ಡಿಕೆಶಿ ಬಗ್ಗೆ ಸೋನಿಯಾ ಗಾಂಧಿಗೆ ಅನುಕಂಪವಂತೆ!

First Published 5, Jun 2018, 3:11 PM IST
Sonia Gandhi have soft corner about D K Shivkumar
Highlights

 ಕಾಂಗ್ರೆಸ್‌ನಲ್ಲಿ ಡಿ ಕೆ ಶಿವಕುಮಾರ್ ಬಗ್ಗೆ ಸೋನಿಯಾ ಗಾಂಧಿಗೆ ಮಾತ್ರ ಸ್ವಲ್ಪ ಹೆಚ್ಚು ಅನುಕಂಪವಿದೆಯಂತೆ. 2006-07 ರಲ್ಲಿ ಡಿ ಕೆ ಶಿವಕುಮಾರ್ ಒಂದೊಂದು ವಾರ ದಿಲ್ಲಿಯಲ್ಲಿ ಬಂದು ಕುಳಿತರೂ ಕೂಡ ಸೋನಿಯಾ ಭೇಟಿಗೆ ಸಮಯ ನೀಡುತ್ತಿರಲಿಲ್ಲವಂತೆ. ಆದರೆ ನಂತರ ಹಟಕ್ಕೆ ಬಿದ್ದು ದಿಲ್ಲಿಯಲ್ಲಿ ಹೆಸರು ಸುಧಾರಿಸಿಕೊಂಡ ಶಿವಕುಮಾರ್, 2014 ರ ನಂತರ ಕಾಂಗ್ರೆಸ್‌ನ ಕಷ್ಟದ ಸಮಯದಲ್ಲಿ ಜೊತೆಗೆ ನಿಂತರು. 

ಬೆಂಗಳೂರು (ಜೂ. 05): ಕಾಂಗ್ರೆಸ್‌ನಲ್ಲಿ ಡಿ ಕೆ ಶಿವಕುಮಾರ್ ಬಗ್ಗೆ ಸೋನಿಯಾ ಗಾಂಧಿಗೆ ಮಾತ್ರ ಸ್ವಲ್ಪ ಹೆಚ್ಚು ಅನುಕಂಪವಿದೆಯಂತೆ. 2006-07 ರಲ್ಲಿ ಡಿ ಕೆ ಶಿವಕುಮಾರ್ ಒಂದೊಂದು ವಾರ ದಿಲ್ಲಿಯಲ್ಲಿ ಬಂದು ಕುಳಿತರೂ ಕೂಡ ಸೋನಿಯಾ ಭೇಟಿಗೆ ಸಮಯ ನೀಡುತ್ತಿರಲಿಲ್ಲವಂತೆ. ಆದರೆ ನಂತರ ಹಟಕ್ಕೆ ಬಿದ್ದು ದಿಲ್ಲಿಯಲ್ಲಿ ಹೆಸರು ಸುಧಾರಿಸಿಕೊಂಡ ಶಿವಕುಮಾರ್, 2014 ರ ನಂತರ ಕಾಂಗ್ರೆಸ್‌ನ ಕಷ್ಟದ ಸಮಯದಲ್ಲಿ ಜೊತೆಗೆ ನಿಂತರು. 

ಯಾವತ್ತೂ ಕೈಕೊಡಲಿಲ್ಲ ಎಂದು ಮೇಡಂಗೆ ಅನುಕಂಪ ಇದೆ. ಕಳೆದ ಬಾರಿ ಕೂಡ ಸೋನಿಯಾ ಡಿಕೆಶಿ ಅವರನ್ನೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳಿದರೂ ಸಿದ್ದು ಒಪ್ಪದೇ ಇರುವುದರಿಂದ ರಾಹುಲ್ ಪರಮೇಶ್ವರ್‌ಗೆ ಅಸ್ತು ಎಂದಿದ್ದರು. ಆದರೆ ಈಗ ಮತ್ತೆ ಆಟ ಶುರುವಾಗಿದ್ದು, ಸೋನಿಯಾ ಅನುಕಂಪ ಇದ್ದರೂ ರಾಜ್ಯದ ಯಾವೊಬ್ಬ ನಾಯಕನೂ ಜೊತೆಗೆ ನಿಲ್ಲದೆ ಇರುವುದನ್ನು ಶಿವಕುಮಾರ್ ಹೇಗೆ ಸಂಭಾಳಿಸುತ್ತಾರೋ ನೋಡಬೇಕು.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ವಿಶೇಷ ಪ್ರತಿನಿಧಿ 

 

loader