ಬಂಡಾಯವೆದ್ದ ಎಂ ಬಿ ಪಾಟೀಲರನ್ನು ರಾಹುಲ್ ಗಾಂಧಿ ಸುಮ್ಮನಾಗಿಸಿದ್ದು ಹೇಗೆ ಗೊತ್ತಾ?

Rahul Gandhi Convince M B Patil
Highlights

ಅಹ್ಮದ್ ಪಟೇಲ್ ಕಡೆಯಿಂದ ನೇರವಾಗಿ ಎಂ ಬಿ ಪಾಟೀಲರಿಗೆ ಫೋನ್ ಮಾಡಿಸಿದ ರಾಹುಲ್ ಗಾಂಧಿ ತನ್ನ ಮನೆಗೇ ಕರೆಸಿಕೊಂಡು, ‘ಈಗ ಸುಮ್ಮನಿರಿ, ದಿಲ್ಲಿಯಲ್ಲಿ  ಅಧಿಕಾರ ವಾಪಸ್ ಬರಲು ಬೆಂಗಳೂರಿನಲ್ಲಿ ಸರಿಯಾಗಿ ಸರ್ಕಾರ  ನಡೆಸಿ ತೋರಿಸಬೇಕು. ಮುಂದೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. 5 ವರ್ಷ ಪಕ್ಷ ನಿಮಗೆ ಜಲಸಂಪನ್ಮೂಲದಂತಹ ಒಳ್ಳೆಯ ಖಾತೆ ಕೊಟ್ಟಿದೆ, ಈಗ ಶಾಂತವಾಗಿರಿ’ ಎಂದು ಹೇಳಿ ಕಳುಹಿಸಿದ್ದಾರೆ. 

ಬೆಂಗಳೂರು (ಜೂ. 12): ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್, ಬಿಸಿ ಪಾಟೀಲ್ ಮಂತ್ರಿ ಸ್ಥಾನ ಸಿಗದೇ ಭುಸುಗುಡುತ್ತಿದರೂ ಕೂಡ ದಿಲ್ಲಿಯಲ್ಲಿ ಕುಳಿತ ಕಾಂಗ್ರೆಸ್ ನಾಯಕರೇನೂ ಜಾಸ್ತಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಇನ್ನೇನು ಸರ್ಕಾರವೇ ಬೀಳಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ಷರಾ ಬರೆಯುತ್ತಿದ್ದರೆ ದಿಲ್ಲಿಯ ಹೈಕಮಾಂಡ್ ಮ್ಯಾನೇಜರ್‌ಗಳು ಮಾತ್ರ,‘ಅಯ್ಯೋ ಸಿದ್ದರಾಮಯ್ಯ ಬೆಂಬಲಿಗರು ಮಾಡುತ್ತಿರುವ ಬಂಡಾಯ ಒಂದು ರೀತಿಯಲ್ಲಿ ನಿಯಂತ್ರಿತ ಸ್ಫೋಟ ಇದ್ದ ಹಾಗೆ. ತುಂಬಾ ಡ್ಯಾಮೇಜ್ ಏನೂ ಮಾಡೋದಿಲ್ಲ. ಸ್ವಲ್ಪ ಸದ್ದು ಮಾಡಿ ತಣ್ಣಗಾಗುತ್ತದೆ ಅಷ್ಟೆ’ ಎಂದು ತಣ್ಣಗಿನ ಧ್ವನಿಯಲ್ಲಿ ಹೇಳುತ್ತಾರೆ.

ಅಧಿಕಾರ ಕಳೆದುಕೊಂಡ ನಂತರ ಸಂಪುಟ ರಚನೆಯಲ್ಲಿ ದಿಲ್ಲಿಯ ನಾಯಕರು ತನ್ನ ಮಾತು ಕೇಳದೆ ಇರುವುದರಿಂದ ಬೇಜಾರಾಗಿರುವ ಸಿದ್ದು ಒಂದಿಷ್ಟು ಸದ್ದು ಮಾಡಿಸಿದ್ದಾರೆ ಎಂಬ ಯೋಚನೆಯಲ್ಲಿ ದಿಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಹೀಗಾಗಿಯೇ ಅಹ್ಮದ್ ಪಟೇಲ್ ಕಡೆಯಿಂದ ನೇರವಾಗಿ ಎಂ ಬಿ ಪಾಟೀಲರಿಗೆ ಫೋನ್ ಮಾಡಿಸಿದ ರಾಹುಲ್ ಗಾಂಧಿ ತನ್ನ ಮನೆಗೇ ಕರೆಸಿಕೊಂಡು, ‘ಈಗ ಸುಮ್ಮನಿರಿ, ದಿಲ್ಲಿಯಲ್ಲಿ  ಅಧಿಕಾರ ವಾಪಸ್ ಬರಲು ಬೆಂಗಳೂರಿನಲ್ಲಿ ಸರಿಯಾಗಿ ಸರ್ಕಾರ  ನಡೆಸಿ ತೋರಿಸಬೇಕು. ಮುಂದೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. 5 ವರ್ಷ ಪಕ್ಷ ನಿಮಗೆ ಜಲಸಂಪನ್ಮೂಲದಂತಹ ಒಳ್ಳೆಯ ಖಾತೆ ಕೊಟ್ಟಿದೆ, ಈಗ ಶಾಂತವಾಗಿರಿ’ ಎಂದು ಹೇಳಿ ಕಳುಹಿಸಿದ್ದಾರೆ. ಸದ್ದು ಮಾಡುವುದೇ ಉದ್ದೇಶವಾಗಿದ್ದ ಪಾಟೀಲರಿಗೂ ಕೂಡ ಯಾವುದೇ ಬೇರೆ ದಾರಿ ಇರುವಂತಿಲ್ಲ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

loader