Asianet Suvarna News Asianet Suvarna News

ನೀವು ಬೆಂಗಳೂರು ನಿವಾಸಿಗಳಾಗಿದ್ದು, ನಿಮ್ಮನೆ ಬಳಿ ಪಾರಿವಾಳ ಬಂತೆಂದರೆ ಎಚ್ಚರವಾಗಿರಿ!

ಬೆಂಗಳೂರಿನಲ್ಲಿ ಪಾರಿವಾಳಗಳನ್ನು ಬಳಸಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮನೆಗಳ ಮೇಲೆ ಪಾರಿವಾಳಗಳನ್ನು ಹಾರಿಸಿ, ಮಾಲೀಕರ ಅನುಮತಿ ಪಡೆದು ಒಳಗೆ ಹೋಗಿ ಕಳ್ಳತನ ಮಾಡುತ್ತಿದ್ದ. ಪೊಲೀಸರು ಆರೋಪಿಯಿಂದ 30 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Bengaluru City Market Police Arrest Parivala Manja by home theft case sat
Author
First Published Oct 7, 2024, 3:03 PM IST | Last Updated Oct 7, 2024, 3:03 PM IST

ಬೆಂಗಳೂರು (ಅ.07): ನೀವು ಬೆಂಗಳೂರು ನಿವಾಸಿಗಳಾ? ನಿಮ್ಮ ಮನೆಯ ಬಳಿಯೂ ಪಾರಿವಾಳಗಳು ಬರುತ್ತಿವೆಯಾ? ಹಾಗಾದರೆ ನೀವು ಎಚ್ಚರಿಕೆಯಿಂದ ಇರಲೇಬೇಕು. ನೀವು ಮನೆಯ ಬೀಗ ಹಾಕಿಕೊಂಡು ಎಲ್ಲಿಗಾದರೂ ಹೊರಗೆ ಹೋದರೆ ನಿಮ್ಮ ಮನೆ ಕಳ್ಳತನ ಆಗುವುದು ಗ್ಯಾರಂಟಿ...!

ಸಿಲಿಕಾನ್  ಸಿಟಿ ಬೆಂಗಳೂರಿನ ಕೇಂದ್ರ ಭಾಗದ ಕೆ.ಆರ್. ಮಾರಕಟ್ಟ, ಚಮರಾಜಪೇಟ, ಜಯನಗರ, ಕಾಟನ‌ಪೇಟೆ ಸೇರಿದಂತೆ ವಿವಿಧೆಡೆ ಮನೆಗಳ ಮೇಲೆ ಪಾರಿವಾಳಗಳನ್ನು ಹಾರಿ ಬಿಡುತ್ತಿದ್ದ ಈತ ಪಾರಿವಾಳ ಹಿಡಿದುಕೊಂಡು ಬರುವುದಾಗಿ ಮಾಲೀಕರು ಹಾಗೂ ಸೆಕ್ಯೂರಿಟಿ ಗಾರ್ಡ್ ಅನುಮತಿ ಪಡೆದು ಒಳಗೆ ಹೋದರೆ ಮನೆಗಳ ಕಳ್ಳತನ ಮಾಡಿಕೊಂಡೇ ವಾಪಸ್ ಬರುತ್ತಿದ್ದನು. ಹೀಗಾಗಿ, ನಿಮ್ಮ ಮನೆಯ ಬಳಿಯೂ  ಮನೆಗಳ್ಳತ ಮಾಡುತ್ತಿದ್ದ ತಮಿಳುನಾಡು ಮೂಲಕ ಪಾರಿವಾಳ ಮಂಜನನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ಡೆವಿಲ್ ದರ್ಶನ್‌ಗೆ ಕಾಡ್ತಿದ್ಯಾ ರೇಣುಕಾಸ್ವಾಮಿ ಆತ್ಮ? ಅಸಲಿ ಸತ್ಯ ಇಲ್ಲಿದೆ

ಸಿಟಿ ಮಾರ್ಕೆಟ್ ಪೊಲೀಸರಿಂದ  ನಟೋರಿಯಸ್ ಮನೆಗಳ್ಳ ಮಂಜ ಅಲಿಯಾಸ್ ಪಾರಿವಾಳ  ಮಂಜ ಅರೆಸ್ಟ್ ಆಗಿದ್ದಾನೆ. ಪಾರಿವಾಳ ಮಂಜ ಕಳೆದ ಹಲವಾರು ವರ್ಷಗಳಿಂದ ಮನೆ ಕಳ್ಳತನ ಮಾಡುತ್ತಿದ್ದನು. ಮೂಲತಃ ತಮಿಳುನಾಡಿನವನಾದ ಆರೋಪಿ ಬಳಿಯಿಂದ 30 ಲಕ್ಷ ಮೌಲ್ಯದ ಚಿನ್ನದ ಆಭರಣ ವಶಕ್ಕೆ ಪಡೆಯಲಾಗಿದೆ. ಈತ ಪಾರಿವಾಳಗಳನ್ನು ಮನೆ ಮೇಲೆ ಹಾರಿಸುವುದು. ನಂತರ ಮನೆ ಮಾಲೀಕ (ಕಟ್ಟಡದ ಮಾಲಿಕನ) ಅನುಮತಿ ಪಡೆದು ಕಟ್ಟಡಕ್ಕೆ ಎಂಟ್ರಿ ಕೊಡುತ್ತಿದ್ದನು. ಪಾರಿವಾಳ ಹಿಡಿದುಕೊಂಡು ಬರುವ  ನೆಪದಲ್ಲಿ ಬಂದು, ಮನೆಗಳ ಬೀಗವನ್ನು ಒಡೆದು ಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗುತ್ತಿದ್ದನು.

