗ್ಗಾಟದಿಂದಲೇ ಸ್ಮತಿ ವಾರ್ತಾ ಮತ್ತು ಪ್ರಸಾರ ಇಲಾಖೆ ಕಳೆದುಕೊಂಡು ಜವಳಿ ಖಾತೆಗೆ ಮರಳಿ ಹೋದರು ಎಂದು ಶಾಸ್ತ್ರಿ ಭವನದಿಂದ ಬರುತ್ತಿರುವ ಸುದ್ದಿಗಳು ಹೇಳುತ್ತಿವೆ.

Jun 12, 2018, 6:03 PM IST

Jaitley undergoes kidney transplant: Piyush Goyal to take additional chargeJaitley undergoes kidney transplant: Piyush Goyal to take additional charge

ಕಚೇರಿಗೆ ಬಂದರೂ ಕುರ್ಚಿ ಮೇಲೆ ಕೂರುವುದಿಲ್ಲವಂತೆ ಪಿಯೂಶ್ ಗೋಯಲ್!

ಕಿಡ್ನಿ ಕಸಿ ಮಾಡಿಸಿಕೊಂಡಿರುವ ಅರುಣ್ ಜೇಟ್ಲಿ ಆಸ್ಪತ್ರೆಯಿಂದ ಮನೆಗೆ ವಾಪಸ್ ಆಗಿದ್ದು, ಸೋಂಕು ತಗಲುವ ಭೀತಿಯಿಂದ ವೈದ್ಯರು ಯಾರನ್ನು ಕೂಡ ಭೇಟಿಯಾಗಲು ಬಿಡುತ್ತಿಲ್ಲ. ಜೇಟ್ಲಿ ಆಸ್ಪತ್ರೆ ಸೇರಿದ್ದರಿಂದ ಹಣಕಾಸು ಇಲಾಖೆ ಪ್ರಭಾರವನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುತ್ತಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೌತ್  ಬ್ಲಾಕ್‌ನ ಹಣಕಾಸು ಮಂತ್ರಿಯ ಕಚೇರಿಗೆ ಬರುತ್ತಾರಾದರೂ ಕೂಡ ಮಿನಿಸ್ಟರ್ ಕುರ್ಚಿ ಮೇಲೆ ಕೂರದೆ ಪಕ್ಕದಲ್ಲಿರುವ ಸೋಫಾ ಮೇಲೆ ಕುಳಿತು ಸಭೆ ನಡೆಸುತ್ತಾರೆ.

Jun 12, 2018, 5:36 PM IST

It is difficult to oppose JDS Supremo Deve Gowda's DecisionIt is difficult to oppose JDS Supremo Deve Gowda's Decision

ದೊಡ್ಡ ಗೌಡರನ್ನು ಎದುರು ಹಾಕ್ಕೋಳೋದು ಬಹಳ ಕಷ್ಟ!

‘ಏನ್ ಮಾಡೋದು ರೀ.. ರೇವಣ್ಣ  ಅಂದ್ರೆ ನಮ್ಮ ದೊಡ್ಡ ಗೌಡರಿಗೆ ಬಹಳಾನೇ ಮುದ್ದು. ನಾವು ಎದುರು ಹಾಕಿಕೊಂಡರೆ ಕಷ್ಟ. ಅಡ್ಜಸ್ಟ್ ಮಾಡಿಕೊಳ್ಳಲೇಬೇಕು’ ಎಂದು ಬುದ್ಧಿವಾದ ಹೇಳಿದರಂತೆ. ಯಾರು ಹೇಳಿದ್ದು? ಯಾಕೆ ಹೇಳಿದ್ದು? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.  

Jun 12, 2018, 4:35 PM IST

Siddaramaiah warning to Congress High CommandSiddaramaiah warning to Congress High Command

ನನ್ನನ್ನು ಕಡೆಗಣಿಸಿ ಸರ್ಕಾರ ನಡೆಸುತ್ತೇವೆ ಎಂದುಕೊಂಡಿದ್ದರೆ ಹುಷಾರ್: ಸಿದ್ದರಾಮಯ್ಯ

ಸಿದ್ದರಾಮಯ್ಯ ‘ನೋಡಿ ನಾನು ಹೇಗೆ 5 ವರ್ಷ ಭಿನ್ನಮತದ ಸೊಲ್ಲು ಇಲ್ಲದಂತೆ ಅಧಿಕಾರ ನಡೆಸಿದ್ದೇನೆ. ಆದರೆ ಪರಮೇಶ್ವರ್ ಅವರಿಗೆ ಹಿಡಿತ ಇಲ್ಲ. ನನ್ನನ್ನು ಕಡೆಗಣಿಸಿ ಸರ್ಕಾರ ನಡೆಸುತ್ತೇವೆ ಎಂದುಕೊಂಡಿದ್ದರೆ ಹುಷಾರು’ ಎಂದು ದಿಲ್ಲಿ ಹೈಕಮಾಂಡ್‌ಗೆ ಸಂಕೇತ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Jun 12, 2018, 2:11 PM IST

