ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್, ಸತೀಶ್!

Jarkiholi Brothers Plan Against Lakshmi Hebbalkar
Highlights

ಲಕ್ಷ್ಮಿ ಹೆಬ್ಬಾಳ್ಕರ್ ದೊಡ್ಡ ಅಂತರದಲ್ಲಿ ಗೆದ್ದು ಶಾಸಕಿಯಾದ ಮೇಲೆ ಅವರನ್ನು ಮಂತ್ರಿ ಮಾಡದಂತೆ ತಡೆಯಲು ಸತೀಶ್ ಮತ್ತು ರಮೇಶ್ ಇಬ್ಬರು ಒಂದಾಗಿದ್ದು ವಿವೇಕ್ ರಾವ್ ಪಾಟೀಲ್ ರನ್ನು ಮಂತ್ರಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ನವದೆಹಲಿ : ಒಂದು ವರ್ಷದ ಹಿಂದೆ ಸತೀಶ್ ಜಾರಕಿಹೊಳಿ ವಿರುದ್ಧ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್  ಒಂದಾಗಿದ್ದರು.

ಆದರೆ ಈಗ ಲಕ್ಷ್ಮಿ ಹೆಬ್ಬಾಳ್ಕರ್  ದೊಡ್ಡ ಅಂತರದಲ್ಲಿ ಗೆದ್ದು ಶಾಸಕಿಯಾದ ಮೇಲೆ ಅವರನ್ನು ಮಂತ್ರಿ ಮಾಡದಂತೆ ತಡೆಯಲು ಸತೀಶ್ ಮತ್ತು ರಮೇಶ್ ಇಬ್ಬರು ಒಂದಾಗಿದ್ದು ವಿವೇಕ್ ರಾವ್ ಪಾಟೀಲ್ ರನ್ನು ಮಂತ್ರಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. 

ಆದರೆ ಆರಿಸಿ ಬಂದಿರುವ ನಾಲ್ವರು ಮಹಿಳೆಯರು ಮೊದಲ ಬಾರಿ ಶಾಸಕಿ ಆಗಿರುವುದು ಲಕ್ಷೀಗೆ ಪ್ಲಸ್ ಪಾಯಿಂಟ್.

ಕನ್ನಡ ಪ್ರಭದಲ್ಲಿ ಪ್ರಕಟವಾದ ಸುವರ್ಣ ನ್ಯೂಸ್ ದಿಲ್ಲಿ ವಿಶೇಷ ಪ್ರತಿನಿಧಿ ಪ್ರಶಾಂತ್ ನಾತು ಅವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗವಿದು.

loader