Asianet Suvarna News Asianet Suvarna News
2331 results for "

ಪ್ರವಾಹ

"
food items cloths distributed to flood victims in Davanagerefood items cloths distributed to flood victims in Davanagere

ದಾವಣಗೆರೆ: ನೆರೆ ಸಂತ್ರಸ್ತರಿಗೆ 15,000 ರೊಟ್ಟಿ ವಿತರಣೆ

ದಾವಣಗೆರೆಯ ಚನ್ನಗಿರಿ ತಾಲೂಕಿನಿಂದ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಬಟ್ಟೆ, ಕಂಬಳಿ, ಆಹಾರ, ಧಾನ್ಯಗಳನ್ನು ಸಂಗ್ರಹಿಸಿ ಸಂತ್ರಸ್ತ ಗ್ರಾಮಗಳಲ್ಲಿ ವಿತರಿಸಲಾಯಿತು. ಕಾಕನೂರು ಗ್ರಾಮದ ನಾಗರಿಕರು 15ಸಾವಿರ ರೊಟ್ಟಿ, 20 ಕ್ವಿಂಟಲ್‌ ಅಕ್ಕಿ, 40 ಬಾಕ್ಸ್‌ ಬಿಸ್ಕೇಟ್‌, 150 ಚಾಪೆ, 150 ಹೊದಿಕೆ, ಒಂದುನೂರು ಟವಲ್‌ಗಳನ್ನು ಸಂತ್ರಸ್ತರಿಗೆ ನೀಡಿದರು.

Karnataka Districts Aug 11, 2019, 1:39 PM IST

Gajanana Sharma talks about Shivamogga Sagara Talakalale flood hit areasGajanana Sharma talks about Shivamogga Sagara Talakalale flood hit areas

ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ ತಲಕಳಲೆ ಹಿನ್ನೀರಿನ ಹಳ್ಳಿಗಳು

1964 ರಲ್ಲಿ ತಲಕಳಲೆ ಜಲಾಶಯ ನಿರ್ಮಾಣವಾದ ನಂತರ ಪಶ್ಚಿಮಘಟ್ಟಳ ನೆತ್ತಿಯಲ್ಲಿರುವ ಸಾಗರ ತಾಲೋಕಿನ ಬಿದರೂರು, ಹುಕ್ಕಲು, ಜಡ್ಡಿ ನಮನೆ, ಮೇಲೂರಮನೆ ಇಂದ್ರೋಡಿ, ಅಡ್ಡಮನೆ ಅತ್ತಿಗೋಡು, ಕುಡುಗುಂಜಿ, ವಟ್ಟಕ್ಕಿ ಮುಂತಾದ ಕೆಲವು ಹಳ್ಳಿಗಳು ಬಹುತೇಕ ದ್ವೀಪಗಳಾಗಿ ಹೋಗಿವೆ. 

Karnataka Districts Aug 11, 2019, 1:19 PM IST

Flood relief center shifted as water enters inside in DavanagereFlood relief center shifted as water enters inside in Davanagere

ಉಕ್ಕಿದ ತುಂಗಾಭದ್ರಾ: ಪರಿಹಾರ ಕೇಂದ್ರಕ್ಕೂ ನುಗ್ಗಿತು ನೀರು

ಹೊನ್ನಾಳಿ ಪಟ್ಟಣದ ಬಾಲರಾಜ್‌ ಘಾಟ್‌ನಲ್ಲಿ ಆರಂಭಿಸಿರುವ ನೆರೆ ಸಂತ್ರಸ್ತರ ಕೇಂದ್ರಕ್ಕೆ ನೀರು ನುಗ್ಗಿದ ಹಿನ್ನೆಲೆ ತಾಲೂಕು ಆಡಳಿತ ಕೂಡಲೇ ಅಲ್ಲಿರುವ ಸಂತ್ರಸ್ತರನ್ನು ಪಟ್ಟಣದ ಸರ್ಕಾರಿ ಉರ್ದು ಬಾಲಕಿಯರು ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಿತು. ಅಂಗನವಾಡಿ ಕಾರ್ಯಕರ್ತೆ ಕೆ.ಎಸ್‌. ಮೆಹಬೂಬಿ ನೆರೆ ಸಂತ್ರಸ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು.

Karnataka Districts Aug 11, 2019, 1:18 PM IST

Gujarat floods Police constable Pruthvirajsinh Jadeja rescues two kids on his shouldersGujarat floods Police constable Pruthvirajsinh Jadeja rescues two kids on his shoulders

'ನಿಮ್ಮ ರಕ್ಷಣೆ ನನ್ನ ಕರ್ತವ್ಯ' : ಪುಟ್ಟ ಮಕ್ಕಳಿಗಾಗಿ ಜೀವ ಪಣಕ್ಕಿಟ್ಟ ಈ 'ಹೀರೋ' ಯಾರು?

