ರಾತ್ರಿ ಸ್ವಲ್ಪ ನಿದ್ದೆ ಮಾಡಿ; ಎಂ ಬಿ ಪಾಟೀಲರಿಗೆ ರಾಹುಲ್ ಗಾಂಧಿ ಸಲಹೆ

Rahul Gandhi Advise to M B Patil
Highlights

ರಾಹುಲ್ ಗಾಂಧಿ ಅವರಿಗೆ ಎಂ ಬಿ ಪಾಟೀಲರು ಟೆನ್ಷನ್ ಪಾರ್ಟಿ ಎಂಬ ಅಭಿಪ್ರಾಯವಿದೆ. ವಿಪರೀತ ಟೆನ್ಷನ್ ಮಾಡಿಕೊಂಡು ಬಿಪಿ ಏರಿಸಿಕೊಂಡು ಓಡಾಡುವ ಬಗ್ಗೆ ಪಾಟೀಲರಿಗೆ, ‘ಹೀಗೆ ಮಾಡಬೇಡಿ’ ಎಂದು ಕೂಡ ಹೇಳಿಸಿದ್ದಾರಂತೆ. 

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಎಂ ಬಿ ಪಾಟೀಲ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ‘ಪಾಟೀಲ್ ಈಸ್ ಜಂಟಲ್‌ಮ್ಯಾನ್’ ಎಂದು ಸೋನಿಯಾ ಹೊಗಳುತ್ತಿರುತ್ತಾರೆ. ಆದರೆ ರಾಹುಲ್ ಗಾಂಧಿ ಅವರಿಗೆ ಪಾಟೀಲರು ಟೆನ್ಷನ್ ಪಾರ್ಟಿ ಎಂಬ ಅಭಿಪ್ರಾಯವಿದೆ.

ವಿಪರೀತ ಟೆನ್ಷನ್ ಮಾಡಿಕೊಂಡು ಬಿಪಿ ಏರಿಸಿಕೊಂಡು ಓಡಾಡುವ ಬಗ್ಗೆ ಪಾಟೀಲರಿಗೆ, ‘ಹೀಗೆ ಮಾಡಬೇಡಿ’ ಎಂದು ಕೂಡ ಹೇಳಿಸಿದ್ದಾರಂತೆ. ಮೊನ್ನೆ ದಿಲ್ಲಿಗೆ ಬಂದಿದ್ದಾಗ ಕೂಡ ನಿದ್ದೆಗೆಟ್ಟು ಕಣ್ಣು ಉಬ್ಬಿಸಿಕೊಂಡು ಬಂದಿದ್ದ ಪಾಟೀಲರನ್ನು ನೋಡಿ ರಾಹುಲ್ ಗಾಂಧಿ, ‘ಥೋಡಾ ರಾತ್ ಕೋ ಸೋಯಿಯೇ, ಆಂಖೇ ದೇಖೋ ಆಪ್ ಕಿ’ ಎಂದರಂತೆ. ರಾಹುಲ್ ಮಾತಿನಿಂದ ಇನ್ನಷ್ಟು ಕಣ್ಣೀರಾದ ಎಂ ಬಿ ಪಾಟೀಲ್ ‘ಏನಿಲ್ಲಾ ಸರ್.. ನನಗೆ ಅಧಿಕಾರ ಬೇಡ. ಆದರೆ ಬಿಜೆಪಿ ಜೊತೆ ಸಂಪರ್ಕದಲ್ಲಿರುವ ಶಿವಾನಂದ ಪಾಟೀಲರಿಗೆ ಅಧಿಕಾರ ಕೊಟ್ಟಿದ್ದು ಬಹಳ ಬೇಸರ ತಂದಿದೆ’ ಎಂದು ಮನದ ನೋವನ್ನು ಹೇಳಿಕೊಂಡೇಬಿಟ್ಟರಂತೆ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

 

loader