Rahul Gandhi Convince M B PatilRahul Gandhi Convince M B Patil

ಬಂಡಾಯವೆದ್ದ ಎಂ ಬಿ ಪಾಟೀಲರನ್ನು ರಾಹುಲ್ ಗಾಂಧಿ ಸುಮ್ಮನಾಗಿಸಿದ್ದು ಹೇಗೆ ಗೊತ್ತಾ?

ಅತ್ತ  ಸರ್ಕಾರವೇ ಬೀಳಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ಷರಾ ಬರೆಯುತ್ತಿದ್ದರೆ ದಿಲ್ಲಿಯ ಹೈಕಮಾಂಡ್ ಮ್ಯಾನೇಜರ್‌ಗಳು ಮಾತ್ರ,‘ಅಯ್ಯೋ ಸಿದ್ದರಾಮಯ್ಯ ಬೆಂಬಲಿಗರು ಮಾಡುತ್ತಿರುವ ಬಂಡಾಯ ಒಂದು ರೀತಿಯಲ್ಲಿ ನಿಯಂತ್ರಿತ ಸ್ಫೋಟ ಇದ್ದ ಹಾಗೆ. ತುಂಬಾ ಡ್ಯಾಮೇಜ್ ಏನೂ ಮಾಡೋದಿಲ್ಲ. ಸ್ವಲ್ಪ ಸದ್ದು ಮಾಡಿ ತಣ್ಣಗಾಗುತ್ತದೆ ಅಷ್ಟೆ’ ಎಂದು ತಣ್ಣಗಿನ ಧ್ವನಿಯಲ್ಲಿ ಹೇಳುತ್ತಾರೆ.

Jun 12, 2018, 12:52 PM IST

Rahul Gandhi Advise to M B PatilRahul Gandhi Advise to M B Patil

ರಾತ್ರಿ ಸ್ವಲ್ಪ ನಿದ್ದೆ ಮಾಡಿ; ಎಂ ಬಿ ಪಾಟೀಲರಿಗೆ ರಾಹುಲ್ ಗಾಂಧಿ ಸಲಹೆ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಎಂ ಬಿ ಪಾಟೀಲ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ‘ಪಾಟೀಲ್ ಈಸ್ ಜಂಟಲ್‌ಮ್ಯಾನ್’ ಎಂದು ಸೋನಿಯಾ ಹೊಗಳುತ್ತಿರುತ್ತಾರೆ. ಆದರೆ ರಾಹುಲ್ ಗಾಂಧಿ ಅವರಿಗೆ ಪಾಟೀಲರು ಟೆನ್ಷನ್ ಪಾರ್ಟಿ ಎಂಬ ಅಭಿಪ್ರಾಯವಿದೆ.

Jun 12, 2018, 12:29 PM IST

Relief to congress senior leadersRelief to congress senior leaders

ಕಾಂಗ್ರೆಸ್ ಹಿರಿಯ ನಾಯಕರಿಗೆ ರಿಲೀಫ್!

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ನೀವೇ ನಿಲ್ಲಿ, ಗೆಲ್ಲಲು ಸುಲಭ ಎಂಬ ಒತ್ತಡ ಇರುವುದಿಲ್ಲವಂತೆ. ಸರ್ಕಾರ ಸಂಖ್ಯೆಯ ವಿಷಯದಲ್ಲಿ ನಾಜೂಕಾಗಿ ಇರುವುದರಿಂದ ಯಾವುದೇ ಶಾಸಕರಿಗೆ ಲೋಕಸಭಾ ಟಿಕೆಟ್ ಕೊಡುವ ಪ್ರಶ್ನೆ ಇಲ್ಲ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಹೇಳಿದೆ. 

Jun 5, 2018, 5:09 PM IST

How D K Shivkumar missed Power MinistryHow D K Shivkumar missed Power Ministry

ಕೊನೆ ಕ್ಷಣದಲ್ಲಿ ಇಂಧನ ಖಾತೆ ಡಿಕೆಶಿ ಕೈ ತಪ್ಪಿದ್ದೇಗೆ?

ಕಳೆದ ವಾರ ರಾಹುಲ್ ಗಾಂಧಿ ಮನೆಯಿಂದ ಹೊರಗಡೆ ಬಂದಾಗ ಸಿದ್ದು, ಖರ್ಗೆ, ಪರಮೇಶ್ವರ್ ಅವರು ಮಾಧ್ಯಮದವರಿಗೆ ಹಲೋ ಕೂಡ ಹೇಳದೆ ಹಾಗೇ ಹೋಗಿದ್ದರು. ಆದರೆ, ಪತ್ರಕರ್ತರನ್ನು ನೋಡಿದ ಕೂಡಲೇ ಕಾರು ನಿಲ್ಲಿಸಿ ಕೆಳಗಿಳಿದ ಡಿ ಕೆ ಶಿವಕುಮಾರ್, ದೇವೇಗೌಡರ ಕುಟುಂಬದ ಜೊತೆ ಹೋಗಬೇಕು ಎಂದು ಹೈಕಮಾಂಡ್ ಹೇಳಿತ್ತು, ಹಾಗಾಗಿ ಹೋಗಿದ್ದೇವೆ ಎಂದು ಹೇಳುವ ರೀತಿಯಲ್ಲಿಯೇ ಏನೋ ಇಂಗಿತ ಕಾಣಿಸುತ್ತಿತ್ತು.

Jun 5, 2018, 4:12 PM IST

Sonia Gandhi have soft corner about D K ShivkumarSonia Gandhi have soft corner about D K Shivkumar

ಡಿಕೆಶಿ ಬಗ್ಗೆ ಸೋನಿಯಾ ಗಾಂಧಿಗೆ ಅನುಕಂಪವಂತೆ!

ಕಾಂಗ್ರೆಸ್‌ನಲ್ಲಿ ಡಿ ಕೆ ಶಿವಕುಮಾರ್ ಬಗ್ಗೆ ಸೋನಿಯಾ ಗಾಂಧಿಗೆ ಮಾತ್ರ ಸ್ವಲ್ಪ ಹೆಚ್ಚು ಅನುಕಂಪವಿದೆಯಂತೆ. 2006-07 ರಲ್ಲಿ ಡಿ ಕೆ ಶಿವಕುಮಾರ್ ಒಂದೊಂದು ವಾರ ದಿಲ್ಲಿಯಲ್ಲಿ ಬಂದು ಕುಳಿತರೂ ಕೂಡ ಸೋನಿಯಾ ಭೇಟಿಗೆ ಸಮಯ ನೀಡುತ್ತಿರಲಿಲ್ಲವಂತೆ. ಆದರೆ ನಂತರ ಹಟಕ್ಕೆ ಬಿದ್ದು ದಿಲ್ಲಿಯಲ್ಲಿ ಹೆಸರು ಸುಧಾರಿಸಿಕೊಂಡ ಶಿವಕುಮಾರ್, 2014 ರ ನಂತರ ಕಾಂಗ್ರೆಸ್‌ನ ಕಷ್ಟದ ಸಮಯದಲ್ಲಿ ಜೊತೆಗೆ ನಿಂತರು. 

Jun 5, 2018, 3:11 PM IST

Congress Senior leaders unhappy  with D K ShivkumarCongress Senior leaders unhappy  with D K Shivkumar

ಡಿಕೆಶಿಗೆ ಕಾಂಗ್ರೆಸ್’ನಲ್ಲಿ ಮಣೆ; ಹಿರಿಯ ನಾಯಕರಿಗೆ ಅಸಮಾಧಾನ

ಕರ್ನಾಟಕ ಸರ್ಕಾರ ರಚನೆಯಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಸಿಕ್ಕ ಪ್ರಚಾರ ಮತ್ತು ಅವರು ತಮ್ಮನ್ನು ತಾವು ಬಿಂಬಿಸಿಕೊಂಡ ಬಗೆ ಕಾಂಗ್ರೆಸ್‌ನ ಗಾಂಧಿ ಕುಟುಂಬದ ಆಪದ್ಬಾಂಧವರಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್‌ರಿಗೆ ಎಳ್ಳಷ್ಟೂ ಇಷ್ಟವಾಗಿಲ್ಲವಂತೆ.