ನಿಮ್ಮ ರಕ್ಷಣೆ ನಮ್ಮ ಕರ್ತವ್ಯ| ಅಪಾಯದಲ್ಲಿದ್ದ ಮಕ್ಕಳನ್ನು ಕಾಪಾಡಲು ಜೀವ ಪಣಕ್ಕಿಟ್ಟ ಪೊಲೀಸ್ ಸಿಬ್ಬಂದಿ| ಮಕ್ಕಳಿಗೆ ನೀರು ಸೋಕದಂತೆ ಭುಜದ ಮೇಲೆ ಕುಳ್ಳಿರಿಸಿ ಎರಡು ಕಿ. ಮೀಟರ್ ಪ್ರವಾಹದಲ್ಲಿ ನಡೆದುಕೊಂಡು ಬಂದ ಹೀರೋ

NEWS Aug 11, 2019, 1:08 PM IST

Davanagere BJP collects Fund for Flood VictimsDavanagere BJP collects Fund for Flood Victims

ದಾವಣಗೆರೆ: ನೆರೆ ಸಂತ್ರಸ್ಥರಿಗೆ ಬಿಜೆಪಿ ದೇಣಿಗೆ ಸಂಗ್ರಹ

ದಾವಣಗೆರೆ ಬಿಜೆಪಿ ನೆರೆ ಸಂತ್ರಸ್ತರಿಗೆ ನೆರವಾಗಲು ದೇಣಿಗೆ ಸಂಗ್ರಹದಲ್ಲಿ ತೊಡಗಿದ್ದಾರೆ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಜಿಲ್ಲೆಯ ನೆರೆ ಸಂತ್ರಸ್ಥರ ನೆರವಿಗಾಗಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ನಿಧಿ ಸಂಗ್ರಹ ಕಾರ್ಯ ಕೈಗೊಳ್ಳಲಾಯಿತು. ಹೊನ್ನಾಳಿ, ಹರಿಹರದಲ್ಲಿ ಒಟ್ಟು 3 ಗಂಜಿ ಕೇಂದ್ರ ಸ್ಥಾಪಿಸಿ, ಸುಮಾರು 60ಕ್ಕೂ ಹೆಚ್ಚು ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

Karnataka Districts Aug 11, 2019, 1:02 PM IST

MP B Y Raghavendra Announces 1 crore rupees for CM flood Relief FundMP B Y Raghavendra Announces 1 crore rupees for CM flood Relief Fund

ಮಳೆ ಸಂಕಷ್ಟ: ಸಂಸದರಿಂದ 1 ಕೋಟಿ ನೆರವು

ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಕಷ್ಟಕ್ಕೀಡಾದ ಜನರ ನೆರವಿಗಾಗಿ ಪ್ರೇರಣಾ ಎಜುಕೇಷನ್‌ ಟ್ರಸ್ಟ್‌ ವತಿಯಿಂದ 50 ಲಕ್ಷ ರು. ಹಾಗೂ ತಮ್ಮ ಸಂಸದರ ನಿಧಿಯಿಂದ 50 ಲಕ್ಷ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳ ಮೂಲಕ ಸಂಸದ ಬಿ. ವೈ. ರಾಘವೇಂದ್ರ ಶನಿವಾರ ನೀಡಿದರು.

Karnataka Districts Aug 11, 2019, 12:40 PM IST

Nagaraj Vaidya shares about uttara Kannada Ankola Flood cause by Gangavalli RiverNagaraj Vaidya shares about uttara Kannada Ankola Flood cause by Gangavalli River

'ದಾರಿಯಿಲ್ಲದ ಊರಿಗೆ ಮಳೆಯೇ ಸೇತುವೆ'!

ಒದ್ದೆಯಾಗಿರುವುದು ಬರೀ ನೆಲವಷ್ಟೇ ಅಲ್ಲ, ಕಣ್ಣು ಕೂಡ. ಇಂಥ ಹೊತ್ತಲ್ಲಿ ಮಳೆಯನ್ನು ಎದುರಿಸಿ ನಿಂತು ಹಲ್ಲುಕಚ್ಚಿಹಿಡಿದು ಕಾಯುತ್ತಿರುವ ಎಲ್ಲರಿಗೂ ನಮನಗಳನ್ನು ಸಲ್ಲಿಸುತ್ತಾ ಈ ಮಳೆ ಸಂಚಿಕೆಯ ಮೂಲಕ ಕೃತಜ್ಞತೆ ಸಲ್ಲಿಸುತ್ತಿದೆ ಸಾಪ್ತಾಹಿಕ ಪ್ರಭ.

