ಮುದ್ದೇಬಿಹಾಳ: ಶವಸಂಸ್ಕಾರಕ್ಕೆ ಉಕ್ಕಿ ಹರಿಯುವ ಹಳ್ಳ ಪರದಾಡಿದ ಗ್ರಾಮಸ್ಥರು!

ನೀರು ತುಂಬಿರುವ ಹಳ್ಳವನ್ನು ಹರಸಾಹಸ ಪಟ್ಟು ದಾಟಿ ಶವಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು| ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ನಡೆದ ಘಟನೆ| ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಈ ರೀತಿಯಲ್ಲಿ ಹರಸಾಹಸ ಪಡುವಂತಾಗಿದೆ ಎಂದು ಅಳಲು ತೋಡಿಕೊಂಡ ಗ್ರಾಮಸ್ಥರು| 

Villagers Faced Problems to Funeral due to Heavy Rain in Muddebihal in Vijayapura

ಮುದ್ದೇಬಿಹಾಳ(ಆ.12): ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನೀರು ತುಂಬಿರುವ ಹಳ್ಳವನ್ನು ಹರಸಾಹಸ ಪಟ್ಟು ದಾಟಿ ಶವಸಂಸ್ಕಾರ ನೆರವೇರಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಗ್ರಾಮದಲ್ಲಿ ಮುಸ್ಲಿಮ್‌ ಸಮಾಜದ ಕಾಸೀಮಸಾಬ್‌ ಮುರ್ತುಜಸಾಬ ದೊಡ್ಡಮನಿ ಎಂಬಾತರು ನಿಧನರಾಗಿದ್ದರು. ಸೋಮವಾರ ಮಧ್ಯಾಹ್ನ ಮೃತರ ಶವವಿರುವ ಶವಪಟ್ಟಿಯನ್ನು ಹೊತ್ತುಕೊಂಡು ಅಂತ್ಯಕ್ರಿಯೆಗಾಗಿ ಸಾಗಿಸುವ ಸಂದರ್ಭದಲ್ಲಿ ಈ ಪ್ರಸಂಗ ನಡೆದಿದೆ. 

ಬಾವಿಯಲ್ಲಿ ಹಿಂದೂ ಹುಡ್ಗ, ಮುಸ್ಲಿಂ ಹುಡ್ಗಿ ಶವ ಪತ್ತೆ...!

ಕೆಸರು ತುಳಿದುಕೊಂಡು ಸುಮಾರು ನಾಲ್ಕು ಅಡಿಯ ನೀರಿನಲ್ಲಿ ಸಾಕಷ್ಟು ಪರದಾಡಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಗ್ರಾಮದಲ್ಲಿ ಮುಸ್ಲಿಮ್‌ ಹಾಗೂ ಇತರ ಸಮುದಾಯದವರಿಗೆ ಅಂತ್ಯಕ್ರಿಯೆ ಮಾಡಲು ಸರ್ಕಾರ ನೀಡಿರುವ ಸ್ಥಳವನ್ನು ತಲುಪಲು ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಈ ರೀತಿಯಲ್ಲಿ ಹರಸಾಹಸ ಪಡುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios