ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನೀರು ತುಂಬಿರುವ ಹಳ್ಳವನ್ನು ಹರಸಾಹಸ ಪಟ್ಟು ದಾಟಿ ಶವಸಂಸ್ಕಾರ ನೆರವೇರಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Karnataka Districts Aug 12, 2020, 11:13 AM IST
ಕ್ರೇನ್ ಅಪಘಾತದಲ್ಲಿ ಮೃತಪಟ್ಟ ಅಳಿಯನ ಅಂತಿಮ ವಿಧಿ ವಿಧಾನಕ್ಕೆ ತೆರಳುತ್ತಿದ್ದ ಕುಟುಂಬ ಸಹ ದುರದೃಷ್ಟವಷಾತ್ ರಸ್ತೆ ಅಪಘಾತಕ್ಕೆ ಬಲಿಯಾಗಿದೆ. ಘೋರ ಅಪಘಾಥದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
CRIME Aug 4, 2020, 4:59 PM IST
Karnataka Districts Aug 1, 2020, 7:51 PM IST
ಕೊರೋನಾ ಸೋಂಕು ತಗುಲಿ ಸಾವಿಗೀಡಾದ 80ರ ಹರೆಯದ ವೃದ್ಧೆಯ ಅಂತ್ಯಸಂಸ್ಕಾರವನ್ನು ಸರ್ಕಾರದ ನಿಯಮ ಗಾಳಿಗೆತೂರಿ ಅಕ್ರಮವಾಗಿ ಯಾವುದೇ ಸುರಕ್ಷಾ ಕ್ರಮಗಳಿಲ್ಲದೆ 150 ಮಂದಿ ಊರಿನವರೇ ಸೇರಿ ಮಾಡಿದ ಆಘಾತಕಾರಿ ಘಟನೆ ಮಂಗಳೂರಿನ ಬೋಳೂರಿನಲ್ಲಿ ನಡೆದಿದ್ದು, ಇದೀಗ ಊರಿನವರಿಗೆ ಸೋಂಕು ಹರಡುವ ತೀವ್ರ ಆತಂಕ ಎದುರಾಗಿದೆ.
Karnataka Districts Jul 30, 2020, 7:00 AM IST
ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದೇ ವೇಳೆಯಲ್ಲಿ ಶವಸಂಸ್ಕಾರಕ್ಕಾಗಿ ಎಲೆಕ್ಟಿಕ್ ಚಿತಾಗಾರದಲ್ಲಿ ಸುಲಿಗೆ ಮಾಡಲಾಗುತ್ತಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಇದೀಗ ಇದಕ್ಕೆ ಬ್ರೇಕ್ ಹಾಕಿರುವ ಬಿಬಿಎಂಪಿ, ಮೃತ ಸೋಂಕಿತರ ಉಚಿತ ಶವ ಸಂಸ್ಕಾರಕ್ಕೆ ಅಶೋಕ ಆದೇಶಿಸಿದ್ದಾರೆ.
Karnataka Districts Jul 25, 2020, 3:25 PM IST
ಮೂಲ್ಕಿಯ ಕಾರ್ನಾಡುವಿನಲ್ಲಿ ಅನಾಥಾಶ್ರಮದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ ಬ್ರಾಹ್ಮಣ ಸಮುದಾಯದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಆಶ್ರಮದ ರೂವಾರಿ, ಆಸೀಫ್ ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
Karnataka Districts Jul 25, 2020, 11:20 AM IST
ಮಹಾಮಾರಿ ಕೊರೋನಾ ವೈರಸ್ನಿಂದ ಜಗತ್ತು ತಲ್ಲಣಗೊಂಡಿದ್ದು, ವೈರಸ್ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕೆ ಸಂಬಂಧಿಕರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದಲ್ಲಿ ಮುಸ್ಲಿಂ ಯುವಕರ ತಂಡವೊಂದು ಕೊರೋನಾ ವೈರಸ್ನಿಂದ ಮೃತಪಟ್ಟವರಿಗೆ ಗೌರವಯುತ ಶವಸಂಸ್ಕಾರ ನಡೆಸಲು ಮುಂದಾಗಿದ್ದಾರೆ.
Karnataka Districts Jul 25, 2020, 9:21 AM IST
ಸಾಕಷ್ಟು ಸಂದರ್ಭದಲ್ಲಿ ಮೃತ ವ್ಯಕ್ತಿ ಅಂತ್ಯಸಂಸ್ಕಾರದ ವೇಳೆ ಎಚ್ಚರಗೊಂಡು ಎಲ್ಲರನ್ನು ಗಲಿಬಿಲಿಗೊಳಿಸಿದ ಘಟನೆಗಳು ಹಲವು ನಡೆದಿವೆ. ಅದೇ ರೀತಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲೊಂದು ವಿಚಿತ್ರ ಘಟನೆ ನಡೆದಿದೆ.
