ಕಾಂಗ್ರೆಸ್ ಹಿರಿಯ ನಾಯಕರಿಗೆ ರಿಲೀಫ್!

Relief to congress senior leaders
Highlights

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ನೀವೇ ನಿಲ್ಲಿ, ಗೆಲ್ಲಲು ಸುಲಭ ಎಂಬ ಒತ್ತಡ ಇರುವುದಿಲ್ಲವಂತೆ. ಸರ್ಕಾರ ಸಂಖ್ಯೆಯ ವಿಷಯದಲ್ಲಿ ನಾಜೂಕಾಗಿ ಇರುವುದರಿಂದ ಯಾವುದೇ ಶಾಸಕರಿಗೆ ಲೋಕಸಭಾ ಟಿಕೆಟ್ ಕೊಡುವ ಪ್ರಶ್ನೆ ಇಲ್ಲ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಹೇಳಿದೆ. 

ಬೆಂಗಳೂರು (ಜೂ. 05): 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ನೀವೇ ನಿಲ್ಲಿ, ಗೆಲ್ಲಲು ಸುಲಭ ಎಂಬ ಒತ್ತಡ ಇರುವುದಿಲ್ಲವಂತೆ. ಸರ್ಕಾರ ಸಂಖ್ಯೆಯ ವಿಷಯದಲ್ಲಿ ನಾಜೂಕಾಗಿ ಇರುವುದರಿಂದ ಯಾವುದೇ ಶಾಸಕರಿಗೆ ಲೋಕಸಭಾ ಟಿಕೆಟ್ ಕೊಡುವ ಪ್ರಶ್ನೆ ಇಲ್ಲ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಹೇಳಿದೆ. 

ಹೀಗಾಗಿ ದೇಶಪಾಂಡೆ, ಎಚ್ ಕೆ ಪಾಟೀಲ್, ರೋಷನ್ ಬೇಗ್, ಜಾರಕಿಹೊಳಿ ನಿರಾಳರಾಗಿದ್ದಾರೆ. ಈ ಬಾರಿ ಬಲಾಢ್ಯರು ಸೋತಿರುವುದರಿಂದ ಲೋಕಸಭಾ ಚುನಾವಣೆಗೆ ನಿಲ್ಲಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಇರೋದು ನಿಶ್ಚಿತ. ರಮಾನಾಥ್ ರೈ, ಭೀಮಣ್ಣ ನಾಯಕ, ವಿನಯ ಕುಲಕರ್ಣಿ, ಕಾಶಪ್ಪನವರ, ರಾಜು ಅಲಗೂರು, ಆಂಜನೇಯ, ಎಸ್ ಎಸ್ ಮಲ್ಲಿಕಾರ್ಜುನ್‌ಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಲು ಹೇಳಲಾಗುತ್ತಿದೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

loader