Karnataka Districts Aug 11, 2019, 12:40 PM IST

Aditya Beluru speaks about heavy rainfall in Malenadu regionAditya Beluru speaks about heavy rainfall in Malenadu region

ಮಳೆ ಅಬ್ಬರಕ್ಕೆ ಸೇತುವೆಯೇ ಕೊಚ್ಚಿಕೊಂಡು ಹೋಯಿತು!

ವರುಣರಾಯನ ಆರ್ಭಟಕ್ಕೆ ಮಲೆನಾಡು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಸಂಪರ್ಕಗಳು ಕಡಿತಗೊಂಡಿವೆ. ಕರೆಂಟಿಲ್ಲ. ನೆಟ್‌ವರ್ಕಿಲ್ಲ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಡೋಡಿ ಸೇತುವೆಯಂತೂ ಕೊಚ್ಚಿಕೊಂಡೇ ಹೋಗಿದೆ. ಶಿವಮೊಗ್ಗ- ಕೊಲ್ಲೂರು ಸಂಪರ್ಕ ಕಡಿತಗೊಂಡಿದೆ. 

Karnataka Districts Aug 11, 2019, 12:39 PM IST

Thyagarthi Village submerged as Heavy Rain lashes in ShivamoggaThyagarthi Village submerged as Heavy Rain lashes in Shivamogga

ಶಿವಮೊಗ್ಗ: ತ್ಯಾಗರ್ತಿ ಗ್ರಾಮ ಸಂಪೂರ್ಣ ಜಲಾವೃತ

ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮ ಜಲಾವೃತವಾಗಿದೆ. ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಮಳೆಯಿಂದ ಜಲಾವೃತವಾದ 5 ಕುಟುಂಬಗಳ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಊಟ ತಿಂಡಿಯ ವ್ಯವಸ್ಥೆ ಕಲ್ಪಿಸಲಾಗಿದ್ದು ಪಂಚಾಯ್ತಿ ಪಿಡಿಒ ಹಾಗೂ ಗ್ರಾಮಲೆಕ್ಕಿಗರು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಪರಿಹಾರ ಕಾರ್ಯಕೈಗೊಂಡಿದ್ದಾರೆ.

Karnataka Districts Aug 11, 2019, 12:27 PM IST

MP Prajwal Revanna Visits Flood Hit AreasMP Prajwal Revanna Visits Flood Hit Areas

ಕ್ಷೇತ್ರದ ಜನರಿಗೆ ಧೈರ್ಯ ತುಂಬಿದ ಸಂಸದ ಪ್ರಜ್ವಲ್

ಕರ್ನಾಟಕದಲ್ಲಿ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ.  ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಪ್ರವಾಹ ಪೀಡಿತಪ್ರದೇಶಗಳಿಗೆ ತೆರಳಿ ನೆರವಿನ ಭರವಸೆ ನೀಡಿದ್ದಾರೆ. 

Karnataka Districts Aug 11, 2019, 12:26 PM IST

sriramulu plays kabaddi while karnataka facing severe flood public express angersriramulu plays kabaddi while karnataka facing severe flood public express anger
Video Icon

ರೇಣುಕಾಚಾರ್ಯ ತೆಪ್ಪದ ನಾಟಕ; ಶ್ರೀರಾಮುಲು ಕಬಡ್ಡಿ ಆಟ; ಸಾರ್ಥಕವಾಯ್ತು ಶಾಸಕರೇ!

ಒಂದು ಕಡೆ ಮಹಾಪ್ರವಾಹಕ್ಕೆ ಜನ ತತ್ತರಿಸಿ ಹೋಗುತ್ತಿದ್ದಾರೆ. ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹೀಗಿರುವಾಗ ಶಾಸಕ ಶ್ರೀರಾಮುಲು ಕಬಡ್ಡಿ ಆಡಿ ಪಂದ್ಯಕ್ಕೆ ಚಾಲನೆ ನೀಡಿದ್ದಾರೆ. ಬೆಳಿಗ್ಗೆ ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಮನವಿ. ಮಧ್ಯಾಹ್ನ ಕಬಡ್ಡಿ ಆಟದಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ನೆರೆ ಪರಿಸ್ಥಿತಿಯಲ್ಲೂ ಕಬಡ್ಡಿ ಆಟವಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.

News Aug 11, 2019, 12:10 PM IST

Gadaga resident Rajkumar talks about Karnataka Flood attackGadaga resident Rajkumar talks about Karnataka Flood attack

'ಹೊಳೆ ಆಲೂರಲ್ಲಿ ಊರೇ ಇಲ್ಲ, ಹೊಳೆ ಮಾತ್ರ'!