Karnataka Districts Jul 25, 2020, 7:11 AM IST
ಕೊರೋನಾ ಸೋಂಕಿತ ವ್ಯಕ್ತಿಯ ಶವಸಂಸ್ಕಾರವನ್ನು ತಾಂಡಾ ಹತ್ತಿರದಲ್ಲಿ ಮಾಡಬಾರದು ಎಂದು ಒತ್ತಾಯಿಸಿ ತಾಲೂಕಿನ ಗಂಗಾಜಲ ತಾಂಡಾ ಹತ್ತಿರದಲ್ಲಿ ಗುರುವಾರ ಆ್ಯಂಬುಲೆನ್ಸ್ ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
Karnataka Districts Jul 24, 2020, 11:47 AM IST
ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಹೆಚ್ಚಾದ ಬಳಿಕ ಅನ್ಯ ಕಾರಣದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಾರ್ವಜನಿಕರು ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಕೊರೋನಾ ಸೋಂಕಿನಿಂದ ಮೃತರಾದವರ ಶವಸಂಸ್ಕಾರಕ್ಕೆ ಪ್ರತ್ಯೇಕ ನಾಲ್ಕು ಚಿತಾಗಾರಗಳನ್ನು ನಿಗದಿಪಡಿಸಿದೆ.
state Jul 22, 2020, 7:58 AM IST
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಗಾರೆಭಾವಿಪಾಳ್ಯದ ಹಿರಿಯ ಬಿಜೆಪಿ ಮುಖಂಡ ಶ್ರೀನಿವಾಸರೆಡ್ಡಿ ಅವರು ಕೊರೋನದಿಂದ ನಿಧನರಾಗಿದ್ದು, ಶಾಸಕ ಎಂ.ಸತೀಶ್ ರೆಡ್ಡಿ ಪಿಪಿಇ ಕಿಟ್ ಧರಿಸಿ ನಗರದ ಬನಶಂಕರಿ ಚಿತಾಗಾರದಲ್ಲಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತ್ಯಸಂಸ್ಕಾರ ನೆರವೇರಿಸಿದರು.
Karnataka Districts Jul 22, 2020, 7:58 AM IST
ಕೋವಿಡ್ ಸೋಂಕಿತರ ಶವಗಳನ್ನು ಬೇಕಾಬಿಟ್ಟಿಗುಂಡಿಗೆಸೆವುದನ್ನು ತಪ್ಪಿಸುವ ಸಲುವಾಗಿ ಮುಸ್ಲಿಮರ ಮೃತದೇಹಗಳಿಗೆ ಪಿಎಫ್ಐ, ಹಿಂದೂಗಳ ಮೃತದೇಹಗಳಿಗೆ ಬಜರಂಗದಳದ ಸದಸ್ಯರು ಗೌರವದ ಅಂತ್ಯಸಂಸ್ಕಾರ ನೆರವೇರಿಸಿರುವ ಬೆನ್ನಲ್ಲೇ, ಇದೀಗ ಕ್ರೈಸ್ತ ಸಮುದಾಯದ ಮೃತದೇಹಗಳಿಗೂ ಧರ್ಮದ ನಿಯಮಗಳಿಗನುಸಾರವಾಗಿ ಅಂತಿಮ ವಿಧಾನಗಳನ್ನು ಪೂರೈಸಿರುವ 2 ಪ್ರತ್ಯೇಕ ಘಟನೆಗಳು ಮಂಗಳೂರಿನಿಂದ ವರದಿಯಾಗಿದೆ. ಇಲ್ಲಿವೆ ಫೋಟೋಸ್
Karnataka Districts Jul 21, 2020, 8:37 AM IST
ಸೋಂಕಿತರ ಅಂತ್ಯಕ್ರಿಯೆಗೆ ಜಾಗವೇ ಇಲ್ಲ. ಈಗಿರುವ ಚಿತಾಗಾರದ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಶವಸಂಸ್ಕಾರಕ್ಕೆ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ. ಬಿಬಿಎಂಪಿಯಾಗಲಿ, ಜಿಲ್ಲಾಡಳಿತವಾಗಲಿ ಈ ಬಗ್ಗೆ ಸರಿಯಾದ ಕ್ರಮವನ್ನೇ ಕೈಗೊಂಡಿಲ್ಲ. ನೋಡಿದ ಜಾಗವೆಲ್ಲಾ ವ್ಯಾಜ್ಯ ಹಾಗೂ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ.
state Jul 20, 2020, 3:33 PM IST
ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬೆಂಗಳೂರು ನಗರ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸುವ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತಪಟ್ಟ ಮುಸ್ಲಿಂ ಸಮುದಾಯದ ಶವಗಳನ್ನು ಸಭ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ಅಂತ್ಯಸಂಸ್ಕಾರ ಮಾಡಬೇಕೆಂದು ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
state Jul 20, 2020, 1:16 PM IST
ಸಂಸದ ಡಿಕೆ ಸುರೇಶ್ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಪಿಪಿಇ ಕಿಟ್ ಧರಿಸಿ ಸುರಕ್ಷತಾ ಕ್ರಮ ಅನುಸರಣೆ ಮಾಡಿದ್ದಾರೆ. ಕೊರೋನಾ ವಿಚಾರದಲ್ಲಿ ಅಪನಂಬಿಕೆ ಮತ್ತು ಅಪಪ್ರಚಾರ ನಡೆಯುತ್ತಿದೆ ಎಂದು ಸುರೇಶ್ ಹೇಳಿದ್ದಾರೆ.
Karnataka Districts Jul 19, 2020, 7:08 PM IST