ಶಿವಮೊಗ್ಗ: ತ್ಯಾಗರ್ತಿ ಗ್ರಾಮ ಸಂಪೂರ್ಣ ಜಲಾವೃತ

ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮ ಜಲಾವೃತವಾಗಿದೆ. ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಮಳೆಯಿಂದ ಜಲಾವೃತವಾದ 5 ಕುಟುಂಬಗಳ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಊಟ ತಿಂಡಿಯ ವ್ಯವಸ್ಥೆ ಕಲ್ಪಿಸಲಾಗಿದ್ದು ಪಂಚಾಯ್ತಿ ಪಿಡಿಒ ಹಾಗೂ ಗ್ರಾಮಲೆಕ್ಕಿಗರು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಪರಿಹಾರ ಕಾರ್ಯಕೈಗೊಂಡಿದ್ದಾರೆ.

Thyagarthi Village submerged as Heavy Rain lashes in Shivamogga

ಶಿವಮೊಗ್ಗ(ಆ.11): ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಗುತ್ಯಮ್ಮ ಎಂಬುವವರ ಮನೆ ಕುಸಿದಿದೆ. ಶಿವಪ್ಪ, ಲಕ್ಷ್ಮಮ್ಮ, ಕೋಲುಗುಣಸೆ ಎಲ್ಲಮ್ಮ, ಮಾರ್ಯಪ್ಪ, ಮಂಜಪ್ಪ, ಸೀಗೆಮಟ್ಟಿ ಹುಚ್ಚರಾಯಪ್ಪ, ಗಣೇಶ, ಇವರ ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿರುವ ದಿನಸಿ ಹಾಗೂ ದಿನೋಪಯೋಗಿ ವಸ್ತುಗಳು ನೀರಿನಿಂದ ತೋಯ್ದು ಹಾನಿಯಾಗಿದೆ.

ಸರ್ಕಾರಿ ವಿದ್ಯಾರ್ಥಿನಿಲಯದಲ್ಲಿ ಮಳೆಯಿಂದ ಜಲಾವೃತವಾದ 5 ಕುಟುಂಬಗಳ ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಊಟ ತಿಂಡಿಯ ವ್ಯವಸ್ಥೆ ಕಲ್ಪಿಸಲಾಗಿದ್ದು ಪಂಚಾಯ್ತಿ ಪಿಡಿಒ ಹಾಗೂ ಗ್ರಾಮಲೆಕ್ಕಿಗರು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಪರಿಹಾರ ಕಾರ್ಯಕೈಗೊಂಡಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, 'ಕಳೆದ ಎಂಟು ಹತ್ತು ವರ್ಷಗಳಿಂದ ಈ ಪ್ರಮಾಣದ ಮಳೆಯಾಗಿರಲಿಲ್ಲ. ಈ ಭಾರಿ ಅತಿಯಾದ ಮಳೆಯಿಂದಾಗಿ ತುಂಬಾ ಆಸ್ತಿ ಪಾಸ್ತಿ ಹಾನಿಯುಂಟಾಗಿದೆ. ಈಗಾಗಲೇ ತಾಲೂಕಿಗೆ 1 ಕೋಟಿ ರು. ಬಿಡುಗಡೆಯಾಗಿದೆ ಎಂದು ತಿಳಿದಿ ಬಂದಿದ್ದು, ಸಮರ್ಪಕವಾಗಿ ಪರಿಹಾರ ನೀಡಬೇಕು. ಕೆರೆಕಟ್ಟೆಗಳು ಕೆಲವು ಭಾಗದಲ್ಲಿ ಹಾಳಾಗಿದ್ದು ತಕ್ಷಣ ದುರಸ್ತಿ ಮಾಡಿಸಿ ಕೆಲವು ಪ್ರದೇಶಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಂಡು ಜಲಾವೃತವಾದ ಮನೆಗಳನ್ನು ಸ್ಥಳಾಂತರಿಸಿ ವಸತಿ ವ್ಯವಸ್ಥೆ ಕಲ್ಪಿಸಬೇಕು' ಎಂದು ಹೇಳಿದರು.

ಶಿವಮೊಗ್ಗ: ನವುಲೆ ಕ್ರೀಡಾಂಗಣ ಸಂಪೂರ್ಣ ಜಲಾವೃತ

ತಾಪಂ ಮಾಜಿ ಸದಸ್ಯ, ಗ್ರಾಮಸ್ಥರಿಂದ ಕಾರ್ಯಾಚರಣೆ:

ರಾತ್ರಿ ಧಾರಕಾರ ಸುರಿದ ಮಳೆಯಿಂದಾಗಿ ತಾಪಂ ಮಾಜಿ ಸದಸ್ಯರಾದ ಟಿ.ಕೆ.ಹನುಮಂತಪ್ಪ ಹಾಗೂ ಸ್ಥಳೀಯ ಗ್ರಾಮಸ್ಥರು ರಾತ್ರಿ 12 ಗಂಟೆಯಿಂದ ಬೆಳಗ್ಗಿನ ಜಾವದವರೆಗೂ ಶ್ರಮವಹಿಸಿ ಕೋಲುಗುಣಸೆ ಎಲ್ಲಮ್ಮನ ಮನೆಗೆ ನುಗ್ಗಿದ ನೀರನ್ನು ಹೊರಹಾಕುವಲ್ಲಿ ಯಶಸ್ವಿಯಾದರು. ಜಿಪಂ ಸದಸ್ಯೆ ಅನಿತಾಕುಮಾರಿ, ಗ್ರಾಪಂ ಅಧ್ಯಕ್ಷ ರಾಮಕೃಷ್ಣ, ಸದಸ್ಯರಾದ ಗಿರೀಶ್‌, ಕೆ.ಬಿ ಗಣಪತಿ, ಪಿಡಿಒ ಮಂಜಾನಾಯ್ಕ್, ಗ್ರಾಮಲೆಕ್ಕಿಗರಾದ ಪ್ರಕಾಶ್‌ ಇದ್ದರು.

Latest Videos
Follow Us:
Download App:
  • android
  • ios