ಕುಸಿದ ಮನೆಗಳು, ಜರಿದ ಗುಡ್ಡಗಳು, ಮುಳುಗಿದ ತೋಟಗಳು, ನೆಲವೆಲ್ಲ ಸಪಾಟಾದಂತೆ ಎಲ್ಲೆಲ್ಲೂ ಬರೀ ಕೆಂಪು ಕೆಂಪು ನೀರು. ಮಳೆಯ ವಿರುದ್ಧ ಈಜಲು ಹೊರಟ ನೆಲದ ತೋಳು ಕುಸಿದಿದೆ. ಇಂಥ ಜಲಪ್ರಳಯದ ಹೊತ್ತಲ್ಲೂ ಮತ್ತೊಬ್ಬರಿಗೆ ನೆರವಾಗುತ್ತಾ, ಮಳೆಯನ್ನೂ ಲೆಕ್ಕಿಸದೇ ಜೀವನ್ಮರಣದ ನಡುವೆ ಹೋರಾಡುತ್ತಾ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಜಾನುವಾರುಗಳನ್ನು ರಕ್ಷಿಸುತ್ತಾ, ಮಳೆಯಲ್ಲಿ ನಡುಗುವ ಮಕ್ಕಳ ನೆತ್ತಿಯೊರೆಸುತ್ತಾ ಮಾತೃರೂಪಿ ಕೈಯೊಂದು ಎಲ್ಲವನ್ನೂ ಸಲಹುತ್ತಿದೆ.

Karnataka Districts Aug 11, 2019, 12:02 PM IST

KSCA Navule Stadium submerged As Heavy rain lashes in ShivamoggaKSCA Navule Stadium submerged As Heavy rain lashes in Shivamogga

ಶಿವಮೊಗ್ಗ: ನವುಲೆ ಕ್ರೀಡಾಂಗಣ ಸಂಪೂರ್ಣ ಜಲಾವೃತ

ಜಲಸಂಪನ್ಮೂಲ ಮೂಲವಾಗಿದ್ದ ಕೆರೆಯನ್ನು ಕ್ರಿಡಾಂಗಣವಾಗಿ ಪರಿವರ್ತಿಸಲಾಯಿತು. ಆದರೆ ಈಗ ಬಿರುಸಾದ ಮಳೆ ಸುರಿದ ಬೆನ್ನಲ್ಲೇ ಕೆರೆ ತನ್ನ ಸ್ಥಾನವನ್ನು ತುಂಬಿಕೊಂಡಿದೆ. ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ಸಂಪೂರ್ಣ ಮುಳುಗಡೆಯಾಗಿ ಮತ್ತೆ ಕೆರೆಯಾಗಿ ಪರಿವರ್ತನೆಯಾಗಿದೆ.

Karnataka Districts Aug 11, 2019, 11:59 AM IST

Snana Gatta Collapsed in Dharmasthala Due To Heavy RainSnana Gatta Collapsed in Dharmasthala Due To Heavy Rain

ನೇತ್ರಾವತಿ ಪ್ರವಾಹಕ್ಕೆ ಕೊಚ್ಚಿಹೋದ ಧರ್ಮಸ್ಥಳದ ಸ್ನಾನಘಟ್ಟ

ದಕ್ಷಿಣ ಕನ್ನಡದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೇತ್ರಾವತಿ ಉಕ್ಕಿ ಹರಿಯುತ್ತಿದ್ದಾಳೆ. ಇದರಿಂದಾಗಿ ಲಕ್ಷಾಂತರ ಭಕ್ತರು ನಿತ್ಯ ಸ್ನಾನ ಮಾಡುತ್ತಿದ್ದ ಧರ್ಮಸ್ಥಳದ ಸ್ನಾನಘಟ್ಟ ಕೊಚ್ಚಿ ಹೋಗಿದೆ. 

Karnataka Districts Aug 11, 2019, 11:40 AM IST

Health camp in shivamogga for Flood victimsHealth camp in shivamogga for Flood victims

ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಆರೋಗ್ಯ ಶಿಬಿರ

ಜಿಲ್ಲೆಯಲ್ಲಿ ನೆರೆಯಾಗಿದ್ದು, ಈಗ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ಅಲ್ಲಲ್ಲಿ ನೀರು ನಿಂತು, ಕುಡಿಯುವುದಕ್ಕೂ ಸ್ವಚ್ಛ ನೀರಿನಲ್ಲದೆ ರೋಗಗಳು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಜನರ ಆರೋಗ್ಯ ತಪಾಸಣೆ ಮಾಡಲು ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.  ಸೊರಬ ರೋಟರಿ ಸಂಸ್ಥೆ ಹಾಗೂ ಸೊರಬ ತಾಲೂಕು ಔಷಧವ್ಯಾಪಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧ ವಿತರಣಾ ನಡೆಯಲಿದೆ.

Karnataka Districts Aug 11, 2019, 11:33 AM IST