ಇದೇ ರೀತಿಯಲ್ಲಿ ಬೆಂಗಳೂರಿನ ವಿವಿಧೆಡೆ ಪಾರವಾಳಗಳನ್ನು ಹಾರಿಸುವ ಮಂಜ ಕಳೆದ ಹಲವಾರು ವರ್ಷಗಳಿಂದ  ಸುಮಾರು 60 ಮನೆಯಲ್ಲಿ ಕಳ್ಳತನ  ಮಾಡಿದ್ದಾನೆ. ಒಂದು ಕೇಸ್ ಕೆ.ಆರ್. ಮಾರ್ಕೆಟ್ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ವೇಳೆ ಮತ್ತಷ್ಟು ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಈ ಆರೋಪಿಯಿಂದ ಪೊಲೀಸರು ಬರೋಬ್ಬರಿ 475 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಇನ್ನಷ್ಟು ಮಾಹಿತಿಗಾಗಿ ಪೊಲೀಸರು ಆರೋಪಿ ಮಂಜನನ್ನು ವಿಚಾರಣೆ ಮಾಡುತ್ತಿದ್ದಾರೆ.

ಬೆಂಗ್ಳೂರಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು: ವರದಕ್ಷಿಣೆ ಕಿರುಕುಳ ನೀಡಿ ಕೊಲೆ?

ಬೆಂಗಳೂರಿನಂತ ಸದಾ ಗಿಜುಗುಡುವ ನಗರದಲ್ಲೂ ಮನೆ ಬಳಿ ಪಾರಿವಾಳಗಳು (pigeons) ಬರುತ್ತಿವೆ ಎಂದು ನಿಮಗೆ ಖುಷಿಯಾಗಿದ್ದರೆ, ಕೂಡಲೇ ಆ ಖುಷಿಯನ್ನು ದೂರ ಮಾಡಿಬಿಡಿ. ನಿಮ್ಮ ಮನೆ ಬಳಿ ಕುಳಿತುಕೊಳ್ಳುವ ಪಾರಿವಾಳಗಳನ್ನು ಓಡಿಸಿಬಿಡಿ. ಇಲ್ಲವೆಂದರೆ ನಿಮ್ಮ ಮನೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಕಳೆದ 2021ರಲ್ಲಿಯೂ ಸಾಬೀತಾಗಿತ್ತು. ಹಣದ ಆಸೆಗೆ ಬಿದ್ದ ಬ್ಯಾಡ್ ನಾಗ ಐಷಾರಾಮಿ ಡುಪ್ಲೆಕ್ಸ್ ಮನೆಗಳನ್ನು ಲಿಸ್ಟ್ ಮಾಡಿಕೊಂಡು, ನಂತರ ತಾನು ಸಾಕಿ ಪಳಗಿಸಿದ ಪಾರಿವಾಳವನ್ನು ಅಂತಹ ಮನೆಗೆ ಕಳುಹಿಸುತ್ತಿದ್ದ. ಆ ಪರಿವಾಳ ಮನೆಯ ಬಾಲ್ಕನಿಯಲ್ಲಿ ಹೋಗಿ ಕೂರುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಮನೆಯ ಕಾಲಿಂಗ್ ಬೆಲ್ ಒತ್ತುತ್ತಿದ್ದ ಬ್ಯಾಡ್ ನಾಗ, ನನ್ನ ಪಾರಿವಾಳ ನಿಮ್ಮ ಬಾಲ್ಕನಿಯಲ್ಲಿದೆ ಪ್ಲೀಸ್ ತಗೋತ್ತಿನಿ. ಮೇಲೆ ಸಿಕ್ಕಿ ಹಾಕಿಕೊಂಡಿರಬೇಕು ಎಂದು ಸಭ್ಯ ಹುಡುಗನಂತೆ ನಟಿಸುತ್ತಿದ್ದನು.

ಇನ್ನು ಪಾರಿವಾಳ ಹಿಡಿಯುವ ಹುಡುಗನನ್ನು ನಂಬಿ ಮನೆಯವರು ಒಳಗೆ ಬಿಟ್ಟುಕೊಂಡರೆ ಕ್ಷಣಾರ್ಧದಲ್ಲೇ ಮನೆ ಕಳ್ಳತನ ಮಾಡುವುದಕ್ಕೆ ಎಲ್ಲೆಲ್ಲಿ ಏನೇನು ಅವಕಾಶವಿದೆ ಎಂದೆಲ್ಲಾ ಸ್ಕ್ಯಾನ್ ಮಾಡಿಕೊಂಡು ಬರುತ್ತಿದ್ದನು. ಇನ್ನು ರಾತ್ರಿ ಅಥವಾ ಈ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿಕೊಂಡು ಬರುತ್ತಿದ್ದನು. ಇದೇ ರೀತಿ 3 ಮನೆಗಳ ಕಳ್ಳತನ ಮಾಡಿದ್ದ ಬ್ಯಾಡ್‌ ನಾಗನನ್ನು ಚನ್ನಮ್ಮನಕೆರೆ ಠಾಣೆ ಪೊಲೀಸರು ಬಂಧಿಸಿ ಬರೋಬ್ಬರಿ 100 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದರು.

Latest Videos
Follow Us:
Download App:
  • android
  • ios