ಧಾರವಾಡ: ಸತ್ತ ವ್ಯಕ್ತಿ ನೀರು ಕುಡಿದನೆಂದು ಆಸ್ಪತ್ರೆಗೆ ಓಡೋಡಿ ಬಂದ ಜನರು..!
ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿ| ಅಂತ್ಯಸಂಸ್ಕಾರದ ವೇಳೆ ನೀರು ಕುಡಿದರು ಎನ್ನುವ ಕಾರಣದಿಂದ ಅವರು ಬದುಕಿದ್ದಾರೆಂದು ತಿಳಿದು ಜಿಲ್ಲಾಸ್ಪತ್ರೆಗೆ ತಂದು ತಪಾಸಣೆ ಮಾಡಿಸಿದ ಜನರು| ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ಘಟನೆ|
ಧಾರವಾಡ(ಜು.25): ಸಾಕಷ್ಟು ಸಂದರ್ಭದಲ್ಲಿ ಮೃತ ವ್ಯಕ್ತಿ ಅಂತ್ಯಸಂಸ್ಕಾರದ ವೇಳೆ ಎಚ್ಚರಗೊಂಡು ಎಲ್ಲರನ್ನು ಗಲಿಬಿಲಿಗೊಳಿಸಿದ ಘಟನೆಗಳು ಹಲವು ನಡೆದಿವೆ. ಅದೇ ರೀತಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲೊಂದು ವಿಚಿತ್ರ ಘಟನೆ ನಡೆದಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತನಾದ ಈರಣ್ಣ ಕಾಂಬಳೆ (56) ಅವರು ಅಂತ್ಯಸಂಸ್ಕಾರದ ವೇಳೆ ನೀರು ಕುಡಿದರು ಎನ್ನುವ ಕಾರಣದಿಂದ ಅವರು ಬದುಕಿದ್ದಾರೆಂದು ತಿಳಿದು ಜಿಲ್ಲಾಸ್ಪತ್ರೆಗೆ ತಂದು ತಪಾಸಣೆ ಮಾಡಿಸಿದ ಅಪರೂಪದ ಘಟನೆ ಶುಕ್ರವಾರ ನಡೆದಿದೆ.
ಹುಬ್ಬಳ್ಳಿ: KIMSನಲ್ಲಿ ಕೊರೋನಾ ಟೆಸ್ಟ್ ಸ್ಥಗಿತ, ಮುಂದುವರಿದ ಪರದಾಟ
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈರಣ್ಣ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡು ಸ್ನಾನ ಮಾಡಿಸುವಾಗ ಶವದ ಬಾಯಿ ಮೂಲಕ ನೀರು ಹೋಗಿದೆ. ಮೃತ ದೇಹದ ಬಾಯಲ್ಲಿ ನೀರು ಒಳಗೆ ಹೋಗದೇ ಹೊರ ಚೆಲ್ಲುತ್ತದೆ. ಹಾಗಾಗಿ ವ್ಯಕ್ತಿಯು ಜೀವಂತ ಇರಬೇಕು ಎಂದು ಭಾವಿಸಿ ಜಿಲ್ಲಾಸ್ಪತ್ರೆಗೆ ತಂದು ಮರು ತಪಾಸಣೆ ಮಾಡಿಸಲಾಯಿತು. ಜಿಲ್ಲಾಸ್ಪತ್ರೆ ವೈದ್ಯರು ತಪಾಸಣೆ ಮಾಡಿ ಮೃತರಾಗಿರುವುದನ್ನು ಖಚಿತಪಡಿಸಿದಾಗ ಸಂಜೆ ಹೊತ್ತಿಗೆ ಅಂತ್ಯಸಂಸ್ಕಾರ ಮಾಡಲಾಯಿತು.