Jun 5, 2018, 1:35 PM IST

Congress will split if D K Shivkumar become KPCC presidentCongress will split if D K Shivkumar become KPCC president

’ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಡಿ, ಕೊಟ್ಟರೆ ಹೋಳಾಗೋದು ನಿಶ್ಚಿತ’

ವಿಧಾನಸಭೆಯಲ್ಲಿ ಯಡಿಯೂರಪ್ಪನವರನ್ನು ವಿಶ್ವಾಸಮತದಲ್ಲಿ  ಸೋಲಿಸಿ ಇನ್ನೇನು ತನ್ನದೇ ಕೈಯಲ್ಲಿ ಕಾಂಗ್ರೆಸ್‌ನ ಸಾಮ್ರಾಜ್ಯ ಎಂಬ ಸಂಭ್ರಮದಲ್ಲಿದ್ದ ಡಿ ಕೆ ಶಿವಕುಮಾರ್ ಅವರಿಗೆ ದೇವೇಗೌಡರ ಕುಟುಂಬ ಇಂಧನವನ್ನೇ ಸೆಳೆದುಕೊಂಡು ಶಾಕ್ ಕೊಟ್ಟಿದ್ದಾಯ್ತು.

Jun 5, 2018, 12:10 PM IST

Jarkiholi Brothers Plan Against Lakshmi HebbalkarJarkiholi Brothers Plan Against Lakshmi Hebbalkar

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್, ಸತೀಶ್!

ಲಕ್ಷ್ಮಿ ಹೆಬ್ಬಾಳಕರ್ ದೊಡ್ಡ ಅಂತರದಲ್ಲಿ ಗೆದ್ದು ಶಾಸಕಿಯಾದ ಮೇಲೆ ಅವರನ್ನು ಮಂತ್ರಿ ಮಾಡದಂತೆ ತಡೆಯಲು ಸತೀಶ್ ಮತ್ತು ರಮೇಶ್ ಇಬ್ಬರು ಒಂದಾಗಿದ್ದು ವಿವೇಕ್ ರಾವ್ ಪಾಟೀಲ್ ರನ್ನು ಮಂತ್ರಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

May 29, 2018, 2:20 PM IST

Rahul Gandhi Is Not ReachableRahul Gandhi Is Not Reachable

ರಾಜ್ಯದಲ್ಲಿ ಸಂಪುಟ ಸರ್ಕಸ್: ರಾಹುಲ್ ಇಸ್ ನಾಟ್ ಸೀರಿಯಸ್

ಕರ್ನಾಟಕದ ಸಂಪುಟ ಮಾತುಕತೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಅಮೆರಿಕಕ್ಕೆ ಹೋಗಿರುವುದು ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ತೀವ್ರ ಇರಿಸು ಮುರುಸು ತಂದಿದೆ.

May 29, 2018, 2:07 PM IST

DK Shivakumar Lucky NumberDK Shivakumar Lucky Number

ಡಿ.ಕೆ. ಶಿವಕುಮಾರ್ ಲಕ್ಕಿ ನಂಬರ್ ಯಾವುದು..?

ಶಿವಕುಮಾರ ಯಾವುದೇ ಕಾರ್ ತೆಗೆದುಕೊಂಡರು 6 ನಂಬರ್ ಇರಲೇಬೇಕಂತೆ.ಮನೆಯಲ್ಲಿ 1 ವಾಹನದಲ್ಲಿ 6 ಲಕ್ಕಿ ಎಂದು ಶಿವಕುಮಾರ ಗೆ ಜ್ಯೋತಿಷಿ ಹೇಳಿದ್ದಾರಂತೆ.

May 29, 2018, 1:57 PM IST

Power Shock DK ShivakumarPower Shock DK Shivakumar

ಡಿಕೆಶಿಗೆ 'ಪವರ್' ಶಾಕ್?

ವಿಧಾನಸಭೆಯಲ್ಲಿ ಕುಮಾರಸ್ವಾಮಿ ಕೈ ಹಿಡಿದು ಯಡಿಯೂರಪ್ಪ ವಿರುದ್ಧ ಠೇಂಕರಿಸಿದ್ದ ಡಿ ಕೆ ಶಿವಕುಮಾರ್ ಪವರ್ ಇಲಾಖೆ ತನಗೆ ಬೇಕು ಎಂದು ಜೆ ಡಿ ಎಸ್ ಗುಲಾಂ ನಬಿ ಅಜಾದ್ ಬಳಿ ಸ್ಪಷ್ಟವಾಗಿ ಹೇಳಿದ್ದು, ಇದೀಗ ಯಾರ ಪಾಲಾಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ.

May 29, 2018, 1:41 PM IST