ಏರ್‌ಟೆಲ್‌ನಿಂದ 161 ರೂ ಸೇರಿ 3 ರೀಚಾರ್ಜ್ ಪ್ಲಾನ್, 30 ದಿನ ಡೇಟಾ ತಲೆಬಿಸಿ ಇಲ್ಲ!
ಏರ್‌ಟೆಲ್ ಗ್ರಾಹಕರಿಗೆ ಇದೀಗ ಭರ್ಜರಿ ಡೇಟಾ ಆಫರ್ ಘೋಷಿಸಿದೆ.161, 181 ರೂಪಾಯಿ ಸೇರಿದಂತೆ 3 ರೀಚಾರ್ಜ್ ಪ್ಲಾನ್ ಪರಿಚಯಿಸಲಾಗಿದೆ. ಪ್ರೇ ಪೇಯ್ಡ್ ಗ್ರಾಹಕರ ಈ ಪ್ಲಾನ್ ಕುರಿತ ವಿವರ ಇಲ್ಲಿದೆ.
ನವದೆಹಲಿ(ಸೆ.23) ದೇಶದಲ್ಲಿ ಇಂಟರ್ನೆಟ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2 ಜಿಬಿ, 3 ಜಿಬಿ ಸೇರಿದಂತೆ ಪ್ರತಿ ದಿನದ ಡೇಟಾ ಅದೆಷ್ಟು ಬೇಗ ಖಾಲಿಯಾಗುತ್ತಿದೆ ಅನ್ನೋದು ಗೊತ್ತೆ ಆಗುವುದಿಲ್ಲ. ಇದೀಗ ಏರ್‌ಟೆಲ್ ತನ್ನ ಪ್ರೇ ಪೇಯ್ಡ್ ಗ್ರಾಹಕರಿಗೆ ಈ ಡೇಟಾ ಸಮಸ್ಯೆಗೆ ಮುಕ್ತಿ ಹಾಡಲು ಹೊಸ ರೀಚಾರ್ಜ್ ಪ್ಲಾನ್ ಪರಿಚಿಯಿಸಿದೆ. ಕೇವಲ 161 ರೂಪಾಯಿ, 181 ರೂಪಾಯಿ ಹಾಗೂ 361 ರೂಪಾಯಿ ರೀಚಾರ್ಜ್ ಪ್ಲಾನ್ ಗ್ರಾಹಕರಿಗೆ ಡೇಟಾ ಜೊತೆಗೆ ಒಟಿಟಿ ಸೇರಿದಂತೆ ಇತರ ಎಂಟರ್ನೈನ್ಮೆಂಟ್ ಸ್ಕೀಮ್ ಸಿಗಲಿದೆ. ಜೊತೆಗೆ 30 ದಿನದ ವ್ಯಾಲಿಟಿಡಿ ಇರಲಿದೆ.
ಪ್ರತಿ ದಿನದ ಡೇಟಾ ಬೇಗನೆ ಖಾಲಿಯಾಗುವ ಏರ್‌ಟೆಲ್ ಗ್ರಾಹಕರಿಗೆ ಈ ಪ್ಲಾನ್ ಸೂಕ್ತವಾಗಿದೆ. ಪ್ರತಿ ದಿನದ ಡೇಟಾ ಖಾಲಿಯಾಗಿ ಹೆಚ್ಚುವರಿ ಡೇಟಾಗಾಗಿ ದುಬಾರಿ ಡೇಟಾ ಪ್ಲಾನ್ ಆಯ್ಕೆಮಾಡಿಕೊಳ್ಳುವ ಬದಲು ಇದೀಗ ಈ ಪ್ಲಾನ್ ಜಾರಿಮಾಡಲಾಗಿದೆ. 161 ರೂಪಾಯಿ ರಿಚಾರ್ಜ್ ಮಾಡಿದರೆ ಒಟ್ಟು 12 ಜಿಬಿ ಡೇಟಾ ಸಿಗಲಿದೆ. ಇದರ ವ್ಯಾಲಿಟಿಡಿ 30 ದಿನಗಳು.
ಬೆಲೆ ಏರಿಕೆ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ಗೆ 20 ಲಕ್ಷ ಹೊಸ ಗ್ರಾಹಕರು; ಜಿಯೋ, ಏರ್‌ಟೆಲ್ ಕಳೆದುಕೊಂಡಿದ್ದೆಷ್ಟು?
