ಸ್ಮೃತಿ ಇರಾನಿ ಮಾಹಿತಿ ಮತ್ತು ಪ್ರಸಾರ ಖಾತೆ ಕಳೆದುಕೊಂಡಿದ್ದು ಹೇಗೆ?

First Published 12, Jun 2018, 6:03 PM IST
how Smriti Irani miss broadcasting ministry
Highlights

ಇಬ್ಬರು ಪತ್ರಕರ್ತರನ್ನು ದೂರದರ್ಶನಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ಸಚಿವೆ ಸ್ಮತಿ ಇರಾನಿ ಹಾಗೂ ಪ್ರಸಾರ ಭಾರತಿ ಮುಖ್ಯಸ್ಥ ಅರಕಲಗೂಡು ಸೂರ್ಯಪ್ರಕಾಶ್ ನಡುವಿನ ಜಗ್ಗಾಟದಿಂದಲೇ ಸ್ಮತಿ ವಾರ್ತಾ ಮತ್ತು ಪ್ರಸಾರ ಇಲಾಖೆ ಕಳೆದುಕೊಂಡು ಜವಳಿ ಖಾತೆಗೆ ಮರಳಿ ಹೋದರು ಎಂದು ಶಾಸ್ತ್ರಿ ಭವನದಿಂದ ಬರುತ್ತಿರುವ ಸುದ್ದಿಗಳು ಹೇಳುತ್ತಿವೆ. 

ಬೆಂಗಳೂರು (ಜೂ. 12): ಇಬ್ಬರು ಪತ್ರಕರ್ತರನ್ನು ದೂರದರ್ಶನಕ್ಕೆ ನೇಮಕ ಮಾಡಿಕೊಳ್ಳುವ ಬಗ್ಗೆ ಸಚಿವೆ ಸ್ಮತಿ ಇರಾನಿ ಹಾಗೂ ಪ್ರಸಾರ ಭಾರತಿ ಮುಖ್ಯಸ್ಥ ಅರಕಲಗೂಡು ಸೂರ್ಯಪ್ರಕಾಶ್ ನಡುವಿನ ಜಗ್ಗಾಟದಿಂದಲೇ ಸ್ಮತಿ ವಾರ್ತಾ ಮತ್ತು ಪ್ರಸಾರ ಇಲಾಖೆ ಕಳೆದುಕೊಂಡು ಜವಳಿ ಖಾತೆಗೆ ಮರಳಿ ಹೋದರು ಎಂದು ಶಾಸ್ತ್ರಿ ಭವನದಿಂದ ಬರುತ್ತಿರುವ ಸುದ್ದಿಗಳು ಹೇಳುತ್ತಿವೆ.

ಇಬ್ಬರ ನೇಮಕಾತಿ ಸಂಬಂಧ ಜಟಾಪಟಿ ಬಹಳ ದೀರ್ಘಕ್ಕೆ ಹೋಗಿ ನಂತರ ಪ್ರಧಾನಿ ಮೋದಿ ಸ್ಮತಿಯನ್ನೇ ವರ್ಗಾಯಿಸುವ ತೀರ್ಮಾನಕ್ಕೆ ಬಂದರು ಎಂದು ಹೇಳಲಾಗುತ್ತಿದೆ. ಹಿಂದೆ ಕೂಡ ಸೂರ್ಯಪ್ರಕಾಶ್‌ರ ಅವಧಿ ವಿಸ್ತರಿಸಲು ಸ್ಮತಿ ಇರಾನಿ ಮೀನಮೇಷ ಎಣಿಸುತ್ತಿದ್ದಾಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮೋದಿ ಜೊತೆ ನೇರವಾಗಿ ಮಾತನಾಡಿ ಫೈಲ್ ಕ್ಲಿಯರ್ ಮಾಡಿಸಿದ ದಿನದಿಂದಲೇ ಸ್ಮತಿ ಮತ್ತು ಕನ್ನಡಿಗ ಸೂರ್ಯಪ್ರಕಾಶ್ ನಡುವೆ ಜಟಾಪಟಿ ಶುರು  ಆಗಿತ್ತಂತೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

loader