ಡಿಕೆಶಿಗೆ 'ಪವರ್' ಶಾಕ್?

Power Shock DK Shivakumar
Highlights

ವಿಧಾನಸಭೆಯಲ್ಲಿ ಕುಮಾರಸ್ವಾಮಿ ಕೈ ಹಿಡಿದು ಯಡಿಯೂರಪ್ಪ ವಿರುದ್ಧ ಠೇಂಕರಿಸಿದ್ದ ಡಿ ಕೆ ಶಿವಕುಮಾರ್ ಪವರ್ ಇಲಾಖೆ ತನಗೆ ಬೇಕು ಎಂದು ಜೆ ಡಿ ಎಸ್ ಗುಲಾಂ ನಬಿ ಅಜಾದ್ ಬಳಿ ಸ್ಪಷ್ಟವಾಗಿ ಹೇಳಿದ್ದು, ಇದೀಗ ಯಾರ ಪಾಲಾಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ.

ನವದೆಹಲಿ :  ವಿಧಾನಸಭೆಯಲ್ಲಿ ಕುಮಾರಸ್ವಾಮಿ ಕೈ ಹಿಡಿದು ಯಡಿಯೂರಪ್ಪ ವಿರುದ್ಧ ಠೇಂಕರಿಸಿದ್ದ ಡಿ ಕೆ ಶಿವಕುಮಾರ್  ಪವರ್ ಇಲಾಖೆ ತನಗೆ ಬೇಕು ಎಂದು ಜೆ ಡಿ ಎಸ್ ಗುಲಾಂ ನಬಿ ಅಜಾದ್ ಬಳಿ ಸ್ಪಷ್ಟವಾಗಿ ಹೇಳಿದ್ದು ಡಿ ಕೆ ಶಿವಕುಮಾರ ಅವರನ್ನು ಹೇಗೆ  ನಿಭಾಯಿಸುವುದು ಅನ್ನೋದು ಗೊತ್ತಾಗುತ್ತಿಲ್ಲ.

ಹಣಕಾಸು ಲೋಕೋಪಯೋಗಿ ಇಂಧನ ಮತ್ತು ಉನ್ನತ ಮತ್ತು  ಪ್ರಾಥಮಿಕ ಶಿಕ್ಷಣ ತೋಟಗಾರಿಕೆ ಕಾರ್ಮಿಕ ಸೇರಿದಂತೆ ಖಾತೆಗಳ ಪಟ್ಟಿಯನ್ನು ಕಾಂಗ್ರೆಸ್ ನವರಿಗೆ ಕೊಟ್ಟಿದ್ದು ಈಗೇನಿದ್ದರು ಕೂಡ ಕಾಂಗ್ರೆಸ್ ತನ್ನ ಸಮ್ಮತಿ ಯನ್ನು ಸೂಚಿಸಬೇಕಿದೆ ಅಷ್ಟೇ. ಆದರೆ ಇಂಧನ ಜೆ ಡಿ ಎಸ್ ಪಾಲಾದರೆ ಗೃಹ ಖಾತೆ ಪರಮೇಶ್ವರ್ ಬಳಿ ಹೋದರೆ ಡಿ.ಕೆ ಶಿವಕುಮಾರ ಅವರಿಗೆ ಉಳಿಯುವುದಾದರು ಏನು ಎಂಬುದು ಯೋಚಿಸಬೇಕಾದ ಪ್ರಶ್ನೆ.

ಆದರೆ, 'ಇಂಧನ' ಜೆಡಿಎಸ್ ಪಾಲಾಗಿ, ಗೃಹ ಖಾತೆ ಏನು ಎಂಬುದು ಯೋಚಿಸಬೇಕಾದ ಪ್ರಶ್ನೆ. ಈ ಮೂಲಕ ಜೆಡಿಎಸ್ ಮನವೊಲಿಸಿಕೊಂಡರೆ ಇಂಧನ ಖಾತೆಯನ್ನು ಡಿಕೆಶಿಯವರೇ ಇಟ್ಟುಕೊಳ್ಳಲಿ ಎಂದೂ ಕಾಂಗ್ರೆಸ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.

ಗೌಡರು ಮತ್ತು ನಾಮಕ್ಕಲ್ ಭವಿಷ್ಯ ನಾಮಕ್ಕಲ್ ಪ್ರಭಾವ

ತಮಿಳುನಾಡಿನ ಕೃಷ್ಣಗಿರಿ ಬಳಿ ಇರುವ ನಾಮಕ್ಕಲ್ ನಲ್ಲಿರುವ ಜ್ಯೋತಿಷಿ ಒಬ್ಬರ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಅತೀವ ಶ್ರದ್ಧೆ ಇದೆಯಂತೆ. 89 ರಲ್ಲಿ ದೇವೇಗೌಡರು ಸೋತಾಗ ಮಗ ರೇವಣ್ಣ ರನ್ನು ಕರೆದುಕೊಂಡು ನಾಮಕ್ಕಲ್ ಗೆ ಹೋದಾಗ ಹತ್ತುವರೆ ತಿಂಗಳಲ್ಲಿ  ವೀರೇಂದ್ರ ಪಾಟೀಲ್ ಅಧಿಕಾರ ಕಳೆದು ಕೊಳ್ಳುತ್ತಾರೆ 94 ರಲ್ಲಿ ನಿಮಗೆ 117 ಸೀಟು ಬರುತ್ತವೆ 96 ರಲ್ಲಿ 18 ಲೋಕಸಭಾ ಸೀಟು ಬರುತ್ತವೆ ನಂತರ ಪ್ರಧಾನಿ ಆಗುತ್ತಿರಿ ಎಂದು ಭವಿಷ್ಯ ನುಡಿದಿದ್ದರಂತೆ.ಈ ಬಾರಿಯೂ ಕೂಡ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾಮಕ್ಕಲ್ ನ ಈಗ ವೃದ್ಧರಾಗಿರುವ ಜ್ಯೋತಿಷಿ ಹೇಳಿದ್ದರಂತೆ. 'ಅಯ್ಯೋ ಎಲ್ಲ ದೇವರ ಆಟ ಸರ್ ಅವನ ಆಜ್ಞೆ ಇಲ್ಲದೆ ಹುಲ್ಲು ಕಡ್ಡಿ ಕೂಡ ಅಲೆದಾಡೋಲ್ಲ' ಎಂದು ರೇವಣ್ಣ ದಿಲ್ಲಿ ಪತ್ರಕರ್ತರ ಎದುರು ಹೇಳಿಕೊಳ್ಳುತ್ತಿದ್ದರು.

ಕನ್ನಡ ಪ್ರಭದಲ್ಲಿ ಪ್ರಕಟವಾದ ಸುವರ್ಣ ನ್ಯೂಸ್ ದಿಲ್ಲಿ ವಿಶೇಷ ಪ್ರತಿನಿಧಿ ಪ್ರಶಾಂತ್ ನಾತು ಅವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗವಿದು.

loader