181 ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿದರೆ, ಒಟ್ಟು 15 ಜಿಬಿ ಡೇಟಾ ನೀಡಲಾಗುತ್ತಿದೆ. ಇದರ ವ್ಯಾಲಿಟಿಡಿ 30 ದಿನಗಳು. ಇನ್ನು ಇದರ ಜೊತೆಗೆ 20 ಒಟಿಟಿ ಸ್ಕೀಮ್, ಏರ್‌ಟೆಲ್ ಏಕ್ಸ್‌ಟ್ರೀಮ್ ಪ್ಲಾನ್ ಕೂಡ ಉಚಿತವಾಗಿ ಸಿಗಲಿದೆ. ಇನ್ನು 361 ರೂಪಾಯಿ ಡೇಟಾ ರಿಚಾರ್ಜ್ ಪ್ಲಾನ್ ಆಯ್ಕೆಮಾಡಿಕೊಂಡರೆ,ಬರೋಬ್ಬರಿ 50 ಜಿಬಿ ಡೇಟಾ ಸಿಗಲಿದೆ. ವಿಶೇಷ ಅಂದರೆ ಇಲ್ಲಿ ಮೂಲ ರಿಚಾರ್ಜ್ ಪ್ಲಾನ್ ವಾಲಿಟಿಡಿಯನ್ನು ಈ ಪ್ಲಾನ್ ಪಡೆಯಲಿದೆ. ಉದಾಹರಣೆಗೆ ನೀವು ಪ್ರತಿ ದಿನ 1 ಜಿಬಿ ಡೇಟಾ ಪ್ಲಾನ್ ನಿಗದಿತ ಮೊತ್ತಕ್ಕೆ ರಿಚಾರ್ಜ್ ಮಾಡಿಕೊಂಡಿದ್ದರೆ, ಇದರ ವ್ಯಾಲಿಟಿಡಿ ಅವಧಿ 30 ದಿನ ಅಥವಾ 60 ದಿನ ಆಗಿರಬಹುದು. ಈ ವ್ಯಾಲಿಟಿಡಿ ಅವಧಿ ಹೆಚ್ಚುವರಿಯಾಗಿ 351 ರೂಪಾಯಿ ರಿಚಾರ್ಜ್ ಪ್ಲಾನ್‌ಗೂ ಅನ್ವಯವಾಗಲಿದೆ.
ಏರ್‌ಟೆಲ್ ಇದೀಗ ಗ್ರಾಹಕರನ್ನು ತನ್ನಲ್ಲೇ ಉಳಿಸಿಕೊಂಡು ಹೊಸ ಗ್ರಾಹಕರ ಆಕರ್ಷಿಸಲು ಹೊಸ ಹೊಸ ಪ್ಲಾನ್ ಜಾರಿಗೆ ತರುತ್ತಿದೆ. ಇತ್ತೀಚೆಗೆ ರಿಚಾರ್ಜ್ ಬೆಲೆ ಏರಿಕೆಯಿಂದ, ಏರ್‌ಟೆಲ್ ಸೇರಿದಂತೆ ಇತರ ಟೆಲಿಕಾಂ ಸರ್ವೀಸ್ ಪೋರ್ಟ್ ಭೀತಿ ಎದುರಿಸುತ್ತಿದೆ. ಗ್ರಾಹಕರು ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ತಪ್ಪಿಸಲು ಏರ್‌ಟೆಲ್ ಹೊಸ ಪ್ಲಾನ್ ಘೋಷಿಸಿದೆ.
ಏರ್ಟೆಲ್ ಇತ್ತೀಚೆಗೆ 365 ವಾರ್ಷಿಕ ಪ್ಲಾನ್ ಘೋಷಿಸಿದೆ. ಇತರ ಟೆಲಿಕಾಂ ಸರ್ವೀಸ್‌ಗೆ ಹೋಲಿಕೆ ಮಾಡಿದರೆ ಏರ್‌ಟೆಲ್ ಕಡಿಮೆ ಬೆಲೆಯಲ್ಲಿ 365 ವ್ಯಾಲಿಟಿಡಿ ಪ್ಲಾನ್ ಘೋಷಿಸಿತ್ತು. 1999 ರೂಪಾಯಿಗೆ 365 ದಿನ ವ್ಯಾಲಿಟಿಡಿ, ಪ್ರತಿ ದಿನ 100 ಎಸ್ಎಂಎಸ್, ಕಾಲ್ ಹಾಗೂ 24 ಜಿಬಿ ಡೇಟಾ ಕೂಡ ಸಿಗಲಿದೆ.
BSNL ನೆಟ್‌ವರ್ಕ್‌ಗೆ Port ಆಗುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ..