ಬೆಂಗಳೂರು(ಜು.22): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಗಾರೆಭಾವಿಪಾಳ್ಯದ ಹಿರಿಯ ಬಿಜೆಪಿ ಮುಖಂಡ ಶ್ರೀನಿವಾಸರೆಡ್ಡಿ ಅವರು ಕೊರೋನದಿಂದ ನಿಧನರಾಗಿದ್ದು, ಶಾಸಕ ಎಂ.ಸತೀಶ್‌ ರೆಡ್ಡಿ ಪಿಪಿಇ ಕಿಟ್‌ ಧರಿಸಿ ನಗರದ ಬನಶಂಕರಿ ಚಿತಾಗಾರದಲ್ಲಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತ್ಯಸಂಸ್ಕಾರ ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಸಾಂತ್ವನ ನೀಡಿ ಮಾತನಾಡಿದ ಸತೀಶ್‌ ರೆಡ್ಡಿ, ಶ್ರೀನಿವಾಸರೆಡ್ಡಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರ ಸಾವು ಅಪಾರ ನೋವನ್ನುಂಟು ಮಾಡಿದೆ. ಬಿಜೆಪಿ ಪರವಾಗಿ ಅವರಿಗೆ ಅತಿಮ ನಮನ ಸಲ್ಲಿಸಿದ್ದೇನೆ ಎಂದರು. ಶಾಸಕರು ಪಿಪಿಇ ಕಿಟ್‌ ಧರಿಸುವ ಮೂಲಕ ಧೈರ್ಯವಾಗಿ ಪಕ್ಷದ ಕಾರ್ಯಕರ್ತನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.

ಕೊರೋನಾಗೆ ಎಎಸ್‌ಐ ಬಲಿ

ಎರಡು ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದ ನಗರ ಸಶಸ್ತ್ರ ಮೀಸಲು ಪಡೆಯ 57 ವರ್ಷದ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ವೊಬ್ಬರಿಗೆ (ಎಎಸ್‌ಐ) ಕೊರೋನಾ ಸೋಂಕು ಮಂಗಳವಾರ ದೃಢಪಟ್ಟಿದೆ.

ಚಾಲಕರ ಕೊರತೆ: BMTC ಡ್ರೈವರ್ಸ್‌ಗಳಿಂದ ಇನ್ನು ಆ್ಯಂಬುಲೆನ್ಸ್ ಚಾಲನೆ

ಮೃತ ಎಎಸ್‌ಐ ಅವರು ತಮ್ಮ ಕುಟುಂಬದ ಆಡುಗೋಡಿ ಪೊಲೀಸ್‌ ಕ್ವಾಟ್ರರ್ಸ್‌ನಲ್ಲಿ ನೆಲೆಸಿದ್ದರು. ಮನೆಯಲ್ಲಿ ಅರೆಪ್ರಜ್ಞರಾಗಿ ಭಾನುವಾರ ಅವರು ಕುಸಿದು ಬಿದ್ದಿದ್ದರು. ತಕ್ಷಣವೇ ಕುಟುಂಬ ಸದಸ್ಯರು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.

ಮೊದಲ ಪುಟದಲ್ಲಿ ಮಾಸ್ಕ್, ಶ್ರೀನಗರ ದಿನ ಪತ್ರಿಕೆಯ ವಿಶೇಷ ಪ್ರಯತ್ನಕ್ಕೆ ಮೆಚ್ಚುಗೆ!

ಆದರೆ ಚಿಕಿತ್ಸೆ ಫಲಿಸದೆ ಎಎಸ್‌ಐ ಕೊನೆಯುಸಿರೆಳೆದಿದ್ದರು. ಬಳಿಕ ಕೊವೀಡ್‌ ಪರೀಕ್ಷೆಗೊಳಪಡಿಸಲಾಯಿತು. ಮಂಗಳವಾರ ವರದಿಯಲ್ಲಿ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವರದಿ ಹಿನ್ನೆಲೆಯಲ್ಲಿ ಮೃತರ ಕುಟುಂಬದ ಸದಸ್ಯರನ್ನು ಕ್ವಾರಂಟನ್‌ಗೆ ಒಳಪಡಿಸಲಾಗಿದೆ.