ಡಿ.ಕೆ. ಶಿವಕುಮಾರ್ ಲಕ್ಕಿ ನಂಬರ್ ಯಾವುದು..?

First Published 29, May 2018, 1:57 PM IST
DK Shivakumar Lucky Number
Highlights

ಶಿವಕುಮಾರ ಯಾವುದೇ ಕಾರ್ ತೆಗೆದುಕೊಂಡರು 6 ನಂಬರ್ ಇರಲೇಬೇಕಂತೆ.ಮನೆಯಲ್ಲಿ 1 ವಾಹನದಲ್ಲಿ 6 ಲಕ್ಕಿ ಎಂದು ಶಿವಕುಮಾರ ಗೆ ಜ್ಯೋತಿಷಿ ಹೇಳಿದ್ದಾರಂತೆ.

ನವದೆಹಲಿ :  ಕರ್ನಾಟಕ ಭವನದಲ್ಲಿ ರೂಮ್ ನಂಬರ್ 307 ಹೆಚ್ಚು ಕಡಿಮೆ ಪವರ್ ಮಂತ್ರಿ ಡಿ ಕೆ ಶಿವಕುಮಾರ ಗೆ ಮೀಸಲು.307 ಕೂಡಿಸಿದಾಗ ಒಂದು ಬರುತ್ತದೆ ಎನ್ನುವುದೇ ಎಲ್ಲೇ ಹೋದರು ಶಿವಕುಮಾರ 307 ನಂಬರ್ ರೂಮ್ ತೆಗೆದುಕೊಳ್ಳಲು ಕಾರಣವಂತೆ.

ಇನ್ನು ಶಿವಕುಮಾರ ಯಾವುದೇ ಕಾರ್ ತೆಗೆದುಕೊಂಡರು 6 ನಂಬರ್ ಇರಲೇಬೇಕಂತೆ.ಮನೆಯಲ್ಲಿ 1 ವಾಹನದಲ್ಲಿ 6 ಲಕ್ಕಿ ಎಂದು ಶಿವಕುಮಾರ ಗೆ ಜ್ಯೋತಿಷಿ ಹೇಳಿದ್ದಾರಂತೆ.

ಶಿವಕುಮಾರ ಆಪ್ತರಿಗೆ ಪತ್ರಕರ್ತರು ಸಾಹೇಬರ ಟೈಮ್ ಕೊಡಿಸಿ ಎಂದು ಕೇಳಿದರೆ ಅಯ್ಯೋ ಯಾರಾದರೂ ಜ್ಯೋತಿಷಿ ಕರೆದುಕೊಂಡು ಬನ್ನಿ ಒಂದು ಗಂಟೆ ಕೂಡುತ್ತಾರೆ ಎಂದು ತಮಾಷೆ ಮಾಡುತ್ತಾರೆ.

ಕನ್ನಡ ಪ್ರಭದಲ್ಲಿ ಪ್ರಕಟವಾದ ಸುವರ್ಣ ನ್ಯೂಸ್ ದಿಲ್ಲಿ ವಿಶೇಷ ಪ್ರತಿನಿಧಿ ಪ್ರಶಾಂತ್ ನಾತು ಅವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗವಿದು.

loader